ಸಾಂಪ್ರದಾಯಿಕ ವಾದ್ಯಗಳೊಂದಿಗೆ ಮೆರಗು ತರಲಿ

ಗುಳೇದಗುಡ್ಡದಲ್ಲಿ ಗಣೇಶೋತ್ಸವ ಹಬ್ಬದ ಅಂಗವಾಗಿ ಪೋಲಿಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯಲ್ಲಿ ಡಿವೈಎಸ್‌ಪಿ ಸಂತೋಷ ಬನಹಟ್ಟಿ ಮಾತನಾಡಿದರು. ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ಸಿದ್ದಣ್ಣ ಯಡಹಳ್ಳಿ, ಕೆಇಬಿ ಶಾಖಾಧಿಕಾರಿ ಶಶಿಧರ ಮಾಲಗಿತ್ತಿ ಇದ್ದರು.
ಗುಳೇದಗುಡ್ಡದಲ್ಲಿ ಗಣೇಶೋತ್ಸವ ಹಬ್ಬದ ಅಂಗವಾಗಿ ಪೋಲಿಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯಲ್ಲಿ ಡಿವೈಎಸ್‌ಪಿ ಸಂತೋಷ ಬನಹಟ್ಟಿ ಮಾತನಾಡಿದರು. ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ಸಿದ್ದಣ್ಣ ಯಡಹಳ್ಳಿ, ಕೆಇಬಿ ಶಾಖಾಧಿಕಾರಿ ಶಶಿಧರ ಮಾಲಗಿತ್ತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಸಂತೋಷ ಬನಹಟ್ಟಿ ಹೇಳಿಕೆ
  • ಶಾಂತಿ ಸಮಿತಿ ಸಭೆ
  • ಗಣೇಶೋತ್ಸವದಲ್ಲಿ ಡಿಜೆ ನಿಷೇಧ
ಗುಳೇದಗುಡ್ಡ: ಮುಂಬರಲಿರುವ ಗಣೇಶೋತ್ಸವ ಸಾರ್ವಜನಿಕರು ಶಾಂತ ರೀತಿಯಿಂದ ಆಚರಿಸಬೇಕು. ಗಣೇಶೋತ್ಸವದಲ್ಲಿ ಡಿಜೆ ಬಳಸುವುದನ್ನು ಸರ್ಕಾರ ನಿಷೇಧಿಸಿದೆ. ಸಾಂಪ್ರದಾಯಿಕ ವಾದ್ಯಗಳ ಮೂಲಕ ಹಬ್ಬಕ್ಕೆ ಮೆರಗು ತರಬೇಕು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಡಿವೈಎಸ್ಪಿ ಸಂತೋಷ ಬನಹಟ್ಟಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಗಣೇಶೋತ್ಸವ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಶಾಂತಿ ಸಮಿತಿಯ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಹಚ್ಚುವುದನ್ನು ನಿಷೇಧಿಸಿ ಸರ್ಕಾರ ಕಟ್ಟುನಿಟ್ಟಿನ ಆದೇಶ ಮಾಡಿದೆ. ಸರ್ಕಾರವಾಗಲಿ, ಪೊಲೀಸ್ ಇಲಾಖೆಯಾಗಲಿ ಯಾವುದೇ ನಿಯಮಗಳನ್ನು ಜಾರಿ ಮಾಡಿದರೂ ಅದರಲ್ಲಿ ಒಳ್ಳೆಯ ಉದ್ದೇಶವಿರುತ್ತದೆ ಎಂದರು.
ಸೆ.14ರಿಂದ ಪ್ರತಿಷ್ಠಾಪಿಸುವ ಗಣೇಶ್ ಮೂರ್ತಿ ಶಾಮಿಯಾನದಲ್ಲಿ ಬಹಳಷ್ಟು ಜಾಗೃತಿ ವಹಿಸಬೇಕು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಬ್ಬ ಆಚರಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ಮಂಟಪ ಹಾಕಿ, ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ತಾಲೂಕಿನಲ್ಲಿ 125 ಗಜಾನನ ಮಂಡಳಿಗಳು ಇದ್ದು, ಪಿಒಪಿ ಮೂರ್ತಿಗಳನ್ನು ಸರ್ಕಾರ ನಿಷೇಧಿಸಿದ್ದು, ಗಜಾನನ ಮಂಡಳಿಗಳು ಪಿಒಪಿ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಾರದು. ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು ಎಂದು ಹೇಳಿದರು.
ಪುರಸಭೆಯು ಗುರುತಿಸುವ ಗಣೇಶ ಮೂರ್ತಿ ವಿಸರ್ಜನೆ ಸ್ಥಳಗಳಲ್ಲಿ ಸ್ವಚ್ಛತೆ, ಬೀದಿದೀಪ ಅಳವಡಿಸಬೇಕು, ಬಾವಿಗಳನ್ನು ಸ್ವಚ್ಛಗೊಳಿಸಬೇಕು ಮುಖಂಡರು ಮನವಿ ಮಾಡಿದರು.
ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‌ಐ ಸಿದ್ದಣ್ಣ ಯಡಹಳ್ಳಿ, ಕೆಇಬಿ ಶಾಖಾಧಿಕಾರಿ ಶಶಿಧರ ಮಾಲಗಿತ್ತಿ, ಮುಖ್ಯಾಧಿಕಾರಿ ವಸಂತ ಪವಾರ, ಮೃತ್ಯಂಜಯ ಕರನಂದಿ, ಶ್ರೀಕಾಂತ ಹುನಗುಂದ, ಜಮೀರ ಮೌಲವಿ, ನಾರಾಯಣ ಕಂಠಿಗೌಡ್ರ, ಶರಣು ಸಜ್ಜನ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net