ಒಂದುವರೆ ವರ್ಷದ ಮಗು ಸಾವು

ನೀರಿನ ಟ್ಯಾಂಕಿನಲ್ಲಿ ಬಿದ್ದು ಸಾವನ್ನಪ್ಪಿರುವ ೧೮ ತಿಂಗಳು ಮಗು ಅಮೀನಾ.
ನೀರಿನ ಟ್ಯಾಂಕಿನಲ್ಲಿ ಬಿದ್ದು ಸಾವನ್ನಪ್ಪಿರುವ ೧೮ ತಿಂಗಳು ಮಗು ಅಮೀನಾ.
Published on
ಬಾಗಲಕೋಟೆ: ಸಾವನ್ನಪ್ಪಿರುವ ಒಂದುವರೆ ವರ್ಷದ ಮಗುವನ್ನು ಉಪ್ಪಿನಲ್ಲಿ ಮುಳುಗಿಸಿಟ್ಟರೆ ಬದುಕಿ ಬರುತ್ತದೆ ಎಂದು ಪೋಷಕರು ಈ ವಿಚಿತ್ರ ಪ್ರಯತ್ನ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ.
ನವನಗರದ ಸೆಕ್ಟರ್ ನಂಬರ್ ೩೮ರಲ್ಲಿ ಅಮೀನಾ ಪಠಾಣ್ ಎನ್ನುವ ೧೮ ತಿಂಗಳು ಹೆಣ್ಣು ಮಗು ಸೋಮವಾರ ಆಡುತ್ತ ಹೋಗಿ ತನ್ನ ಎದುರು ಮನೆಯ ನೆಲ ಟ್ಯಾಂಕಿನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದೆ.
ಮನೆ ಎದುರು ಆಡುತ್ತಿದ್ದ ಮಗು ಕಾಣಿಸದೇ ಇದ್ದಿದ್ದರಿಂದ ಗಾಬರಿಗೊಂಡು ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ನವನಗರ ಠಾಣೆ ಪೊಲೀಸರು ಮತ್ತು ಕುಟುಂಬದವರು ಮಗು ಹುಡಕಾಟ ನಡೆಸಿದ್ದಾರೆ.
ಬಳಿಕ ಮನೆ ಎದುರಿನ ನೀರಿನ ಟ್ಯಾಂಕಿನಲ್ಲಿ ಕಾಲು ಜಾರಿ ಮುಳುಗಿರುವುದು ಕಂಡು ಬಂದಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಾದರೂ ಮಗು ಸಾವನ್ನಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲಿಂದ ಮಗುವನ್ನು ತೆಗೆದುಕೊಂಡು ಜಿಲ್ಲಾ ಅಸ್ಪತ್ರೆಗೆ ತೆರಳಿದ್ದಾರೆ.
ಮಗುವಿನ ಮನೆಯಲ್ಲಿ ಹಿರಿಕರೊಬ್ಬರು ಮೌಲ್ವಿ ಇದ್ದು, ಅವರು ಸಾಮಾಜಿಕ ಜಾಲತಾಣದಲ್ಲಿ ಮಗುವನ್ನು ಉಪ್ಪಿನಲ್ಲಿ ಮುಳುಗಿಸಿಟ್ಟರೆ ಬದುಕಿ ಬರುತ್ತದೆ ಎಂದು ನೋಡಿದ್ದರಂತೆ. ಹೀಗಾಗಿ ಆಸ್ಪತ್ರೆಯಲ್ಲಿ ಮಗುವಿಗೆ ಮುಖ ಹೊರತುಪಡಿಸಿ ದೇಹವನ್ನು ಸಂಪೂರ್ಣವಾಗಿ ಉಪ್ಪಿನಿಂದ ಮುಚ್ಚಿದ್ದಾರೆ. ಜೊತೆಗೆ ಮಗುವಿನ ಕಿವಿಯ ಹತ್ತಿರ ಮೊಬೈಲ್ ಇಟ್ಟು ಧಾರ್ಮಿಕ ಗೀತೆ ಹಚ್ಚಿದ್ದಾರೆ. ಮಗುವಿನ ಜೀವ ಹೋಗಿದ್ದರಿಂದ ಯಾವುದೂ ಪ್ರಯೋಜನವಾಗಿಲ್ಲ. ಬಳಿಕ ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಗು ಆಕಸ್ಮಿಕವಾಗಿ ಸಾವನ್ನಪ್ಪಿರುವ ಬಗ್ಗೆ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net