ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಸಾವು

ಮಲೀಕಸಾಬ ರಾಜೇಸಾಬ ನದಾಫ್
ಮಲೀಕಸಾಬ ರಾಜೇಸಾಬ ನದಾಫ್
Published on
ಮುಧೋಳ: ನಗರದ ಯಾದವಾಡ ರಸ್ತೆ ಸಮೀಪದ ಬಸರೆಡ್ಡಿ ಆಸ್ಪತ್ರೆ ಬಳಿ ಬೈಪಾಸ್ ಬಳಿ ವೇಗವಾಗಿ ಬಂದ ಬೈಕ್ ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವಿಗೀಡಾದ ಘಟನೆ ಶನಿವಾರ ಸಂಭವಿಸಿದೆ.
ನಗರದ ಕುಂಬಾರಗಲ್ಲಿ ನಿವಾಸಿ, ಖಾಸಗಿ ಶಾಲೆ ನಿವೃತ್ತ ಗುಮಾಸ್ತ ಮಲೀಕಸಾಬ ರಾಜೇಸಾಬ ನದಾ-ï (64) ಅಪಘಾತದಲ್ಲಿ ಮೃತಪಟ್ಟವರು. ಅಪಘಾತ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಪೊಲೀಸರು ಪುತ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net