ಜಮಖಂಡಿ ನಗರದ ಓಲೆಮಠದ ಆಶ್ರಯದಲ್ಲಿ ನಡೆಯುತ್ತಿರುವ ಜಾತ್ರಾಮಹೋತ್ಸವ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶರಣತತ್ವ ಚಿಂತಕ ಡಾ.ಜೆ.ಎಸ್. ಪಾಟೀಲ ಉಪನ್ಯಾಸ ನೀಡಿದರು. ಸುರೇಶಗೌಡ ಪಾಟೀಲ, ವರ್ಧಮಾನ ನ್ಯಾಮಗೌಡ, ರವಿ ತೇಲಿ, ನಾಗಪ್ಪ ಮುತ್ತಕ್ಕನವರ ಇತರರು ಇದ್ದಾರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಜೆ.ಎಸ್. ಪಾಟೀಲ ಹೇಳಿಕೆ
ಸಮಗ್ರ ಚಿಂತನೆ
12ನೇ ಶತಮಾನದ ಬಸವಾದಿ ಶಿವಶರಣರು ನಡೆಸಿದ ಸಾಮಾಜಿಕ-ಧಾರ್ಮಿಕ ಚಳವಳಿಯ ಪರಿಣಾಮವಾಗಿ ಲಿಂಗಾಯತ ಧರ್ಮ ಉದ್ಭವವಾಗಿದೆ
ಜಮಖಂಡಿ: 12ನೇ ಶತಮಾನದ ಬಸವಾದಿ ಶಿವಶರಣರು ನಡೆಸಿದ ಸಾಮಾಜಿಕ-ಧಾರ್ಮಿಕ ಚಳವಳಿಯ ಪರಿಣಾಮವಾಗಿ ಲಿಂಗಾಯತ ಧರ್ಮ ಉದ್ಭವವಾಗಿದೆ ಎಂದು ವಿಜಯಪುರದ ಬಸವತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ ಹೇಳಿದರು.
ನಗರದ ಓಲೆಮಠದ ಆಶ್ರಯದಲ್ಲಿ ನಡೆಯುತ್ತಿರುವ ಜಾತ್ರಾಮಹೋತ್ಸವ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಲಿಂಗಾಯತ ಚಳವಳಿ ಸಮಗ್ರ ಚಿಂತನೆ ವಿಷಯವಾಗಿ ಮಾತನಾಡಿದ ಅವರು, ರಾಜ್ಯದಾದ್ಯಂತ ಸಾವಿರಾರು ಲಿಂಗಾಯತ ಮಠಗಳಿದ್ದರೂ ಧರ್ಮದ ಮೂಲ ತತ್ವಗಳು ಸಂಪೂರ್ಣ ಅನುಷ್ಠಾನವಾಗಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಚಳವಳಿಯ ಉದ್ದೇಶಗಳಾದ ಜಾತಿ ಅಸಮಾನತೆ ನಿರ್ಮೂಲನೆ, ಮಂದಿರ ಆಧಾರಿತ ಶೋಷಣೆಗೆ ಅಂತ್ಯ, ಇಷ್ಟಲಿಂಗದ ಮೂಲಕ ವೈಯಕ್ತಿಕ ಆಧ್ಯಾತ್ಮಿಕತೆ, ಕಾಯಕ-ದಾಸೋಹ ಆಧಾರಿತ ಆರ್ಥಿಕ ಸಮಾನತೆ ಹಾಗೂ ಲಿಂಗ ಸಮಾನತೆಯನ್ನು ಸಮಾಜದಲ್ಲಿ ಸ್ಥಾಪಿಸುವುದಾಗಿತ್ತು ಎಂದು ಅವರು ವಿವರಿಸಿದರು.
ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಆಸೆ-ಆಕಾಂಕ್ಷೆಗಳಿಂದ ದೂರವಿದ್ದು ಸರಳ ಜೀವನ ನಡೆಸುವ ಮಹತ್ವವನ್ನು ಪ್ರತಿಪಾದಿಸಿದರು.
ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಉಪಾಧ್ಯಕ್ಷೆ ಡಾ. ವಿಜಯಲಕ್ಷಮೀ ತುಂಗಳ, ಆಲಬಾಳದ ಪ್ರಗತಿಪರ ರೈತ ಸೋಮನಗೌಡ ಪಾಟೀಲ, ಭಾಗ್ಯಶ್ರೀ ಕೋಟಿ, ಜ್ಯೋತಿ ಕಟಗಿ ಮಾತನಾಡಿದರು.
ಹೇಮಾ ಮಠಪತಿ ವಿರಚಿತ ಆಡಿದ ಅಂಗಳ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಲಾಯಿತು. ಸಾನಿಯಾ ಹುನಗುಂದ ಭರತನಾಟ್ಯ ಪ್ರದರ್ಶನ ನೀಡಿದರು. ಕಲ್ಯಾಣ ಮಠದ ಗೌರಿಶಂಕರ ಮಹಾಸ್ವಾಮಿಗಳು, ಅರ್ಜುಣಗಿಯ ಗುರುದೇವ ದೇವರು ಸಾನ್ನಿಧ್ಯ ವಹಿಸಿದ್ದರು. ಓಲೆಮಠದ ಆನಂದ ದೇವರು ಶ್ರೀಗಳು ನೇತತ್ವ ವಹಿಸಿದ್ದರು.
ಸುರೇಶಗೌಡ ಪಾಟೀಲ, ರವಿ ತೇಲಿ, ವರ್ಧಮಾನ ನ್ಯಾಮಗೌಡ, ಈಶ್ವರ ಕರಬಸನವರ, ತಳವಾರ ಸಮಾಜದ ಅಧ್ಯಕ್ಷ ಕಷ್ಣಾ ತಳವಾರ, ಮಲ್ಲೇಶ ಆಳಗಿ, ನಾಗಪ್ಪ ಮುತ್ತಕ್ಕನವರ, ಸಿದ್ದರಾಮಯ್ಯ ಗೋಠೆ, ಕಾಡಪ್ಪ ದೇಸಾಯಿ ಸೇರಿ ವಿವಿಧ ಗಣ್ಯರು, ಸಾರ್ವಜನಿಕರು ಹಾಗೂ ಮಠದ ಭಕ್ತರು ಭಾಗವಹಿಸಿದರು.