ಬಾಗಲಕೋಟೆ: ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯದಿಂದ 2025-26ನೇ ಸಾಲಿನ ವಿಶೇಷ ಸಂಗೀತ ನೃತ್ಯ ಹಾಗೂ ತಾಳವಾದ್ಯಗಳ ಪರೀಕ್ಷೆಗಳು ಸೋಮವಾರ ನಡೆದವು.
ಭರತನಾಟ್ಯ ಪರೀಕ್ಷೆಗಳಲ್ಲಿ ಜ್ಯೂನಿಯರ್ 50, ಸೀನಿಯರ್ 16 ಅಭ್ಯರ್ಥಿಗಳು ಭಾಗವಹಿಸಿದ್ದರು, ಎಲ್ಲ ಪರೀಕ್ಷಾರ್ಥಿಗಳು ಬಣ್ಣ ಬಣ್ಣದ ಭರತನಾಟ್ಯ ಉಡುಪಿನಲ್ಲಿ ಎಲ್ಲರ ಗಮನ ಸೆಳೆದರು. ಮಂಗಳವಾರ ಹಿಂದೂಸ್ತಾನಿ ಗಾಯನ, ತಾಳವಾದ್ಯಗಳ ಪರಿಕ್ಷೇಗಳು ಜರುಗಲಿವೆ.