ಸಾಮಾಜಿಕ ಚಟುವಟಿಕೆಗಳಿಗೆ ಭವನ ಉಪಯುಕ್ತವಾಗಲಿ

 ಬಾದಾಮಿ ಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆಯ ಹೆರಿಟೇಜ್ ಸಮೀಪ ನಿರ್ಮಾಣಗೊಳ್ಳಲಿರುವ ಸೇವಾಲಾಲ ಸಮುದಾಯ ಭವನದ ಕಾಮಗಾರಿಗೆ ಶಾಸಕ ಭೀಮಸೇನ ಬಿ. ಚಿಮ್ಮನಕಟ್ಟಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ಜಿ. ರಾಠೋಡ, ಪಿ.ಬಿ. ಚವಾಣ್, ರವಿ ರಾಠೋಡ, ಹುಲ್ಲಪ್ಪ ಚವಾಣ್, ಹೇಮಂತ ದೊಡಮನಿ, ಮೋತಿಲಾಲ ರಾಠೋಡ, ಮೋತಿಲಾಲ ಪಮ್ಮಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಭೀಮಸೇನ ಬಿ. ಚಿಮ್ಮನಕಟ್ಟಿ ಭರವಸೆ
  • 10 ಲಕ್ಷ ರೂ., ವೆಚ್ಚದ ಕಾಮಗಾರಿಗೆ ಭೂಮಿಪೂಜೆ
  • ಬಂಜಾರ ಸಮುದಾಯದ ಪರಂಪರೆ, ಸಂಸ್ಕೃತಿ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಭವನವು ಉಪಯುಕ್ತವಾಗಲಿದೆ ಎಂದರು.
ಬಾದಾಮಿ: ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಭೀಮಸೇನ ಬಿ. ಚಿಮ್ಮನಕಟ್ಟಿ ಭರವಸೆ ನೀಡಿದರು.
ಪಟ್ಟಣದ ರೈಲ್ವೆ ಸ್ಟೇಷನ್ ರಸ್ತೆಯ ಹೆರಿಟೇಜ್ ಸಮೀಪ 2025-26 ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಡಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸೇವಾಲಾಲ ಸಮುದಾಯ ಭವನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಬಂಜಾರ ಸಮುದಾಯದ ಪರಂಪರೆ, ಸಂಸ್ಕೃತಿ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಭವನವು ಉಪಯುಕ್ತವಾಗಲಿದೆ ಎಂದರು.
ಸಂಘದ ಅಧ್ಯಕ್ಷ ಎಂ.ಜಿ. ರಾಠೋಡ, ಪಿ.ಬಿ. ಚವಾಣ್, ರವಿ ರಾಠೋಡ, ಹುಲ್ಲಪ್ಪ ಚವಾಣ್, ಹೇಮಂತ ದೊಡಮನಿ, ಮೋತಿಲಾಲ ರಾಠೋಡ, ಮೋತಿಲಾಲ ಪಮ್ಮಾರ, ಪುನ್ನಪ್ಪ ಚವಾಣ್, ವಿಷ್ಣು ಚವಾಣ್, ಮೋಹನ್ ಪಮ್ಮಾರ, ಮೇಘರಾಜ್ ರಾಠೋಡ ಸೇರಿ ಸುತ್ತಮುತ್ತಲಿನ ತಾಂಡಾಗಳ ಮುಖಂಡರು ಹಾಗೂ ಯುವಕರು ಭಾಗವಹಿಸಿದ್ದರು.
ಉಮೇಶ ಜಾಧವ ಪ್ರಾರ್ಥಿಸಿದರು. ವಸಂತ ರಾಠೋಡ ಸ್ವಾಗತಿಸಿದರು. ವಿಜಯಕುಮಾರ ಲಮಾಣಿ ನಿರೂಪಿಸಿದರು. ರಾಜೇಶ ಚವಾಣ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net