ನ್ಯಾಯಸಮ್ಮತ ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ

ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಬಸವರಾಜ ಬಡ್ಡಿ, ಅಜ್ಜಪ್ಪ ನಾಡಗೌಡ, ಮಹಾಂತೇಶ ನಾಡಗೌಡ ಇತರರಿದ್ದರು.
ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಅವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಬಸವರಾಜ ಬಡ್ಡಿ, ಅಜ್ಜಪ್ಪ ನಾಡಗೌಡ, ಮಹಾಂತೇಶ ನಾಡಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಭರವಸೆ
  • ಇದ್ದಲಗಿ ಗ್ರಾಮದ ಸಂತ್ರಸ್ತರ ಅಹೋರಾತ್ರಿ ಧರಣಿ
ಹುನಗುಂದ : ತಾಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರ ಅಹೋರಾತ್ರಿ ಧರಣಿ ಮುಂದುವರಿದಿದ್ದು, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ಕಳೆದ 18 ವರ್ಷಗಳಿಂದ ಎದುರಿಸುತ್ತಿರುವ ಸಂಕಷ್ಟಗಳು ಗಂಭೀರವಾಗಿದ್ದು, ಮನೆ-ಆಸ್ತಿ ಕಳೆದುಕೊಂಡ ಜನರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವುದು ದುಃಖಕರ ಸಂಗತಿ ಎಂದು ಹೇಳಿದರು.
ಒಂದು ಗುಂಟೆ ಜಾಗಕ್ಕೆ ಬದಲಿ ನಾಲ್ಕು ಗುಂಟೆ ನೀಡಬೇಕು ಎಂಬ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ಅವೇಶನದಲ್ಲಿ ಸಂತ್ರಸ್ತರ ಪರ ಧ್ವನಿಯಾಗುವುದಾಗಿ ಭರವಸೆ ನೀಡಿದ ನಿರಾಣಿ, ಅಧಿಕಾರಿಗಳೊಂದಿಗೆ ತುರ್ತು ಚರ್ಚೆ ನಡೆಸಿ ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಸ್ಥಳೀಯ ಜನಪ್ರತಿನಿಗಳ ಸಹಕಾರದೊಂದಿಗೆ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದರು. ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಸಬೇಕು ಎಂದು ಸಂತ್ರಸ್ತರಿಗೆ ಕರೆ ನೀಡಿದರು.
ಮುಖಂಡ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿ, ಸರ್ಕಾರ ಬೇಗನೆ ಕ್ರಮ ಕೈಗೊಂಡು ಸಂತ್ರಸ್ತರಿಗೆ ನೆರವು ನೀಡಬೇಕು ಎಂದು ಆಗ್ರಹಿಸಿದರು. ಹಸನ್ ಪಿಂಜಾರ ಸೇರಿ ಗ್ರಾಮಸ್ಥರು ತಮ್ಮ ಬೇಡಿಕೆಗಳ ಮನವಿಯನ್ನು ನಿರಾಣಿ ಅವರಿಗೆ ಸಲ್ಲಿಸಿದರು.
ಮುಖಂಡರಾದ ಬಸವರಾಜ ಬಡ್ಡಿ, ಅಜ್ಜಪ್ಪ ನಾಡಗೌಡ, ಮಹಾಂತೇಶ ನಾಡಗೌಡ, ಸಂಗಣ್ಣ ಹೊಸೂರ, ಕಲ್ಲಪ್ಪ ಆನೆಹೊಸೂರ, ಭೀಮಣ್ಣ, ಅಡಿಹಾಳ, ಸರೋಜಮ್ಮ ಹಿರೇಮಠ, ಮೀನಾಕ್ಷಿ ಗಂಜಿಹಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net