ಪರಿಶ್ರಮ, ಶ್ರದ್ಧೆ ಸಾಧನೆಯ ಮೆಟ್ಟಿಲುಗಳು

 ಲೋಕಾಪುರ ಪಟ್ಟಣದ ಲೋಕೇಶ್ವರ ಶಿಕ್ಷಣ ಸಂಸ್ಥೆಯ ಆರ್.ಬಿ.ಜಿ. ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳಿಗೆ ಗಣ್ಯರು ಚಾಲನೆ ನೀಡಿದರು. ಡಿ.ಎಂ.ತುಬಾಕಿ, ಸತ್ಯಪ್ಪ ತುಳಸಿಗೇರಿ, ಮಂಜುನಾಥ ಪಾಟೀಲ ಇತರರಿದ್ದರು.
ಲೋಕಾಪುರ ಪಟ್ಟಣದ ಲೋಕೇಶ್ವರ ಶಿಕ್ಷಣ ಸಂಸ್ಥೆಯ ಆರ್.ಬಿ.ಜಿ. ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಠ್ಯೇತರ ಚಟುವಟಿಕೆಗಳಿಗೆ ಗಣ್ಯರು ಚಾಲನೆ ನೀಡಿದರು. ಡಿ.ಎಂ.ತುಬಾಕಿ, ಸತ್ಯಪ್ಪ ತುಳಸಿಗೇರಿ, ಮಂಜುನಾಥ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಚಾರ್ಯ ಡಿ.ಎಂ.ತುಬಾಕಿ ಹೇಳಿಕೆ
  • ಪಠ್ಯೇತರ ಚಟುವಟಿಕೆ ಉದ್ಘಾಟನಾ ಸಮಾರಂಭ
  • ಜೀವನದಲ್ಲಿ ಅನೇಕ ತಿರುವುಗಳು ಸಹಜವಾಗಿ ಬರುತ್ತವೆ. ವಿದ್ಯಾರ್ಥಿಗಳು ಅವುಗಳನ್ನು ಸವಾಲಾಗಿ ಸ್ವೀಕರಿಸಬೇಕು
ಲೋಕಾಪುರ: ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸುತ್ತಾರೆ ಎಂದು ನಿವೃತ್ತ ಪ್ರಾಚಾರ್ಯ ಡಿ.ಎಂ.ತುಬಾಕಿ ಹೇಳಿದರು.
ಪಟ್ಟಣದ ಲೋಕೇಶ್ವರ ಶಿಕ್ಷಣ ಸಮಿತಿಯ ಆರ್.ಬಿ.ಜಿ.ಪ್ರೌಢ ಶಾಲೆಯ 2026-27 ನೇ ಸಾಲಿನ ಪಠ್ಯೇತರ ಚಟುವಟಿಕೆಯ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವನದಲ್ಲಿ ಅನೇಕ ತಿರುವುಗಳು ಸಹಜವಾಗಿ ಬರುತ್ತವೆ. ವಿದ್ಯಾರ್ಥಿಗಳು ಅವುಗಳನ್ನು ಸವಾಲಾಗಿ ಸ್ವೀಕರಿಸಬೇಕು. ಪರಿಶ್ರಮ, ಶ್ರದ್ಧೆ, ಕ್ರಿಯಾಶೀಲತೆಯ ಮೂಲಕ ಸಾಧನೆಯ ಮೆಟ್ಟಿಲುಗಳನ್ನು ಹತ್ತಬೇಕು. ಕೇವಲ ಅಂಕಪಟ್ಟಿಗೆ ಅಂಟಿಕೊಳ್ಳದೇ ಉತ್ತಮ ಪ್ರಜೆಗಳಾಗಲು ಗಮನ ಹರಿಸಿ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಉದ್ಯಮಿ ಸತ್ಯಪ್ಪ ತುಳಸಿಗೇರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ ಸೃಜನಶೀಲತೆ ನಾಯಕತ್ವ ಗುಣ ಸಹಕಾರ ಮನೋಭಾವನೆ ಬೆಳೆಯುತ್ತದೆ. ಪಠ್ಯೇತರ ಚಟುವಟಿಕೆಗಳು ನಿಯಮಿತ ಶೈಕ್ಷಣಿಕ ಪಠ್ಯಕ್ರಮದ ಹೊರಗೆ ನಡೆಯುವ ಚಟುವಟಿಕೆಗಳಾಗಿವೆ ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯ ಎಸ್.ಎ್.ನಾಯಕ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ಕ್ರೀಡೆ, ಸಂಗೀತ, ನೃತ್ಯ, ಕಲೆ, ನಾಟಕ ಸ್ಪರ್ಧೇಗಳು ಮಗುವಿನ ಶಿಕ್ಷಣ ಅತ್ಯಗತ್ಯ ಭಾಗವಾಗಿದ್ದು, ಅವು ಶೈಕ್ಷಣಿಕತೆ ಮೀರಿ ವ್ಯಾಪಕ ಶ್ರೇಣೆಯ ಪ್ರಯೋಜನಗಳನ್ನು ನೀಡುತ್ತವೆ ಎಂದರು.
ಎಲ್.ಕೆ.ತಿರಕನ್ನವರ, ದೈಹಿಕ ಶಿಕ್ಷಕ ಎಂ.ವಿ.ಪಾಟೀಲ, ವಿ.ಆರ್.ಪಾಟೀಲ, ಎ.ಬಿ.ಕಳ್ಳೆನ್ನವರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net