ಪಿಡಿಒ, ಶಿಕ್ಷಣ ಇಲಾಖೆ ಸಂಯುಕ್ತವಾಗಿ ಕಾರ್ಯನಿರ್ವಹಿಸಿ

 ಬಾದಾಮಿಯ ತಾ.ಪಂ ಸಭಾಭವನದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಕೆಡಿಪಿ ಪ್ರಗತಿ ಕುರಿತು ಚರ್ಚಿಸಿದರು. ಬಿಇಒ ಕೇಶವ ಪೆಟ್ಲೂರ, ಕಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ, ಅಧಿಕಾರಿ ಬಾಲನಗೌಡ ಪಾಟೀಲ ಇತರರಿದ್ದರು.
ಬಾದಾಮಿಯ ತಾ.ಪಂ ಸಭಾಭವನದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಕೆಡಿಪಿ ಪ್ರಗತಿ ಕುರಿತು ಚರ್ಚಿಸಿದರು. ಬಿಇಒ ಕೇಶವ ಪೆಟ್ಲೂರ, ಕಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ, ಅಧಿಕಾರಿ ಬಾಲನಗೌಡ ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಭೀಮಸೇನ ಚಿಮ್ಮನಕಟ್ಟಿ ಸೂಚನೆ
  • ಕೆಡಿಪಿ ತ್ರೈಮಾಸಿಕ ಸಭೆ
  • ಜೂನ್ 25ರೊಳಗೆ ಹಕ್ಕುಪತ್ರ ವಿತರಣೆ
ಬಾದಾಮಿ: ತಾಲೂಕಿನ ಕೆಲವು ಇಲಾಖೆಗಳಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಂದ ಸಾರ್ವಜನಿಕ ಕೆಲಸಗಳಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಶೀಘ್ರವೇ ವರ್ಗಾಯಿಸಿ ಆಡಳಿತ ಕಾರ್ಯಕ್ಕೆ ವೇಗ ನೀಡಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ತಾ.ಪಂ ಸಭಾಭವನದಲ್ಲಿ ಸೋಮವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಭೆಗೆ ಗೈರಾಗಿದ್ದ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳಿಗೆ ನೋಟಿಸ್ ನೀಡಿ ಸ್ಪಷ್ಟೀಕರಣ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ ಗೃಹ ಮತ್ತು ಕಾಂಪೌಂಡ್ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಲು ಪಿಡಿಒ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಸೂಚಿಸಿದರು.
ತಾಲೂಕಿನಲ್ಲಿ ಜೆ.ಜೆ.ಎಂ. ಯೋಜನೆಯಡಿ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ಸಭೆಯಲ್ಲಿ ಸದಸ್ಯರು ದೂರಿದಾಗ ಈ ಬಗ್ಗೆ ಅಧಿಕಾರಿ ನವೀನ್ ಹುಚರೆಡ್ಡಿ ನೀಡಿದ ಮಾಹಿತಿ ಬಗ್ಗೆ ಶಾಸಕರು ಸುದೀರ್ಘ ಚರ್ಚೆ ನಡೆಸಿದರು.
ತಾಲೂಕಿನ ಹೊಸೂರು ವ್ಯಾಪ್ತಿಯ ಗಿಡ್ಡನಾಯಕನಾಳ, ಹಣಾಪುರ, ರಾಧಾಪುರ ಹಾಗೂ ತೋಗುಣಸಿ ಕಂದಾಯ ಗ್ರಾಮಗಳ ಲಾನುಭವಿಗಳಿಗೆ ಜೂನ್ 25ರೊಳಗೆ ಹಕ್ಕುಪತ್ರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಾಸಾಶನ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಲಾನುಭವಿಗಳ ಹೆಸರಿಗೆ ತಕ್ಷಣ ಮಂಜೂರು ಮಾಡುವಂತೆ ನಿರ್ದೇಶಿಸಿದರು.
ಸಾರಿಗೆ, ಪಶುವೈದ್ಯಕೀಯ, ಪುರಸಭೆ, ಸಣ್ಣ ನೀರಾವರಿ ಸೇರಿ ವಿವಿಧ ಇಲಾಖೆಗಳ ಪ್ರಗತಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.
ಹಾಲು ಒಕ್ಕೂಟದ ನಿರ್ದೇಶಕ ಈರನಗೌಡ ಕೆರಿಗೌಡರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಂ.ಬುದಿಹಾಳ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಇತರರು ಭಾಗವಹಿಸಿದ್ದರು.

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ

ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಸದಸ್ಯರ ದೂರಿನ ಹಿನ್ನೆಲೆ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು. ಅಗತ್ಯವಿದ್ದರೆ ಕಪ್ಪುಪಟ್ಟಿಗೆ ಸೇರಿಸಿ ಪ್ರಕರಣ ದಾಖಲಿಸುವಂತೆ ಹೇಳಿದರು.

ಶಿಕ್ಷಣ ಮತ್ತು ಮೂಲ ಸೌಕರ್ಯ

ತಾಲೂಕಿನ ಎಲ್ಲಾ ಶಾಲೆಗಳಿಗೆ ಪಠ್ಯಪುಸ್ತಕಗಳ ವಿತರಣೆ ಪೂರ್ಣಗೊಂಡಿದ್ದು, ಮಾರಾಟ ಪುಸ್ತಕಗಳಲ್ಲಿ ಶೇ.20 ಮಾತ್ರ ವಿತರಿಸಲಾಗಿದೆ. ಶೂ ಹಾಗೂ ಸಮವಸ್ತ್ರಗಳು ಎರಡು-ಮೂರು ದಿನಗಳಲ್ಲಿ ಬಂದು ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಬಿಇಒ ಕೇಶವ ಪೆಟ್ಲೂರ ಮಾಹಿತಿ ನೀಡಿದರು.

ಕಷಿ ಇಲಾಖೆ ವರದಿ

ಈ ಬಾರಿ ಹೆಚ್ಚುವರಿ ಮಳೆಯ ಹಿನ್ನೆಲೆಯಲ್ಲಿ ರೈತರು ಬಿತ್ತನೆಗೆ ಸಿದ್ಧರಾಗಿದ್ದು, ಬೀಜ ಹಾಗೂ ಗೊಬ್ಬರದ ಸಮರ್ಪಕ ಸಂಗ್ರಹವಿದೆ ಎಂದು ಕಷಿ ಇಲಾಖೆ ತಿಳಿಸಿದೆ. ಆದರೆ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ರೈತರಲ್ಲಿ ಜಾಗತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ತೋಟಗಾರಿಕಾ ಬೆಳೆ ಹಾನಿ ಕುರಿತು ವರದಿ ಸಲ್ಲಿಸಲಾಗಿದ್ದು, ಕಷಿ ಹೊಂಡಗಳಿಗೆ ಸಬ್ಸಿಡಿ ಯೋಜನೆಯಡಿ ನೆರವು ನೀಡಲಾಗುತ್ತಿದೆ ಎಂದು ಕಷಿ ಸಹಾಯಕ ನಿರ್ದೇಶಕ ಅಶೋಕ ತಿರಕನ್ನವರ ಮಾಹಿತಿ ನೀಡಿದರು.
32 ಕಷಿ ಹೊಂಡಗಳು ಬಂದಿದ್ದು, ಅರ್ಹರಿಗೆ ತಲಾ ಎರಡು ಲಕ್ಷ ರೂ. ವರೆಗೆ ರಿಯಾಯಿತಿ ದೊರಕಲಿದ್ದು, ಇದಕ್ಕೆ ಬೇಕಾದ ಪರಿಕರಗಳನ್ನು ಇಲಾಖೆಯಿಂದ ಕೊಡಲಾಗುವುದು. 259 ಹೆಕ್ಟೇರ್ ಜಮೀನಿನಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, ಸರ್ಕಾರಕ್ಕೆ ವರದಿ ಮಾಡಲಾಗಿದೆ ಎಂದು ಅಧಿಕಾರಿ ಬಾಲನಗೌಡ ಪಾಟೀಲ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net