ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ಶಿವಲಿಂಗೇಶ್ವರ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಡಾ ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಮಹಾಂತ ಸ್ವಾಮಿಜಿ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಸಿಂಧೂರ, ಸುರೇಶಗೌಡ ಪಾಟೀಲ, ರವಿ ಶೇಗಾಂವಿ, ಮಹಾಂತೇಶ ಗಟಗೇರಿ, ಶಿವಲಿಂಗಪ್ಪ ಕುಂಬಾರ, ಈರಪ್ಪ ಸಿಂಧೂರ, ಬಸವರಾಜಗೌಡ ಪಾಟೀಲ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ
ಶಿವಲಿಂಗೇಶ್ವರ ಮಠದ ನೂತನ ಶಿಲಾಮಂಟಪ ಹಾಗೂ ಗುರುಭವನ ಉದ್ಘಾಟನೆ
ಶೇಗುಣಿಸಿಯ ಮಹಾಂತ ಸ್ವಾಮೀಜಿ ಹೇಳಿದರು.
ತುಬಚಿ: ಗ್ರಾಮದ ಶಿವಲಿಂಗೇಶ್ವರ ಮಠದ ನೂತನ ಶಿಲಾಮಂಟಪ ಹಾಗೂ ಗುರುಭವನ ಉದ್ಘಾಟನೆ, ಜಾತ್ರಾ ಮಹೋತ್ಸವ ಮಾರ್ಚ್ 20 ರಿಂದ ಏಪ್ರಿಲ್ 3 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶೇಗುಣಿಸಿಯ ಮಹಾಂತ ಸ್ವಾಮೀಜಿ ಹೇಳಿದರು.
ಗ್ರಾಮದ ಶ್ರೀಮಠದದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಠವು ಕೇವಲ ಕಲ್ಲು-ಮಣ್ಣಿನ ಕಟ್ಟಡವಲ್ಲ, ಅದು ಭಕ್ತಿ ಮತ್ತು ಸಂಸ್ಕಾರದ ಕೇಂದ್ರವಾಗಿದೆ. ನೂತನವಾಗಿ ನಿರ್ಮಿಸಲಾದ ಶಿಲಾಮಂಟಪ ಹಾಗೂ ಗುರುಭವನ ಕಟ್ಟಡವು ಲೋಕಾರ್ಪಣೆಯಾಗುತ್ತಿರುವುದು ಹೆಮ್ಮೆಯ ಪಡುವ ಸಂಗತಿ. ಇದಕ್ಕೆ ಸಹಕಾರ ಇರಬೇಕು ಎಂದರು.
ಜಾತ್ರಾ ಮಹೋತ್ಸವವು ಗ್ರಾಮದ ಐಕ್ಯತೆ ಮತ್ತು ಸೌಹಾರ್ದತೆಯ ಪ್ರತೀಕ. ಭಕ್ತರೆಲ್ಲರೂ ಒಗ್ಗೂಡಿ ಈ ಧಾರ್ಮಿಕ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ ಮತ್ತು ಶ್ರದ್ಧಾಭಕ್ತಿಯಿಂದ ನೆರವೇರಿಸಬೇಕು ಎಂದು ಕರೆ ನೀಡಿದರು.
ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಕಾರ್ಯಕ್ರಮಕ್ಕೆ ರಾಜ್ಯದ ಪ್ರಮುಖ ಮಠಾಧೀಶರನ್ನು ಹಾಗೂ ಗಣ್ಯರನ್ನು ಆಹ್ವಾನಿಸುವುದು. ರೂಪುರೇಷ ಸಿದ್ಧಪಡಿಸುವುದು, ದಾಸೋಹ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿ ಎಲ್ಲವು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.