ಪರಿಸರ ಸಮತೋಲನ ಕಾಪಾಡಿ

 ಮಹಾಲಿಂಗಪುರದ ಬಸವನಗರದಲ್ಲಿ ಹುರಕಡ್ಲಿ ಫೌಂಡೇಶನ್‌ ವತಿಯಿಂದ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ  ಚನಬಸು ಹುರಕಡ್ಲಿ ಹಾಗೂ ಸವಿತಾ ಹುರಕಡ್ಲಿ ದಂಪತಿ ಸಸಿ ನೆಟ್ಟರು. ಬಸವರಾಜ ಗಿರಿಸಾಗರ, ಪ್ರಕಾಶ ಬಾಡನವರ ಇತರರಿದ್ದರು.
ಮಹಾಲಿಂಗಪುರದ ಬಸವನಗರದಲ್ಲಿ ಹುರಕಡ್ಲಿ ಫೌಂಡೇಶನ್‌ ವತಿಯಿಂದ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಚನಬಸು ಹುರಕಡ್ಲಿ ಹಾಗೂ ಸವಿತಾ ಹುರಕಡ್ಲಿ ದಂಪತಿ ಸಸಿ ನೆಟ್ಟರು. ಬಸವರಾಜ ಗಿರಿಸಾಗರ, ಪ್ರಕಾಶ ಬಾಡನವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚನಬಸು ಹುರಕಡ್ಲಿ ಹೇಳಿಕೆ
  • ಹಸಿರು ಸಂರಕ್ಷಣೆಗೆ ಸಂಕಲ್ಪ
  • ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ
ಮಹಾಲಿಂಗಪುರ: ಪರಿಸರ ಸಮತೋಲನ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹುರಕಡ್ಲಿ ಫೌಂಡೇಶನ್‌ನ ಚನಬಸು ಹುರಕಡ್ಲಿ ಹೇಳಿದರು.
ಪಟ್ಟಣದ ಬಸವನಗರದಲ್ಲಿ ಹುರಕಡ್ಲಿ ಫೌಂಡೇಶನ್‌ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಿಡ ನೆಡುವುದಷ್ಟೇ ಅಲ್ಲದೆ, ಅವುಗಳನ್ನು ಮರಗಳಾಗಿ ಬೆಳೆಯುವವರೆಗೆ ಪೋಷಿಸುವುದು ಅತ್ಯಾವಶ್ಯಕ ಎಂದು ತಿಳಿಸಿದರು. ಮನೆಗೊಂದು ಗಿಡ, ಊರಿಗೊಂದು ವನ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕರೆ ನೀಡಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹನುಮಂತೇಶ್ವರ ದೇವಸ್ಥಾನದ ಆವರಣದಲ್ಲಿ 50ಕ್ಕೂ ಹೆಚ್ಚು ವಿವಿಧ ತಳಿಯ ಸಸಿಗಳನ್ನು ನೆಡಲಾಯಿತು. ಸಸಿಗಳ ಸಂರಕ್ಷಣೆಗೆ ಜಾಳಿಗಳನ್ನು ಅಳವಡಿಸಲಾಯಿತು. ಮಕ್ಕಳಿಂದ ಸಸಿಗಳಿಗೆ ನೀರೆರೆಯುವ ಮೂಲಕ ಪರಿಸರ ಜಾಗತಿ ಮೂಡಿಸಲಾಯಿತು.
ಪುರಸಭೆ ಮಾಜಿ ಸದಸ್ಯೆ ಸವಿತಾ ಹುರಕಡ್ಲಿ, ಬಸವರಾಜ ಗಿರಿಸಾಗರ, ಪ್ರಕಾಶ ಬಾಡನವರ, ಮಹಾಲಿಂಗಪ್ಪ ಕಂಠಿ ಸೇರಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net