ಸೌಲಭ್ಯ ಪಡೆದುಕೊಳ್ಳಲು ಲಿಂಗಾಯತ ಪ್ರತ್ಯೇಕ ಧರ್ಮ ಆಗುವುದಲ್ಲ; ಚರ್ಚೆ, ಆಚರಣೆ, ತತ್ವಪಾಲನೆ, ಆಲೋಚನೆ, ಅನುಭಾವದ ಮೂಲಕ ಲಿಂಗಾಯತ ಧರ್ಮ ಕಟ್ಟೋಣ. ಲಿಂಗಾಯತ ನುಡಿಯ ಸಿದ್ಧಾಂತವಲ್ಲ, ಅದು ನಡೆ-ನುಡಿಯ ಸಿದ್ಧಾಂತವಾಗಿದೆ. ಯೋಗ್ಯರ ಕೈಯಲ್ಲಿ ಮಠ ಮತ್ತು ಸಂಪತ್ತು ಸಿಗಬೇಕು. ಕೆಲವರು ಮಠ ಮತ್ತು ಸಂಪತ್ತನ್ನು ಬಸವ ವಿರೋಧಿ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದಾರೆ. ಅಂಥ ಮಠಗಳಿಂದ ಬಿಡುಗಡೆಗೊಳಿಸಬೇಕಿದೆ. ಅನೇಕ ಲಿಂಗಾಯತರ ಆಚರಣೆಗಳು ವೈದಿಕಮಯ ಆಗುತ್ತಿರುವುದು ಕಳಕಳಕಾರಿ ಸಂಗತಿ. ಮನು ಧರ್ಮ ನಿಂತಿಲ್ಲ. ಅದು ನಮ್ಮಲ್ಲೂ(ಲಿಂಗಾಯತರಲ್ಲಿ) ಪ್ರವೇಶಿಸುತ್ತಿದೆ. ಇಂತ ಸಮಯದಲ್ಲಿ ನಾವು ಬಸವ ಧರ್ಮ ಬಿತ್ತಿ ಬೆಳೆಯಬೇಕು ಎಂದು ತಿಳಿಸಿದರು.