ಸ್ವಚ್ಛತೆ ಕಾಪಾಡಿ ಆರೋಗ್ಯ ಉಳಿಸಿ

ಹುನಗುಂದ ನಗರದ ವಿ.ಮ.ವಿ.ವ.ಸಂಘ ಹಾಗೂ ಗೌರಮ್ಮ ಚರಂತಿಮಠ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಆರೋಗ್ಯ ಅರಿವು ಜಾಗೃತಿ ಜಾಥಾ ನಡೆಯಿತು. ಪ್ರಾಚಾರ್ಯ ಸಂಗಮೇಶ ಪಟ್ಟಣಶೆಟ್ಟಿ, ಆರ್.ಎಸ್.ಬ್ಯಾಳಿ, ದಾನಪ್ಪ ಕೆಂದೂರ ಇದ್ದರು.
ಹುನಗುಂದ ನಗರದ ವಿ.ಮ.ವಿ.ವ.ಸಂಘ ಹಾಗೂ ಗೌರಮ್ಮ ಚರಂತಿಮಠ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಆರೋಗ್ಯ ಅರಿವು ಜಾಗೃತಿ ಜಾಥಾ ನಡೆಯಿತು. ಪ್ರಾಚಾರ್ಯ ಸಂಗಮೇಶ ಪಟ್ಟಣಶೆಟ್ಟಿ, ಆರ್.ಎಸ್.ಬ್ಯಾಳಿ, ದಾನಪ್ಪ ಕೆಂದೂರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಿನನಿತ್ಯ ವ್ಯಾಯಾಮ, ಸಮತೋಲನ ಆಹಾರ
  • ಸದೃಢ ಆರೋಗ್ಯ
ಹುನಗುಂದ: ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ದಿನನಿತ್ಯ ವ್ಯಾಯಾಮ, ಸಮತೋಲನ ಆಹಾರ ಹಾಗೂ ಸದೃಢ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದು ಗೌರಮ್ಮ ಚರಂತಿಮಠ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಸಂಗಮೇಶ ಪಟ್ಟಣಶೆಟ್ಟಿ ಹೇಳಿದರು.
ನಗರದ ವಿ.ಮ.ವಿ.ವ.ಸಂಘ ಹಾಗೂ ಗೌರಮ್ಮ ಚರಂತಿಮಠ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಮತ್ತು ಜಾಗೃತಿ ಮೂಡಿಸಲು ಶನಿವಾರ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು. ವಿದ್ಯಾರ್ಥಿಗಳು ನನ್ನ ಆರೋಗ್ಯ ನನ್ನ ಹಕ್ಕು, ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ, ಸ್ವಸ್ಥ ಜೀವನ ಸುಖೀ ಜೀವನ, ಆರೋಗ್ಯವೇ ಮಹಾಭಾಗ್ಯ, ಸ್ವಚ್ಛತೆ ಕಾಪಾಡಿ ಆರೋಗ್ಯ ಉಳಿಸಿ ಎಂಬ ಘೋಷಣೆಗಳನ್ನು ಕೂಗಿ ಜನರಲ್ಲಿ ಅರಿವು ಮೂಡಿಸಿದರು. ಕೈಯಲ್ಲಿ ಫಲಕಗಳನ್ನು ಹಿಡಿದು, ಆರೋಗ್ಯದ ಬಗ್ಗೆ ಸಂದೇಶಗಳನ್ನು ಸಾರಿದರು.
ವಿ.ಮ.ಶಾಲೆಯ ಆಡಳಿತಾಧಿಕಾರಿ ಆರ್.ಎಸ್.ಬ್ಯಾಳಿ, ದಾನಪ್ಪ ಕೆಂದೊರ ಸೇರಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net