ಪಟ್ಟಣದ ಬಸವೇಶ್ವರ ಅಂತರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ಸಮಾಜ ನಿರ್ಮಾಣ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಐಎಫ್ಎಸ್ ಅಧಿಕಾರಿ ಡಾ. ಸಂಜಯ ಬಗಲಿ ಅವರನ್ನು ಗೌರವಿಸಲಾಯಿತು. ವಿಜಯಲಕ್ಷ್ಮೀ ಕಗಲಗೊಂಬ, ಡಾ. ಸಂತೋಷ ಶೆಟ್ಟರ, ಪರಶುರಾಮ ವನಸಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಐಎಫ್ಎಸ್ ಅಧಿಕಾರಿ ಡಾ. ಸಂಜಯ ಬಗಲಿ ಹೇಳಿಕೆ
ವ್ಯಸನ ಮುಕ್ತ ಸಮಾಜ ನಿರ್ಮಾಣ ಜಾಗೃತಿ ಕಾರ್ಯಕ್ರಮ
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು.
ಲೋಕಾಪುರ:
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು, ಗುರಿಯತ್ತ ನಿರಂತರ ಪರಿಶ್ರಮ ಯಶಸ್ಸಿಗೆ ಮನೋಸ್ಥೈರ್ಯ ಮೂಲಾಧಾರ ಎಂದು ಐಎಫ್ಎಸ್ ಅಧಿಕಾರಿ ಡಾ. ಸಂಜಯ ಬಗಲಿ ಹೇಳಿದರು.
ಪಟ್ಟಣದ ಬಸವೇಶ್ವರ ಅಂತರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ಸಮಾಜ ನಿರ್ಮಾಣ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮೀ ಕಗಲಗೊಂಬ ಮಾತನಾಡಿ, ಮದ್ಯಪಾನ ವ್ಯಸನಗಳು ಆರೋಗ್ಯ ಹಾಗೂ ಕುಟುಂಬದ ನೆಮ್ಮದಿ ಮಾರಕವಾಗುತ್ತವೆ. ವಿದ್ಯಾರ್ಥಿಗಳು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಆರೋಗ್ಯಕರ ಮನಸ್ಸು, ಸದೃಢ ವ್ಯಕ್ತಿತ್ವ ಜೀವನದ ಸಂಪತ್ತು ಎಂದು ಹೇಳಿದರು.
ಡಾ. ಸಂತೋಷ ಶೆಟ್ಟರ, ಪರಶುರಾಮ ವನಸಿ ಮಾತನಾಡಿ, ಯುವಜನತೆ ಉತ್ತಮ ಸಂಸ್ಕಾರ ಶಿಸ್ತು ಮತ್ತು ನೈತಿಕ ಮೌಗಳನ್ನು ಅಳವಡಿಸಿಕೊಂಡು ದೇಶದ ಆದರ್ಶ ನಾಗರಿಕರಾಗಿ ರೂಪುಗೊಳ್ಳಬೇಕು. ವ್ಯಸನಗಳಿಂದ ದೂರವಿರುವುದೇ ನಿಜವಾದ ಸ್ವಾತಂತ್ರೃ ಎಂದರು.
ಎಸ್.ಬಿ. ಪಾಟೀಲ್, ಎಸ್.ಎಂ. ಹುದ್ದಾರ, ಡಾ. ಚಂದ್ರಶೇಖರ ಗುರೂಜಿ, ಮಕ್ಕಳ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷೆ ಶಕುಂತಲಾ ವಜ್ರಮಟ್ಟಿ, ಜ್ಯೋತಿ ಬಿರಾದಾರ ಇತರರಿದ್ದರು.