

ಪ್ರಮುಖ ಮುಖ್ಯಾಂಶಗಳು
ತಾಲ್ಲೂಕಿನಲ್ಲಿ ಕಳ್ಳತನ, ಸರಗಳವು, ಕಷಿ ಉಪಕರಣ, ಪಂಪ್‌ಸೆಟ್ ಹಾಗೂ ಜಾನುವಾರು ಕಳ್ಳತನ ಸೇರಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಮರ್ಥ ಹಾಗೂ ಸಾಮಾಜಿಕ ಕಳಕಳಿಯುಳ್ಳ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.