ಗೋಶಾಲೆಯಲ್ಲಿ ಪ್ರವಚನ ಆಯೋಜನೆ ಶ್ಲಾಘನೀಯ

ಗುಳೇದಗುಡ್ಡದ ಗುರು ಒಪ್ಪತ್ತೇಶ್ವರ ಮಠದ ಗೋಶಾಲೆ ಟ್ರಸ್ಟ್ ವತಿಯಿಂದ ಅಧಿಕ ಮಾಸದ ನಿಮಿತ್ತ ನಡೆದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ 14ನೇ ಒಪ್ಪತ್ತೇಶ್ವರ ಮಹಾಸ್ವಾಮಿಗಳ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು. ಮಹಿಳೆಯರು ಇದ್ದರು.
ಗುಳೇದಗುಡ್ಡದ ಗುರು ಒಪ್ಪತ್ತೇಶ್ವರ ಮಠದ ಗೋಶಾಲೆ ಟ್ರಸ್ಟ್ ವತಿಯಿಂದ ಅಧಿಕ ಮಾಸದ ನಿಮಿತ್ತ ನಡೆದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ 14ನೇ ಒಪ್ಪತ್ತೇಶ್ವರ ಮಹಾಸ್ವಾಮಿಗಳ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಿತು. ಮಹಿಳೆಯರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೊಳೆಹುಚ್ಚೇಶ್ವರ ಸ್ವಾಮಿಗಳ ಹೇಳಿಕೆ
  • 14ನೇ ಒಪ್ಪತ್ತೇಶ್ವರ ಮಹಾಸ್ವಾಮಿಗಳ ತೊಟ್ಟಿಲೋತ್ಸವ
ಗುಳೇದಗುಡ್ಡ: ಪಟ್ಟಣದ ಗುರು ಒಪ್ಪತ್ತೇಶ್ವರ ಮಠದ ಗೋಶಾಲೆ ಟ್ರಸ್ಟ್ ವತಿಯಿಂದ ಅಧಿಕ ಮಾಸದ ಅಂಗವಾಗಿ ಆಯೋಜಿಸಿದ ಮೌನಾನುಷ್ಠಾನ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ 14ನೇ ಒಪ್ಪತ್ತೇಶ್ವರ ಮಹಾಸ್ವಾಮಿಗಳ ತೊಟ್ಟಿಲೋತ್ಸವ ಭಕ್ತಿಭಾವದಿಂದ ನೆರವೇರಿತು.
ಕೋಟೆಕಲ್ ಗ್ರಾಮದ ಹೊಳೆಹುಚ್ಚೇಶ್ವರ ಮಠದಿಂದ ಗ್ರಾಮಸ್ಥರು ತೊಟ್ಟಿಲನ್ನು ಮೆರವಣಿಗೆಯ ಮೂಲಕ ಒಪ್ಪತ್ತೇಶ್ವರ ಗೋಶಾಲೆಗೆ ತರಲಾಗಿದ್ದು, ಧಾರ್ಮಿಕ ವಾತಾವರಣ ನಿರ್ಮಾಣವಾಯಿತು.
ಹೊಳೆಹುಚ್ಚೇಶ್ವರ ಸ್ವಾಮಿಗಳು ಮಾತನಾಡಿ, ಅಧಿಕಮಾಸದ ಮಹತ್ವವನ್ನು ವಿವರಿಸಿ, ಗೋಶಾಲೆಯಲ್ಲಿ ಪ್ರವಚನ ಆಯೋಜನೆ ಶ್ಲಾಘನೀಯ ಕಾರ್ಯ ಎಂದರು. ಅಮರೇಶ್ವರ ಬ್ರಹನ್ಮಠದ ಡಾ. ನೀಲಕಂಠ ಸ್ವಾಮಿಗಳು ಸಾನ್ನಿಧ್ಯ ವಹಿಸಿದರು. ಪೀಠಾಧ್ಯಕ್ಷ ಒಪ್ಪತ್ತೇಶ್ವರ ಮಹಾಸ್ವಾಮೀಗಳು ಪ್ರವಚನ ನೀಡಿದರು.
ಕೋಟೆಕಲ್ ಗ್ರಾಮದ ಮಹಿಳಾ ಒಕ್ಕೂಟ ಹಾಗೂ ಅಕ್ಕನ ಬಳಗದ ಸದಸ್ಯರು ತೊಟ್ಟಿಲು ಸೇವೆ ಸಲ್ಲಿಸಿದರು. ಶ್ಯಾಮಣ್ಣ ಪತ್ತಾರ ಮತ್ತು ಬಸವರಾಜ ಅಬ್ಬಿಗೇರಿ ಅವರಿಂದ ಸಂಗೀತ ಸೇವೆ ಜರುಗಿತು.
ಸಂಗಪ್ಪ ಜವಳಿ, ರಂಗಪ್ಪ ಅರಮನ್ನವರ, ನೀಲಪ್ಪ ಅಬಕಾರಿ, ಸಂಗಪ್ಪ ಆಲೂರ, ಮುತ್ತಪ್ಪ ಅಬಕಾರಿ, ಮಹಾಂತೇಶ ಹಿರೇಮಠ, ಹನಮಂತ ವಾರಿ, ಶರಣಪ್ಪ ಚಿಕ್ಕನರಗುಂದ, ಯಲಗೂರೇಶ ಅರಮನಿ, ಹುಚ್ಚೇಶ ಕಮತರ, ಅಶೊಕ ರೋಜಿ, ಹುಚ್ಚಪ್ಪ ಅಬಕಾರಿ,ಪರಸಪ್ಪ ಆಲೂರ, ಬೂದಿಹಾಳಮಠ, ಯಲಗುರದಪ್ಪ ತೊಗಲಂಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net