ದೇಶ ಬಲಿಷ್ಠಗೊಳಿಸಲು ಬಿಜೆಪಿ ಗೆಲ್ಲಿಸಿ

ಬಾಗಲಕೋಟೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶಾಸಕ ಬಸನಗೌಡ ಪಾಟೀಲ ಭರ್ಜರಿ ಪ್ರಚಾರ ನಡೆಸಿದರು. ಶಾಸಕ ರಮೇಶ ಬುಸನೂರ, ಸಂಗಣ್ಣ ಕಲಾದಗಿ, ಮೋಹನ ಜಾಧವ ಸೇರಿ ಇತರರಿದ್ದರು.
ಬಾಗಲಕೋಟೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶಾಸಕ ಬಸನಗೌಡ ಪಾಟೀಲ ಭರ್ಜರಿ ಪ್ರಚಾರ ನಡೆಸಿದರು. ಶಾಸಕ ರಮೇಶ ಬುಸನೂರ, ಸಂಗಣ್ಣ ಕಲಾದಗಿ, ಮೋಹನ ಜಾಧವ ಸೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸನಗೌಡ ಯತ್ನಾಳ
  • ಭರ್ಜರಿ ಪ್ರಚಾರ
ಬಾಗಲಕೋಟೆ: ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಯತ್ನಾಳ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಗ್ರಾಮೀಣ ಪ್ರದೇಶಗಳಾದ ಸುತಗುಂಡಾರ, ಮುಗಳೊಳ್ಳಿ, ಚಿಕ್ಕಮ್ಯಾಗೇರಿ, ಹಿರೇಮ್ಯಾಗೇರಿಗಳಲ್ಲಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ದುರಾಡಳಿತ, ಒಂದು ಕೋಮಿನವರಿಗೆ ಆದ್ಯತೆ ನೀಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಸಮುದಾಯದವರಿಗೆ ಮಾಡುತ್ತಿರುವ ಅನ್ಯಾಯಕ್ಕೆ ಬೇಸತ್ತ ಮತದಾರರು ತಕ್ಕ ಉತ್ತರ ಕೊಡಲು ಚುನಾವಣೆ ದಿನಕ್ಕಾಗಿ ಕಾಯುತ್ತಿದ್ದಾರೆ. ಹಿಂದಿನ ಬಾರಿಗೆ ಆದ ತಪ್ಪನ್ನು ಈ ಬಾರಿ ಮರುಕಳಿಸದೇ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಿ. ಹಿಂದೂಗಳ ಒಗ್ಗಟ್ಟಿನಿಂದ ದೇಶವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯ ಎಂದರು.
ಮುಗಳೊಳ್ಳಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಹೆಗಲ ಮೇಲೆ ಕಂಬಳಿ ಹೊರಿಸಿ ಕುರಿಮರಿ ಉಡುಗೊರೆ ನೀಡಿದರು. ಮಾಜಿ ಶಾಸಕ ರಮೇಶ ಬುಸನೂರ, ಸಂಗಣ್ಣ ಕಲಾದಗಿ, ಮೋಹನ ಜಾಧವ ಸೇರಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net