ಶ್ರದ್ಧಾಭಕ್ತಿಯಿಂದ ಮೊಹರಂ ಆಚರಣೆ

 ಲೋಕಾಪುರ ಪಟ್ಟಣದಲ್ಲಿ ಅಲಾಯಿ ದೇವರಿಗೆ ಜ್ಞಾನೇಶ್ವರ ಮಠದ ಬ್ರಹ್ಮಾನಂದ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು.
ಲೋಕಾಪುರ ಪಟ್ಟಣದಲ್ಲಿ ಅಲಾಯಿ ದೇವರಿಗೆ ಜ್ಞಾನೇಶ್ವರ ಮಠದ ಬ್ರಹ್ಮಾನಂದ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬ್ರಹ್ಮಾನಂದ ಶ್ರೀಗಳಿಂದ ಅಲಾಯಿ ದೇವರಿಗೆ ನೈವೇದ್ಯ ಅರ್ಪಣೆ
  • ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಆಚರಿಸಲು ಸಲಹೆ ನೀಡಿದರು.
  • ಮೊಹರಂ ನಿಮಿತ್ತ ಯುವಕರಿಂದ ಲೇಝಿಂ ಉತ್ಸವ ಡೋಲಿ ಪ್ರದರ್ಶನ ಗಮನಸೆಳೆಯಿತು
ಲೋಕಾಪುರ: ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರಿಂದ ಶುಕ್ರವಾರ ಲೇಝಿಮ್, ಡೋಲಿ ಮೆರವಣಿಗೆ ವಿವಿಧ ತಾಳ, ವೇದಗಳೊಂದಿಗೆ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಜ್ಞಾನೇಶ್ವರ ಮಠದ ಬ್ರಹ್ಮಾನಂದ ಶ್ರೀಗಳು ಅಲಾಯಿ ದೇವರಿಗೆ ನೈವೇದ್ಯ ಅರ್ಪಣೆ ಮಾಡಿ, ಪೂಜೆ ಸಲ್ಲಿಸಿದರು. ಎಲ್ಲಾ ದೇವರಿಗೆ ವಿಶೇಷ ಪೂಜೆ ನೇರವೇರಿಸಿ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಆಚರಿಸಲು ಸಲಹೆ ನೀಡಿದರು.
ಪ್ರತಿಷ್ಠಾಪನೆಗೊಂಡ ಡೋಲಿಗಳಿಗೆ ಭಕ್ತರು ಬೆಳಗ್ಗೆಯಿಂದಲೇ ಆಗಮಿಸಿ ಪೂಜೆ ಸಲ್ಲಿಸಿ ಜೊತೆಗೆ ತಾವು ಮನೆಯಲ್ಲಿ ತಯಾರಿಸಿದ ಸಿಹಿ ಪದಾರ್ಥ ಹಾಗೂ ಸಕ್ಕರೆಯನ್ನು ಅಲಾಯಿ ದೇವರಿಗೆ ನೈವೇದ್ಯ ಸಲ್ಲಿಸಿದರು.
ಹಬ್ಬದ ಕೊನೆ ದಿನವಾದ ಶುಕ್ರವಾರ ದೇವರನ್ನು ವಿಸರ್ಜಿಸಲು ಹೊಳೆಗೆ ಹೋಗುವ ಮುಂಚೆ ನಡೆಯುವ ಡೋಲಿ ಉತ್ಸವದಲ್ಲಿ ಸಾವಿರಾರು ಹಿಂದೂ-ಮುಸ್ಲಿಮರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಅಲಾಯಿ ಭಕ್ತರು ದೇವರುಗಳಿಗೆ ಬೆಂಡು, ಬೆತ್ತಾಸು, ಖಾರಿಕ, ಬಾಳೆಹಣ್ಣು ಅರ್ಪಿಸುವುದರ ಮೂಲಕ ಹರಕೆ ತೀರಿಸಿದರು. ಮೊಹರಂ ನಿಮಿತ್ತ ಯುವಕರಿಂದ ಲೇಝಿಂ ಉತ್ಸವ ಡೋಲಿ ಪ್ರದರ್ಶನ ಗಮನಸೆಳೆಯಿತು.
ಪಟ್ಟಣದ ನಾಲ್ಕು ಮಸೀದಿಗಳಲ್ಲಿ ಐದು ದಿನ ಸಂಪ್ರದಾಯದಂತೆ ಡೋಲಿಗಳು, ಹಸನ್-ಹುಸೇನ, ಲಾಲಸಾಬ ಅಲಿ ದೇವರುಗಳನ್ನು ಸ್ಥಾಪಿಸಲಾಗಿತ್ತು. ಡೋಲಿಗೆ ಗಂಧ ರಾತ್ರಿ ಹಾಗೂ ಕತಲ್ ರಾತ್ರಿ ದಿನ ಮುಸ್ಲಿಂ ಹಿಂದೂಗಳು ಸೇರಿ ಹರಕೆ ಸಲ್ಲಿಸಿದರು. ರಾತ್ರಿ ಅಗ್ನಿಕುಂಡಕ್ಕೆ ಹಾಯವುದರೊಂದಿಗೆ ಹೇಳಿಕೆಗಳು ನಡೆದವು. ಸಂಪ್ರದಾಯದಂತೆ ಡೋಲಿಗಳನ್ನು ಹೊಳೆಗೆ ಕಳಿಸುವ ಮೂಲಕ ಮೊಹರಂ ಹಬ್ಬಕ್ಕೆ ತೆರೆ ಬಿದ್ದಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net