ದೇಶಕ್ಕೆ ನೆಹರು ಕೊಡುಗೆ ಅಪಾರ

 ಇಳಕಲ್ಲದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂ ಜಯಂತಿ ಶುಕ್ರವಾರ ಆಚರಿಸಲಾಯಿತು. ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಮಲ್ಲು ಮಡಿವಾಳರ, ಯಲ್ಲಪ್ಪ ರಾಜಾಪುರ, ಶಬ್ಬೀರ ಭಾಗವಾನ, ಮಹಾಂತೇಶ ಹನಮನಾಳ ಇದ್ದರು.
ಇಳಕಲ್ಲದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರೂ ಜಯಂತಿ ಶುಕ್ರವಾರ ಆಚರಿಸಲಾಯಿತು. ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಮಲ್ಲು ಮಡಿವಾಳರ, ಯಲ್ಲಪ್ಪ ರಾಜಾಪುರ, ಶಬ್ಬೀರ ಭಾಗವಾನ, ಮಹಾಂತೇಶ ಹನಮನಾಳ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಗೌರಮ್ಮ ಕಾಶಪ್ಪನವರ ಹೇಳಿಕೆ
  • ಮಾಜಿ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರು ಜಯಂತಿ
  • ಬಡತನ ನಿರ್ಮೂಲನೆ, ದೇಶದ ಭದ್ರತೆಗಾಗಿ ಅವರು ಕೈಗೊಂಡ ನಿರ್ಣಯಗಳು ಮಾದರಿಯಾಗಿವೆ
ಇಳಕಲ್ಲ: ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರ್‌ಲಾಲ್ ನೆಹರು ಜಯಂತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮಕ್ಕಳ ದಿನಾಚರಣೆ ಶುಕ್ರವಾರ ಆಚರಿಸಲಾಯಿತು.
ನೆಹರು ಅವರ ಭಾವಚಿತ್ರಕ್ಕೆ ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ ಪುಷ್ಪಾರ್ಚನೆಮಾಡಿ ಮಾತನಾಡಿ, ನೆಹರು ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಬಡತನ ನಿರ್ಮೂಲನೆ, ದೇಶದ ಭದ್ರತೆಗಾಗಿ ಅವರು ಕೈಗೊಂಡ ನಿರ್ಣಯಗಳು ಮಾದರಿಯಾಗಿವೆ ಎಂದರು.
ಬ್ರಿಟಿಷರ ದಾಸ್ಯದಿಂದ ದೇಶ ಬಿಡುಗಡೆಗೊಳಿಸಿದ ಬಳಿಕ ಸ್ವಾತಂತ್ರ್ಯ ನಂತರ ಪ್ರಥಮ ಪ್ರಧಾನಿಯಾಗಿ ನೆಹರು ಅವರು ಆಯ್ಕೆಯಾಗಿದ್ದರು. ದೇಶವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ನೆಹರು ಅವರಿಗೆ ಮಕ್ಕಳು ಎಂದರೆ ಪ್ರೀತಿ. ಹೀಗಾಗಿ ಅವರ ಜನ್ಮ ದಿನ ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ನಗರಸಭೆ ಸದಸ್ಯರಾದ ಮಲ್ಲು ಮಡಿವಾಳರ, ಯಲ್ಲಪ್ಪ ರಾಜಾಪುರ, ಶಬ್ಬೀರ ಬಾಗವಾನ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಮಹಾಂತೇಶ ಹನಮನಾಳ, ಶಿವಾನಂದ ಮುಚಖಂಡಿ, ಸುರೇಶ ಬಂಡರಗಲ್ಲ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net