ಮಾನವೀಯತೆ ಉಳಿಸುವುದೇ ಕವಿಯ ಧ್ಯೇಯವಾಗಿರಲಿ

ಗುಳೇದಗುಡ್ಡದಲ್ಲಿ ಮಹಾದೇವ ಜಗತಾಪ ಅವರ ನೋವು ನಲಿವು ಕೃತಿಯನ್ನು ಡಾ. ಸಣ್ಣವೀರಣ್ಣ ದೊಡ್ಡಮನಿಬಿಡುಗಡೆಗೊಳಿಸಿದರು . ಪ್ರೊ. ಚಂದ್ರಶೇಖರ ಹೆಗಡೆ, ಡಾ. ವಿ.ಎ.ಬೆಳಕಿನಾಳ, ಜಿ.ಎಸ್.ಕೋಟಿ, ಡಾ. ವಿ.ಎನ್.ಢಾಣಕಶಿರೂರ, ಅಶೋಕ ಹೆಗಡೆ, ಸುರೇಶ ಪರ್ವತೀಕರ, ರವಿ ಅಂಗಡಿ, ಸಿದ್ದು ರಾವಳ, ಎಸ್. ಎಸ್.ಗುರವ, ಸುರೇಶ ವಗ್ಗಾ, ಸಿದ್ದರಾಮಯ್ಯ ಪುರಾಣಿಕಮಠ ಇದ್ದರು.
ಗುಳೇದಗುಡ್ಡದಲ್ಲಿ ಮಹಾದೇವ ಜಗತಾಪ ಅವರ ನೋವು ನಲಿವು ಕೃತಿಯನ್ನು ಡಾ. ಸಣ್ಣವೀರಣ್ಣ ದೊಡ್ಡಮನಿಬಿಡುಗಡೆಗೊಳಿಸಿದರು . ಪ್ರೊ. ಚಂದ್ರಶೇಖರ ಹೆಗಡೆ, ಡಾ. ವಿ.ಎ.ಬೆಳಕಿನಾಳ, ಜಿ.ಎಸ್.ಕೋಟಿ, ಡಾ. ವಿ.ಎನ್.ಢಾಣಕಶಿರೂರ, ಅಶೋಕ ಹೆಗಡೆ, ಸುರೇಶ ಪರ್ವತೀಕರ, ರವಿ ಅಂಗಡಿ, ಸಿದ್ದು ರಾವಳ, ಎಸ್. ಎಸ್.ಗುರವ, ಸುರೇಶ ವಗ್ಗಾ, ಸಿದ್ದರಾಮಯ್ಯ ಪುರಾಣಿಕಮಠ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಶೋಧಕ ಡಾ. ಸಣ್ಣವೀರಣ್ಣ ದೊಡ್ಡಮನಿ ಅಭಿಮತ
  • ನೋವು ನಲಿವು ಕೃತಿ ಬಿಡುಗಡೆ
  • ಅಭಾಸಾಪ ಉದ್ಘಾಟನೆ
ಗುಳೇದಗುಡ್ಡ: ಕವಿಯಾದವನು ಸಮಾಜದ ಸಂಕಟಕ್ಕೆ, ಹಸಿದವರ ನೋವಿಗೆ ಮಿಡಿಯಬೇಕು. ಪ್ರಭುತ್ವ ಶಾಹಿಗಳ ಅಟ್ಟಹಾಸದಲ್ಲಿ ಮನುಷ್ಯತ್ವ ಉಳಿಸುವ ಕವಿಯು ಜೀವ ಪರ ನಿಲುವನ್ನು ಪ್ರತಿಪಾದಿಸುವ ಕಾವ್ಯ ರಚಿಸಬೇಕು ಎಂದು ಸಂಶೋಧಕ ಡಾ. ಸಣ್ಣವೀರಣ್ಣ ದೊಡ್ಡಮನಿ ಹೇಳಿದರು.
ಪಟ್ಟಣದ ಚಿತ್ರಚೇತನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಹಕಾರದೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ಕವಿ ಮಹಾದೇವ ಜಗತಾಪ ರಚನೆಯ ನೋವು ನಲಿವು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಡವಾಳಿಗರು ಬಡವರನ್ನು ನಿರ್ಗತಿಕರನ್ನಾಗಿಸಿ ಹಣದ ರುಜುವಾತಿಗೆ ಹೆಣದ ಸಾಕ್ಷಿ ಕೇಳುವ ಅಟ್ಟಹಾಸ ಹೆಚ್ಚಾಗಿದೆ. ದೌರ್ಜನ್ಯ ಎದುರಿಸಿ ಮಾನವೀಯತೆ ಉಳಿಸುವುದೇ ಕವಿಯ ಧ್ಯೇಯವಾಗಿಲಿ. ಕವಿ ಮಹಾದೇವ ಜಗತಾಪ ನೋವು ನಲಿವನ್ನು ಕಾವ್ಯದ ರೂಪಕ್ಕೆ ಇಳಿಸಿ ಸಮಾಜದಲ್ಲಿ ಅದನ್ನು ಪರಿಚಯಿಸುವ ಕಾರ್ಯ ಮಾಡಿದ್ದಾರೆ ಎಂದರು.
ಕೃತಿ ಕುರಿತು ಪ್ರೊ. ಚಂದ್ರಶೇಖರ ಹೆಗಡೆ ಮಾತನಾಡಿ, ಮಹಾದೇವ ಜಗತಾಪ ಅವರ ಕಾವ್ಯ ರಾಷ್ಟ್ರ ಪ್ರೇಮ ಪ್ರತಿಪಾದಿಸುತ್ತದೆ. ಕವಿಯ ಆಲೋಚನೆ ನವೋದಯದ ಛಾಯೆಯಾಗಿ, ಸಾಂಸ್ಕೃತಿಕ ಹಿರಿಮೆ, ಇತಿಹಾಸ, ಚಿತ್ರಕಲಾ ಯೋಗ ಪರಿಣಿತಿಯ ಅನುಭವಗಳ ಕನ್ನಡಿಯಾಗಿದೆ ಎಂದು ತಿಳಿಸಿದರು.
ಡಾ. ರಾಜಶೇಖರ ಬಸುಪಟ್ಟದ ಮಾತನಾಡಿ, ಕವಿ ಮಹಾದೇವ ಜಗತಾಪ ಅವರು ನಿವೃತ್ತಿ ಆದ ನಂತರ ಕಾವ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದರು.
ಡಾ. ವಿ.ಎ.ಬೆಳಕಿನಾಳ ಮಾತನಾಡಿ, ಮಹಾದೇವ ಜಗತಾಪ ಅವರು ಯೋಗ ಮತ್ತು ಚಿತ್ರ ಕಲೆಯನ್ನು ರೂಢಿಸಿಕೊಂಡು ಇತ್ತೀಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ನೋವು ನಲಿವು ಕವನ ಸಂಕಲನದ ಮೂಲಕ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದು ಪ್ರಶಂಸನೀಯ ಎಂದು ತಿಳಿಸಿದರು.
ರಾಜ್ಯ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್.ಕೋಟಿ, ಥೈಲ್ಯಾಂಡ್ದಲ್ಲಿ ಸ್ಪಿರಿಟ್ ಯೋಗ ಕೇಂದ್ರ ಯೋಗ ತರಬೇತಿ ನೀಡುತ್ತಿರುವ ಮಾರುತಿ ಜಗತಾಪ ಅವರನ್ನು ಸನ್ಮಾನಿಸಲಾಯಿತು.
ಡಾ.ವಿ.ಎನ್.ಢಾಣಕಶಿರೂರ, ಅಶೋಕ ಹೆಗಡೆ, ಸುರೇಶ ಪರ್ವತೀಕರ, ರವಿ ಅಂಗಡಿ, ಸಿದ್ದು ರಾವಳ, ಎಸ್. ಎಸ್.ಗುರವ, ಸುರೇಶ ವಗ್ಗಾ, ಸಿದ್ದರಾಮಯ್ಯ ಪುರಾಣಿಕಮಠ, ದೀಪಕ ಜಗತಾಪ, ಮೋಹನ ಕರನಂದಿ, ಶಂಕರ ಲಮಾಣಿ, ವಿದ್ಯಾ ಜಗತಾಪ, ಶಶಿಕಲಾ ಜಗತಾಪ, ಹುಚ್ಚೇಶ ಯಂಡಿಗೇರಿ, ಲಕ್ಷ್ಮೀಭಾಯಿ ಜಾಧವ ಇತರರಿದ್ದರು.
ಅಭಾಸಾಪ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಜನಾಳ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net