ಮಲ್ಲಮ್ಮ ಸಂದೇಶಗಳು ಎಲ್ಲರಿಗೂ ಪ್ರೇರಣೆ

ನಾವಲಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಲ್ಲಮ್ಮ ಜಯಂತ್ಯುತ್ಸವ ಆಚರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಸುಭಾಸ ಕಾಂತಿ, ಬಸವರಾಜ ದ್ಯಾವಣ್ಣವರ, ಸದಾಶಿವ ಲೆಂಡಿ ಇತರರಿದ್ದರು.
ನಾವಲಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಲ್ಲಮ್ಮ ಜಯಂತ್ಯುತ್ಸವ ಆಚರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಸುಭಾಸ ಕಾಂತಿ, ಬಸವರಾಜ ದ್ಯಾವಣ್ಣವರ, ಸದಾಶಿವ ಲೆಂಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಸ ಕಾಂತಿ ಅನಿಸಿಕೆ
  • ಮಲ್ಲಮ್ಮ ಜಯಂತ್ಯುತ್ಸವ
ರಬಕವಿ/ಬನಹಟ್ಟಿ: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವು ಇಡೀ ಸಮಾಜಕ್ಕೆ ಮಾರ್ಗದರ್ಶಕವಾಗಿವೆ ಎಂದು ನಾವಲಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಭಾಸ ಕಾಂತಿ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಭಾನುವಾರ ನಡೆದ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲ್ಲಮ್ಮ ಅವರ ಭಕ್ತಿ, ತ್ಯಾಗ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು. ಇಂತಹ ಮಹನೀಯರ ಜೀವನ ಸಂದೇಶಗಳನ್ನು ಯುವ ಪೀಳಿಗೆ ಅಳವಡಿಸಿಕೊಂಡರೆ ಸಮಾಜದ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದರು.
ಬಸವರಾಜ ದ್ಯಾವಣ್ಣವರ, ವಿಠ್ಠಲ ಪಾಟೀಲ, ಸದಾಶಿವ ಲೆಂಡಿ, ಗುರು ಕಾಂತಿ, ಬಾಲು ಯಲಗುದ್ರಿ, ಹನಮಂತ ನಾಯಕ, ಕಾಶಪ್ಪ ನಾಯಕ, ಶ್ರೀಶೈಲ ತಳವಾರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರವೀಣ ಶಿರಬೂರ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net