ನಿರಾಣಿ ಪರಿವಾರ ಸಮಾಜಕ್ಕೆ ಮಾದರಿ

ಬೀಳಗಿ ತಾಲೂಕಿನ ಇನಾಂ ಹಂಚಿನಾಳ ಲಿಂ. ನಿಂಗಪ್ಪಜ್ಜ ಬಸಪ್ಪ ನಿರಾಣಿ ಅವರ ಕಂಚಿನ ಪುತ್ಥಳಿ ಅನಾವರಣ ಹಾಗೂ ಲಿಂ. ಮಾತೋಶ್ರೀ ಸುಶೀಲಾತಾಯಿ ನಿರಾಣಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಉದ್ಘಾಟಿಸಿದರು. ಮಾಜಿ ಸಚಿವ ಗೋವಿಂದ ಕಾರಜೋಳ, ಡಾ. ಮುರುಗೇಶ ನಿರಾಣಿ ಇದ್ದರು.
ಬೀಳಗಿ ತಾಲೂಕಿನ ಇನಾಂ ಹಂಚಿನಾಳ ಲಿಂ. ನಿಂಗಪ್ಪಜ್ಜ ಬಸಪ್ಪ ನಿರಾಣಿ ಅವರ ಕಂಚಿನ ಪುತ್ಥಳಿ ಅನಾವರಣ ಹಾಗೂ ಲಿಂ. ಮಾತೋಶ್ರೀ ಸುಶೀಲಾತಾಯಿ ನಿರಾಣಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಉದ್ಘಾಟಿಸಿದರು. ಮಾಜಿ ಸಚಿವ ಗೋವಿಂದ ಕಾರಜೋಳ, ಡಾ. ಮುರುಗೇಶ ನಿರಾಣಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿಕೆ
  • ನಿಂಗಪ್ಪಜ್ಜ ಬಸಪ್ಪ ನಿರಾಣಿಯವರ ಕಂಚಿನ ಪುತ್ಥಳಿ ಅನಾವರಣ
  • ಕಾಯಕ ಮಾಡುವ ವ್ಯಕ್ತಿಗೆ ಯಾವುದೇ ಕೊರತೆಯಾಗುವುದಿಲ್ಲ
ಬೀಳಗಿ : ಕಾಯಕ ಮಾಡುವ ವ್ಯಕ್ತಿಗೆ ಯಾವುದೇ ಕೊರತೆಯಾಗುವುದಿಲ್ಲ. ಅಂತಹ ಕಾಯಕವನ್ನೇ ಜೀವನದ ಬದುಕನ್ನಾಗಿ ಮಾಡಿಕೊಂಡ ನಿರಾಣಿ ಪರಿವಾರದವರು ಇವತ್ತು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ತಾಲೂಕಿನ ಇನಾಂ ಹಂಚಿನಾಳ ಗ್ರಾಮದಲ್ಲಿ ಗುರುವಾರ ನಿರಾಣಿ ಪರಿವಾರದ ತಪೋವನದಲ್ಲಿ ಲಿಂ. ನಿಂಗಪ್ಪಜ್ಜ ಬಸಪ್ಪ ನಿರಾಣಿಯವರ ಕಂಚಿನ ಪುತ್ಥಳಿ ಅನಾವರಣ ಹಾಗೂ ಲಿಂ. ಮಾತೋಶ್ರೀ ಸುಶೀಲಾತಾಯಿ ನಿರಾಣಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿಂಗಪ್ಪಜ್ಜನವರ ಕೊಡುಗೆ ಅಪಾರವಾಗಿದೆ ಇದರಿಂದ ನಿರಾಣಿ ಪರಿವಾರದವರು ತಂದೆ-ತಾಯಿ, ಬಂಧು-ಬಳಗ ಹಾಗೂ ಗುರು-ಹಿರಿಯರಿಗೆ ಗೌರವಿಸುವುದಲ್ಲದೇ ಸಮಾಜ ಮೆಚ್ಚುವಂತೆ ಬದುಕಿ ಎಲ್ಲರಿಗೂ ಆದರ್ಶ ಪ್ರಾಯರಾಗಿದ್ದಾರೆ. ಜಗತ್ತಿನಲ್ಲಿ ನಿಜವಾದ ಕಾಯಕ ಮಾಡುವ ಭಕ್ತರ‌್ಯಾರು ಎಂದರೆ ಕಾಯಕ ಮಾಡುವವರು. ಕೃಷಿ ಕಾಯಕ ಮಾಡುವವರು ಸದ್ಭಕ್ತರು. ಸರಳತೆ, ಸಜ್ಜನಿಕೆ, ಸಂಸ್ಕಾರವಂತಿಕೆಗೆ ಹೆಸರಾದ ನಿರಾಣಿ ಅವರ ಕುಟುಂಬ ಲಕ್ಷಾಂತರ ಜನರ ಬಾಳಿನ ಬೆಳಕಾಗಿದೆ ಎಂದು ಹೇಳಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ನಿಂಗಪ್ಪಜ್ಜ ನಿರಾಣಿ ಅವರ ಸಾಧನೆ ಒಂದು ದಂತಕಥೆ ಎಂದರಲ್ಲದೇ ಮಾಜಿ ಸಚಿವ ಮುರುಗೇಶ ನಿರಾಣಿ ಕರ್ನಾಟಕ ರಾಜ್ಯದ ಅಂಬಾನಿ, ಅದಾನಿ ಇದ್ದಂತೆ ಭವಿಷ್ಯದಲ್ಲಿ ರಾಷ್ಟ್ರಮಟ್ಟದಲ್ಲಿ ಅಂಬಾನಿ, ಅದಾನಿ ನಿರಾಣಿ ಆಗಲಿ ಎಂದರು.
ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀಗಳು, ವೀರ ಸಂಗಮೇಶ್ವರ ಶ್ರೀಗಳು, ವಿಶ್ವಪ್ರಭು ಶ್ರೀಗಳು, ಕಲ್ಲಿನಾಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಚಿವ ಆರ್.ಬಿ. ತಿಮ್ಮಾಪೂರ, ಮಾಜಿ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ಧೇಶ್ವರ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ದೊಡ್ಡನಗೌಡ ಪಾಟೀಲ, ಎಂ.ಕೆ. ಪಟ್ಟಣಶೆಟ್ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯ ಕುಮಾರ ಸರನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ರುದ್ದಪ್ಪ ನಿರಾಣಿ, ಮಾಜಿ ಸಚಿವ ಡಾ. ಮುರುಗೇಶ ನಿರಾಣಿ ಇದ್ದರು. ಸಂಗಮೇಶ ನಿರಾಣಿ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net