ರಬಕವಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕರ ಸಂಘದ ತಾಲೂಕು ಘಟಕದಿಂದ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಹಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರನಮಕ್ಕೆ ಬಿಇಓ ಅಶೋಕ ಬಸನ್ನವರ ಚಾಲನೆ ನೀಡಿದರು. ಎಂ.ಎಂ. ನಾಯಿಕವಾಡಿ, ಬಾಬಾಗೌಡ ಪಾಟೀಲ, ಪಿ.ಎಚ್. ಪ್ರತಾಪ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಿಇಓ ಅಶೋಕ ಬಸನ್ನವರ ಹೇಳಿಕೆ
ಪ್ರೌಢಶಾಲಾ ಸಹಶಿಕ್ಷಕರ ಮಕ್ಕಳ ಪ್ರತಿಭಾ ಪುರಸ್ಕಾರ
ಶಿಕ್ಷಕರು ನಿಸ್ವಾರ್ಥಯುತ ಬೋಧನೆಯ ಮೂಲಕ ಮಕ್ಕಳ ಮನದಲ್ಲಿ ಚಿರಸ್ಥಾಯಿಯಾಗುತ್ತಾರೆ
ರಬಕವಿ/ಬನಹಟ್ಟಿ: ಸಹಶಿಕ್ಷಕರ ಸಂಘ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ದಾಸೋಹ ಸೇರಿ ನಡೆಸುತ್ತಿರುವ ವಿವಿಧ ಸೇವಾ ಚಟುವಟಿಕೆಗಳು ಶ್ಲಾಘನೀಯ, ಶಿಕ್ಷಕರು ತಮ್ಮ ವೃತ್ತಿ ಕರ್ತವ್ಯದ ಜೊತೆಗೆ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಬಿಇಓ ಅಶೋಕ ಬಸನ್ನವರ ಹೇಳಿದರು.
ಸಹಶಿಕ್ಷಕರ ಸಂಘದ ತಾಲೂಕು ಘಟಕದಿಂದ ರಬಕವಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಹಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಕರು ವ್ಯಾಯಾಮ, ಧ್ಯಾನ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಆರೋಗ್ಯಕರ ಚಟುವಟಿಕೆಗಳಲ್ಲಿ ಮಕ್ಕಳನ್ನೂ ತೊಡಗಿಸುವ ಮೂಲಕ ಭವಿಷ್ಯದ ಸದೃಢ ಪ್ರಜೆಗಳ ದೇಶಕ್ಕೆ ಯೋಗ ದಾನವಾಗಿಸುವತ್ತ ಹೆಜ್ಜೆ ಹಾಕಬೇಕು ಎಂದರು.
ಶಿಕ್ಷಕರು ನಿಸ್ವಾರ್ಥಯುತ ಬೋಧನೆಯ ಮೂಲಕ ಮಕ್ಕಳ ಮನದಲ್ಲಿ ಚಿರಸ್ಥಾಯಿಯಾಗುತ್ತಾರೆ. ಅವರ ಕುಟುಂಬದ ನಿರ್ವಹಣೆ ಜೊತೆಗೆ ತಮ್ಮ ಮಕ್ಕಳ ಶೈಕ್ಷಣಿಕ ಸಾಧನೆಯತ್ತ ಗಮನ ಹರಿಸುವ ಮೂಲಕ ಮನೆ ಗೆದ್ದು ಮಾರು ಗೆಲ್ಲು ಎಂಬಂತೆ ಹೊಣೆಗಾರಿಕೆ ನಿಭಾಯಿಸುವ ಮೂಲಕ ಸಾಮಾಜಿಕವಾಗಿಯೂ ಆದರ್ಶಪ್ರಾಯರಾಗಬೇಕೆಂದರು.
ಮುಖ್ಯ ಅತಿಥಿಗಳಾಗಿ ಪ್ರಕಾಶ ದಾಸರ ಶಿಕ್ಷಣದ ಮಹತ್ತತೆ, ಶಿಕ್ಷಕರ ಸಂಘದ ಪಾತ್ರದ ಕುರಿತು ವಿವರಿಸಿದರು. ವಿಶೇಷ ಆಹ್ವಾನಿತರಾಗಿ ನರಸಿಂಹ ಕಲ್ಲೋಳ್ಳಿ, ಶಿಕ್ಷಣ ಸಂಯೋಜಕ ಸಂಗಮೇಶ ವಿಜಾಪುರ, ರಮೇಶ ಅವಟಿ ಹಾಗೂ ಎನ್.ಎನ್.ಬೇವೂರ ಮಾತನಾಡಿದರು.
ಈಜು ಸ್ಪರ್ಧೆಯ ವಿಶೇಷ ಸಾಧಕ ರವಿ ಹೊನಗೌಡ ಸನ್ಮಾನಿಸಿದರು. ಸಂಘದ ಕಾರ್ಯದರ್ಶಿ ಎಂ.ಎಂ. ನಾಯಕವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಬಾಬಾಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.