ಸಂತ್ರಸ್ತರಿಗೆ ನಿವೇಶನ ಹಂಚಿಕೆ, ಹೊಸ ಕಾಮಗಾರಿ, ಎನ್‌ಒಸಿ ನೀಡುವುದು, ಬಿಟಿಡಿಎ ಬೈಲಾ ತಿದ್ದುಪಡಿ, ಯುಜಿಡಿ, ನೀರು ಪೂರೈಕೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬೋರ್ಡ್ ಮೀಟಿಂಗ್ ತೀರ್ಮಾನ ಅಗತ್ಯ. ಆದರೆ, ೧೪ ತಿಂಗಳಿAದ ಇಂಥ ತೀರ್ಮಾನಗಳಿಗೆ ಬ್ರೇಕ್ ಬಿದ್ದಿದೆ. ಸಂತ್ರಸ್ತರ ಜ್ವಲಂತ ಸಮಸ್ಯೆಗಳು ಜೀವಂತವಾಗಿ ಉಳಿದಿವೆ. ಬಿಟಿಡಿಎ ಅಧ್ಯಕ್ಷರ ಕೈಕಟ್ಟಿ ಹಾಕುತ್ತಿರುವ ಹಿಂದಿನ ಮರ್ಮ ಮಾತ್ರ ನಿಗೂಢವಾಗಿದೆ.!