ವೆಚ್ಚ ವೀಕ್ಷಕರಿಂದ ವಿವಿಧ ನೋಡಲ್ ಅಧಿಕಾರಿಗಳ ಸಭೆ

ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವೆಚ್ಚ ವೀಕ್ಷಕ ಡಾ. ಎಂ. ಅಮೀರ ಸಿದ್ದಿಕ್ ನೇತೃತ್ವದಲ್ಲಿ ಮಂಗಳವಾರ ಸಭೆ ಜರುಗಿತು. ಜಿಲ್ಲಾಧಿಕಾರಿ ಸಂಗಪ್ಪ ಎಂ. ಸೇರಿ ಇತರರಿದ್ದರು.
ಬಾಗಲಕೋಟೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವೆಚ್ಚ ವೀಕ್ಷಕ ಡಾ. ಎಂ. ಅಮೀರ ಸಿದ್ದಿಕ್ ನೇತೃತ್ವದಲ್ಲಿ ಮಂಗಳವಾರ ಸಭೆ ಜರುಗಿತು. ಜಿಲ್ಲಾಧಿಕಾರಿ ಸಂಗಪ್ಪ ಎಂ. ಸೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ-2026
  • ಡಾ. ಎಂ. ಅಮೀರ ಸಿದ್ದಿಕ್ ಅವರು ವಿವಿಧ ನೋಡಲ್ ಅಧಿಕಾರಿಗಳೊಂದಿಗೆ ಸಭೆ
  • ವೆಚ್ಚ ಮೇಲ್ವಿಚಾರಣೆ ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ- 2026ರ ಹಿನ್ನೆಲೆಯಲ್ಲಿ ವೆಚ್ಚ ಮೇಲ್ವಿಚಾರಣೆ ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ವೆಚ್ಚ ವೀಕ್ಷಕ ಡಾ. ಎಂ. ಅಮೀರ ಸಿದ್ದಿಕ್ ಅವರು ವಿವಿಧ ನೋಡಲ್ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಚುನಾವಣಾ ಅಭ್ಯರ್ಥಿಗಳ ಖರ್ಚಿನ ಲೆಕ್ಕಪತ್ರಗಳನ್ನು ನಿಖರವಾಗಿ ಸಂಗ್ರಹಿಸುವುದು ಹಾಗೂ ಸಮಯಕ್ಕೆ ಸರಿಯಾಗಿ ಪರಿಶೀಲಿಸುವುದು ಮುಖ್ಯವಾಗಿದೆ. ಪ್ರತಿ ವೆಚ್ಚವನ್ನು ದಾಖಲಿಸುವಲ್ಲಿ ಯಾವುದೇ ನಿರ್ಲಕ್ಷೃವಾಗಬಾರದು. ಪ್ಲೈಯಿಂಗ್ ಸ್ಕ್ವಾಡ್, ಸ್ಟಾೃಟಿಕ್ ಸರ್ವೆಲೆನ್ಸ್ ತಂಡಗಳು ಹಾಗೂ ವಿಡಿಯೋ ಮೇಲ್ವಿಚಾರಣಾ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ತಿಳಿಸಿದರು.
ಮಿಡಿಯಾ ಮಾನಿಟರಿಂಗ್, ಜಾಹೀರಾತು ವೆಚ್ಚಗಳ ಮೇಲ್ವಿಚಾರಣೆ ಹಾಗೂ ಅಕ್ರಮ ಹಣದ ಹರಿವು ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರವಾದ ಚರ್ಚೆ ನಡೆಸಿದರು. ಪ್ರತಿದಿನ ನೋಡಲ್ ಅಧಿಕಾರಿಗಳು ವರದಿ ಸಲ್ಲಿಸಬೇಕು. ಎಲ್ಲ ನೋಡಲ್ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಂಗಪ್ಪ ಎಂ. ಸೇರಿ ವಿವಿಧ ಇಲಾಖೆ ನೋಡಲ್ ಅಧಿಕಾರಿಗಳು. ವೆಚ್ಚ ಮೇಲ್ವಿಚಾರಣಾ ತಂಡದ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net