ಹೈನುಗಾರಿಕೆ ಜಾಗೃತಿ ಹೊಂದಲಿ

 ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ವಿಶ್ವ ಹಾಲು ದಿನ ಆಚರಿಸಲಾಯಿತು. ಲಿಂಗರಾಜ ಪಾಟೀಲ, ಡಿ.ಟಿ. ಶಿವಶಂಕರಸ್ವಾಮಿ, ಶಿವಾನಂದ ಮಾಸ್ತಹೊಳಿ ಮತ್ತಿತರರಿದ್ದಾರೆ.
ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ವಿಶ್ವ ಹಾಲು ದಿನ ಆಚರಿಸಲಾಯಿತು. ಲಿಂಗರಾಜ ಪಾಟೀಲ, ಡಿ.ಟಿ. ಶಿವಶಂಕರಸ್ವಾಮಿ, ಶಿವಾನಂದ ಮಾಸ್ತಹೊಳಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಹಾಲು ಒಕ್ಕೂಟದ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿಕೆ
  • ವಿಶ್ವ ಹಾಲು ದಿನ ಆಚರಣೆ
  • ಜಿಲ್ಲಾಸ್ಪತ್ರೆಯ ಒಳ ರೋಗಿಗಳಿಗೆ ಹಾಗೂ ಬಾಣಂತಿಯರಿಗೆ ಬದಾಮ ಹಾಲು ವಿತರಿಸಿದರು.
ವಿಜಯಪುರ: ವಿಶ್ವದಾದ್ಯಂತ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ ಸಾರುವ ಜತೆಗೆ ಕುಪೋಷಣೆಯ ವಿರುದ್ದ ಹೋರಾಟ ನಡೆಸುವುದೇ ವಿಶ್ವ ಹಾಲು ದಿನಾಚರಣೆ ಪ್ರಮುಖ ಉದ್ದೇಶವಾಗಿದೆ ಎಂದು ವಿಜಯಪುರ ಮತ್ತು ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.
ಸೋಮವಾರ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಯಮಿತದ ವತಿಯಿಂದ ವಿಶ್ವ ಹಾಲು ದಿನಾಚರಣೆ ಅಂಗವಾಗಿ ನಗರದ ಜಿಲ್ಲಾಸ್ಪತ್ರೆಯ ಒಳ ರೋಗಿಗಳಿಗೆ ಹಾಗೂ ಬಾಣಂತಿಯರಿಗೆ ಬದಾಮ ಹಾಲು ವಿತರಿಸಿ ಅವರು ಮಾತನಾಡಿದರು.
ಈ ವರ್ಷದ ಹಾಲು ದಿನಾಚರಣೆಯನ್ನು ಮಹಿಳಾ ಹೈನುಗಾರಿಕಾ ರೈತರನ್ನು ಗೌರವಿಸೋಣ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಗುತ್ತಿದೆ. ಅಲ್ಲದೇ, ಹಾಲಿನ ಪೌಷ್ಟಿಕ ಮೌಲ್ಯ, ರೈತರ ಜೀವನೋಪಾಯ, ಆಹಾರ ಭದ್ರತೆ ಹಾಗೂ ಹೈನುಗಾರಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಶಿವಶಂಕರಸ್ವಾಮಿ ಮಾತನಾಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಹೊಳಿ ಮಾತನಾಡಿ, ಕೆಎಂಎಫ್ ಹಾಲು ಮತ್ತು ಅದರ ಉತ್ಪನ್ನಗಳು ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ನಮ್ಮ ಮನೆಯಲ್ಲಿ ನಿತ್ಯ ಸಹ ಕಲಬೆರಿಕೆ ಮುಕ್ತವಾದ ಪರಿಶುದ್ಧವಾದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸುತ್ತಿರುವುದಾಗಿ ತಿಳಿಸಿದರು.
ಕ.ಹಾ.ಮ. ನಿರ್ದೇಶಕ ಈರಣ್ಣ ಕೊಪ್ಪದ, ಒಕ್ಕೂಟದ ನಿರ್ದೇಶಕ ಸಂತೋಷಕುಮಾರ ಪಾಟೀಲ, ಸಿದ್ದರಾಯ ಜಂಗಮಶೆಟ್ಟಿ, ರೇಷ್ಮಾ ಪೂಜಾರಿ, ಬಾಬು ಪಾತ್ರೋಟಿ, ನಿಂಗನಗೌಡ ಪಾಟೀಲ, ಸಿದ್ದಗೊಂಡ ರುದ್ರಗೌಡರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net