ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಹಿಂದುಳಿದ ವರ್ಗಗಳ ನಾಯಕ ವೀರಣ್ಣ ಹಳೆಗೌಡರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಸುರೇಶ ಹಡಪದ, ವಿನಯ ಭರಮಗೌಡ, ಹಣಮಂತ ಮಡಿವಾಳ ಹಾಗೂ ಸಂಗಮೇಶ ಹೂಗಾರ ಇದ್ದರು.
Published on:
Copied
Follow Us
ಬಾಗಲಕೋಟೆ: ರಾಷ್ಟ್ರೀಯ ಕೋಲಿ ಬೆಸ್ತ ನಿಶಾದ್ ಹಿಂದುಳಿದ ವರ್ಗಗಳ ಮಠಾಧೀಶರ ಮಹಾಸಭಾ ವತಿಯಿಂದ ಆ.25ರಂದು ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್‌ನಲ್ಲಿ ಬೆಳಿಗ್ಗೆ 10ಕ್ಕೆ ಹಿಂದುಳಿದ ವರ್ಗಗಳ ನಾಯಕರುಗಳ ಹಾಗೂ ನಾಯಕತ್ವ ಉಳವಿಗಾಗಿ ಮಠಾಧೀಶರ ಚಿಂತನ–ಮಂಥನ ಸಭೆ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಹಳೇಗೌಡರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಸಣ್ಣ, ಸಣ್ಣ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಜಾತಿ, ಹಣದ ಪ್ರಭಾವ ಹೆಚ್ಚಾಗಿದೆ. ಎಲ್ಲರಿಗೂ ಅವಕಾಶ ದೊರೆಯಬೇಕಿದೆ. ಈ ಕುರಿತು ಚಿಂತನೆ ನಡೆಯಲಿದೆ ಎಂದರು.
ಸಣ್ಣ ಸಮುದಾಯಗಳ ಕಡಗಣನೆ ಆಗುತ್ತಿದೆ. ಸಮಾಜದ ಬಗ್ಗೆ ಕಳಕಳಿಯುಳ್ಳ ಎಲ್ಲರೂ ಒಂದುಗೂಡಬೇಕಾಗಿದೆ. ಆ ನಿಟ್ಟಿನಲ್ಲಿ ಈ ಸಭೆ ಕೆಲಸ ಮಾಡಲಿದೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಸಚಿವ ಕುಮಾರ ಬಂಗಾರಪ್ಪ ಭಾಗವಹಿಸಲಿದ್ದು, ರಾಷ್ಟ್ರೀಯ ಪಕ್ಷಗಳಿಂದ ಹಿಂದುಳಿದ ವರ್ಗದವರಿಗೆ ಕರ್ನಾಟಕದಲ್ಲಿ ಆದ ಅನ್ಯಾಯ ಕುರಿತು ಮಲ್ಲಿಕಾ ಘಂಟಿ, ಕೆ. ಮುಕುಡಪ್ಪ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಹು–ಧಾ ಮಹಾನಗರ ಪಾಲಿಕೆ ಮೇಯರ್ ದುರ್ಗಮ್ಮ ಬಿಜವಾಡ, ಸಚಿವ ಸಂತೋಷ ಲಾಡ್, ಸಂಸದರಾದ ಯದುವೀರ ಒಡೆಯರ್, ಕೋಟಾ ಶ್ರೀನಿವಾಸ ಪೂಜಾರ, ಗೂಳಹಟ್ಟಿ ಶೇಖರ್, ಮಂಕಾಳ ವೈದ್ಯ, ತಿಪ್ಪಣ್ಣ ಕಮಕನೂರ, ಪಿ.ಜಿ.ಆರ್. ಸಿಂಧ್ಯಾ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.