ಪಿಕೆಪಿಎಸ್ ನೂತನ ಕಚೇರಿ ಉದ್ಘಾಟನೆ

ಬಾಗಲಕೋಟೆ ತಾಲೂಕಿನ ನಾಯನೇಗಲಿ ಗ್ರಾಮದಲ್ಲಿರುವ ಪಿಕೆಪಿಎಸ್ ನೂತನ ಕಚೇರಿಯನ್ನು ಮಂಗಳವಾರ ಶಾಸಕ ಉಮೇಶ ಮೇಟಿ ಉದ್ಘಾಟಿಸಿದರು. ಚಿತ್ರದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ ಮತ್ತಿತರರು ಇದ್ದರು.
ಬಾಗಲಕೋಟೆ ತಾಲೂಕಿನ ನಾಯನೇಗಲಿ ಗ್ರಾಮದಲ್ಲಿರುವ ಪಿಕೆಪಿಎಸ್ ನೂತನ ಕಚೇರಿಯನ್ನು ಮಂಗಳವಾರ ಶಾಸಕ ಉಮೇಶ ಮೇಟಿ ಉದ್ಘಾಟಿಸಿದರು. ಚಿತ್ರದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಉಮೇಶ ಮೇಟಿ ಹೇಳಿಕೆ
  • ಪಿಕೆಪಿಎಸ್ ನೂತನ ಕಚೇರಿ ಉದ್ಘಾಟನೆ
ಬಾಗಲಕೋಟೆ : ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಉಮೇಶ ಮೇಟಿ ತಿಳಿಸಿದರು.
ತಾಲೂಕಿನ ನಾಯನೇಗಲಿ ಗ್ರಾಮದಲ್ಲಿರುವ ಪಿಕೆಪಿಎಸ್ ಬ್ಯಾಂಕ್‌ನ ನೂತನ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಿಕೆಪಿಎಸ್ ಸಂಸ್ಥೆಯು ರೈತರಿಗೆ ಅಗತ್ಯವಾದ ಸಾಲ ಸೌಲಭ್ಯ, ಕೃಷಿ ಚಟುವಟಿಕೆಗಳಿಗೆ ಬೇಕಾದ ನೆರವು ಹಾಗೂ ವಿವಿಧ ಯೋಜನೆಗಳ ಪ್ರಯೋಜನಗಳನ್ನು ತಲುಪಿಸುವಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಬೇಕು. ಸಂಘದ ಆಡಳಿತ ಮಂಡಳಿ ಮತ್ತು ಅಧ್ಯಕ್ಷರು ಪಾರದರ್ಶಕ ಆಡಳಿತದ ಮೂಲಕ ಸದಸ್ಯರ ವಿಶ್ವಾಸವನ್ನು ಗಳಿಸಿ, ಸಂಘವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.
ರೈತರು ಸಂಘದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ಪ್ರತಿಯೊಬ್ಬರ ಅರ್ಹ ರೈತನಿಗೂ ತಲುಪುವಂತೆ ಸಂಘವು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಿದ್ದಲಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಪಿಕೆಪಿಎಸ್ ಅಧ್ಯಕ್ಷ ಸಂಗಪ್ಪ ಚಲವಾದಿ, ಉಪಾಧ್ಯಕ್ಷ ದುಂಡಪ್ಪ ವಾಲಿಕಾರ, ಸಿಇಒ ಮನೋಹರ ಕೋಟಿ, ನಿರ್ದೇಶಕ ಆರ್.ಎಚ್. ಕುಲಕರ್ಣಿ ಸೇರಿ ಡಾ. ಅಂಗಡಿ, ಹಿರೇಬಸಪ್ಪ ಗೌಡರ, ಪರಶುರಾಮ ಕಟಬರ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net