ಭಾರತ ಮಾತೆ ಸೇವೆ ಮಾಡೋಣ

ಕಲಾದಗಿಯಲ್ಲಿ ಶಿವಚಿದಂಬರ ಸಭಾಭವನದಲ್ಲಿ ಭಾನುವಾರ ಸನಾತನ ಉತ್ಸವಗಳ ಆಚರಣಾ ಸಮಿತಿಯವರು ಆಯೋಜಿಸಿದ್ದ ಸೇವಾಕರ್ತರಿಗೆ ಸತ್ಕಾರ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಾನಂದ ಗಾಯಕವಾಡ ಮಾತನಾಡಿದರು. ಕೃಷ್ಣಾನಂದ ಶಾಸ್ತ್ರೀ, ಗುಣಾಕರಶೇಖರ ಶೆಟ್ಟಿ, ಬಸವರಾಜ ರೆಡ್ಡಿ ಹಾಗೂ ಬಸವರಾಜ ಮಠಪತಿ ಉಪಸ್ಥಿತರಿದ್ದರು.
ಕಲಾದಗಿಯಲ್ಲಿ ಶಿವಚಿದಂಬರ ಸಭಾಭವನದಲ್ಲಿ ಭಾನುವಾರ ಸನಾತನ ಉತ್ಸವಗಳ ಆಚರಣಾ ಸಮಿತಿಯವರು ಆಯೋಜಿಸಿದ್ದ ಸೇವಾಕರ್ತರಿಗೆ ಸತ್ಕಾರ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಶಿವಾನಂದ ಗಾಯಕವಾಡ ಮಾತನಾಡಿದರು. ಕೃಷ್ಣಾನಂದ ಶಾಸ್ತ್ರೀ, ಗುಣಾಕರಶೇಖರ ಶೆಟ್ಟಿ, ಬಸವರಾಜ ರೆಡ್ಡಿ ಹಾಗೂ ಬಸವರಾಜ ಮಠಪತಿ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಾನಂದ ಗಾಯಕವಾಡ ಅಭಿಮತ
  • ಸೇವಾಕರ್ತರಿಗೆ ಸತ್ಕಾರ ಸಮಾರಂಭ
ಕಲಾದಗಿ: ಸಮಾಜದಲ್ಲಿ ಉತ್ತಮ ಸಂಸ್ಕಾರ, ರಾಷ್ಟ್ರೀಯತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಕಾರ್ಯ ಪ್ರತಿಯೊಬ್ಬರ ಮನೆಯಲ್ಲಿ ಆರಂಭವಾಗಬೇಕು ಎಂದು ಬನಹಟ್ಟಿಯ ಸಾಮಾಜಿಕ ಕಾರ್ಯಕರ್ತ ಶಿವಾನಂದ ಗಾಯಕವಾಡ ಹೇಳಿದರು.
ಗ್ರಾಮದ ಶಿವಚಿದಂಬರ ಸಭಾಭವನದಲ್ಲಿ ಭಾನುವಾರ ಸನಾತನ ಉತ್ಸವಗಳ ಆಚರಣಾ ಸಮಿತಿಯವರು ಆಯೋಜಿಸಿದ್ದ ಸೇವಾಕರ್ತರಿಗೆ ಸತ್ಕಾರ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ನಮಗೆ ದೊರೆತಿರುವ ಜೀವನವನ್ನು ಭಾರತ ಮಾತೆಯ ಪರಮ ವೈಭವಕ್ಕಾಗಿ ಸೇವೆಗೆ ಮೀಸಲಿಡಬೇಕು. ಸಮಾಜದಲ್ಲಿ ಪರಿಸರ ಕಾಳಜಿ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರಗಳನ್ನು ಪಾಲಿಸುವುದರೊಂದಿಗೆ ಇತರರನ್ನೂ ಪ್ರೇರೇಪಿಸುವುದು ಅಗತ್ಯ ಎಂದು ಹೇಳಿದರು.
ಮನೆಯ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಕೊಳ್ಳಲು ತಾಯಂದಿರು ಮಕ್ಕಳಿಗೆ ಮಹಾಪುರುಷರ ಕಥೆಗಳು ಹಾಗೂ ನೈತಿಕ ಮೌಲ್ಯಗಳನ್ನು ತಿಳಿಸಬೇಕು. ಮಕ್ಕಳಲ್ಲಿ ದೈವಭಕ್ತಿ ಮತ್ತು ಧರ್ಮಭಕ್ತಿ ಬೆಳೆಸಲು ಬಾಲ್ಯದಿಂದಲೇ ಉತ್ತಮ ಸಂಸ್ಕಾರಗಳನ್ನು ನೀಡುವುದು ಅಗತ್ಯ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಲೋಕಾಪುರದ ಶಾಂತಿ ಗ್ರ‍್ಯಾಂಡ್ ಹೋಟೆಲ್ ಮಾಲೀಕ ಗುಣಾಕರಶೇಖರ ಶೆಟ್ಟಿ ಹಾಗೂ ಕುಂದರಗಿ ಸುರಗಿರಿ ಬೆಟ್ಟದ ಭುವನೇಶ್ವರಿ ದೇವಾಲಯದ ನೂತನ ಧರ್ಮಾಧಿಕಾರಿ ಕೃಷ್ಣಾನಂದ ಶಾಸ್ತ್ರೀಗಳು ಸಮಿತಿಯ ಸಾಮಾಜಿಕ ಕಾರ್ಯಕ್ಕೆ ಜಂಟಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಶೈಲ ಪಾದಯಾತ್ರೆ ಸೇವಾಕರ್ತರು, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಂದ್ರು ಆಡಿನ, ಸೈಕ್ಲಿಂಗ್‌ನಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ವಿಜೇತ ಗಂಗಾ ದಂಡಿನ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಕೃಷ್ಣಾ ವಾರದ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಲವರನ್ನು ಸನ್ಮಾನಿಸಲಾಯಿತು.
ಬಾಗಲಕೋಟೆಯ ರೆಡ್ಡಿ ಫಾರ್ಮಾ ಮಾಲೀಕ ಬಸವರಾಜ ರೆಡ್ಡಿ, ಜಮಖಂಡಿಯ ಬಸವರಾಜ ಮಠಪತಿ, ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗಣ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net