ಮಂಗಳವಾರ ಮಧ್ಯರಾತ್ರಿ ಮುಧೋಳ ಕಡೆಯಿಂದ ಜಮಖಂಡಿಗೆ ಬರುತ್ತಿದ್ದ ರೆನಾಲ್ಟ್ ಕಾರಿನಲ್ಲಿ ಅವಘಡ ಸಂಭವಿಸಿದೆ. ಕಾರು ಸಿದ್ದಾಪೂರ ಗ್ರಾಮದ ಬಳಿ ಸಾಗುತ್ತಿದ್ದಾಗ ಹಠಾತ್ತನೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ತಕ್ಷಣವೇ ಗಮನಿಸಿದ ಚಾಲಕ, ಸಮಯಪ್ರಜ್ಞೆ ಮೆರೆದು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾರೆ.