ಕೇಂದ್ರೀಕೃತ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಾಣವಾಗಲಿ

ಬನಹಟ್ಟಿಯ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಪ್ರಜಾಸೌಧ ಹೋರಾಟದ ಐದನೇ ದಿನದ ಸತ್ಯಾಗ್ರಹದಲ್ಲಿ ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಮಲ್ಲಣ್ಣ ಕಕಮರಿ ಮಾತನಾಡಿದರು. ಸುರೇಶ ಅಬಕಾರ, ಓಂಪ್ರಕಾಶ ಕಾಬ್ರಾ, ಯೂನಿಸ್ ನಿಪ್ಪಾಣಿ ಇದ್ದರು.
ಬನಹಟ್ಟಿಯ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಪ್ರಜಾಸೌಧ ಹೋರಾಟದ ಐದನೇ ದಿನದ ಸತ್ಯಾಗ್ರಹದಲ್ಲಿ ಕಾಡಸಿದ್ಧೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಮಲ್ಲಣ್ಣ ಕಕಮರಿ ಮಾತನಾಡಿದರು. ಸುರೇಶ ಅಬಕಾರ, ಓಂಪ್ರಕಾಶ ಕಾಬ್ರಾ, ಯೂನಿಸ್ ನಿಪ್ಪಾಣಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 6ನೇ ದಿನಕ್ಕ ಸರದಿ ಸತ್ಯಾಗ್ರಹ
  • ಜನಾಭಿಪ್ರಾಯ ಕಡೆಗಣಿಸಿ ಕೈಗೊಂಡ ನಿರ್ಧಾರಕ್ಕೆ ಆಕ್ರೋಶ

ರಬಕವಿ-ಬನಹಟ್ಟಿ: ನೂಲಿನ ಗಿರಣಿ ಸಮೀಪದ ಪ್ರದೇಶವು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದು, ತಾಲೂಕಿನ ನಾಲ್ಕೂ ದಿಕ್ಕಿನ ಗ್ರಾಮಗಳಿಂದಲೂ ಸುಲಭವಾಗಿ ತಲುಪಬಹುದಾದ ಕೇಂದ್ರ ಸ್ಥಳವಾಗಿದೆ. ಇಂತಹ ಸೂಕ್ತ ಜಾಗೆಯನ್ನು ಪರಿಗಣಿಸದೆ ಬೇರೆಡೆ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗಿರುವುದು ಜನಾಭಿಪ್ರಾಯವನ್ನು ಕಡೆಗಣಿಸಿದ ನಿರ್ಧಾರವಾಗಿದೆ ಎಂದು ಕಾಡಸಿದ್ಧೇಶ್ವ ಪಟ್ಟಣ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ಮಲ್ಲಣ್ಣ ಕಕಮರಿ ಕಿಡಿಕಾರಿದರು.

ಪ್ರಜಾಸೌಧ ಬನಹಟ್ಟಿಯಲ್ಲೇ ನಿರ್ಮಿಸಬೇಕೆಂದು ಬನಹಟ್ಟಿಯ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಸರದಿ ಸತ್ಯಾಗ್ರಹದ 5ನೇ ದಿನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾಗೆ ಅಂತಿಮಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಮಂಜೂರಾತಿ ನೀಡಿರುವುದರ ಕುರಿತು ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಮೂಡಿವೆ. ಅಧಿಕಾರಿಗಳು ಈ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಜವಳಿ ಉದ್ಯಮಿ ಶಂಕರ ಜುಂಜಪ್ಪನವರ ಮಾತನಾಡಿ, ಬನಹಟ್ಟಿಯಲ್ಲಿ ಈ ಹಿಂದೆ ನಡೆದ ಹಲವು ಸರ್ವಾನುಮತದ ಹೋರಾಟಗಳು ಯಶಸ್ವಿಯಾಗಿವೆ. ಪ್ರಜಾಸೌಧ ಬನಹಟ್ಟಿಯಲ್ಲೇ ನಿರ್ಮಾಣವಾಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.
ಬುಡಾನಸಾಬ ಜಮಾದಾರ, ಪ್ರಜಾಸೌಧಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಹಿಂದೂ-ಮುಸ್ಲಿಂ ಸಮಾಜದವರು ಒಗ್ಗಟ್ಟಿನಿಂದ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಸುರೇಶ ಅಬಕಾರ, ಸಿದ್ರಾಮ ಸವದತ್ತಿ, ಓಂಪ್ರಕಾಶ ಕಾಬ್ರಾ, ರಾಮಣ್ಣ ಭದ್ರನ್ನವರ, ಶ್ರೀಶೈಲ ಯಾದವಾಡ, ಶಂಕರ ಕೆಸರಗೊಪ್ಪ, ಸುರೇಶ ಕೋಲಾರ, ಅಶೋಕ ಮಾಲಾಪುರ, ಮಹಾಲಿಂಗ ಬಾಗಲಕೋಟ, ಸಂಜಯ ಜವಳಗಿ, ಅನ್ವರ ಜಮಾದಾರ, ದಿಲಾವರ ಪೆಂಡಾರಿ, ಮೌಲಾಸಾಬ ಸಂತಿ, ಇಕಬಾಲ ಬಾರಿಗಡ್ಡಿ, ಯೂನಿಸ್ ನಿಪ್ಪಾಣಿ ಸೇರಿ ವಿವಿಧ ಸಹಕಾರಿ ಸಂಘಗಳು ಹಾಗೂ ಮುಸ್ಲಿಂ ಸಮಾಜದ ಪ್ರತಿನಿಽಗಳು ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net