ಜೀವನ ನಿರಂತರ ಕಲಿಕೆ ಶಾಲೆಯಾಗಲಿ

 ರಬಕವಿ/ಬನಹಟ್ಟಿ ತಾಲೂಕಿನ ಹೊಸೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪಾಲಕರ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಮಹಾನಂದಾ ಹೊಸಮಠ, ಸಿ.ಪಿ. ಕರಲಟ್ಟಿ, ಮಹಾಲಿಂಗಪ್ಪ ಹುಲಗಬಾಳಿ, ಕಸ್ತೂರಿ ಹುಲಗಬಾಳಿ ಇತರರಿದ್ದರು.
ರಬಕವಿ/ಬನಹಟ್ಟಿ ತಾಲೂಕಿನ ಹೊಸೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪಾಲಕರ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಮಹಾನಂದಾ ಹೊಸಮಠ, ಸಿ.ಪಿ. ಕರಲಟ್ಟಿ, ಮಹಾಲಿಂಗಪ್ಪ ಹುಲಗಬಾಳಿ, ಕಸ್ತೂರಿ ಹುಲಗಬಾಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಹೇಳಿಕೆ
  • ಅಭಿನಂದನಾ ಸಮಾರಂಭ ಆಯೋಜನೆ
  • ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು.
ರಬಕವಿ/ಬನಹಟ್ಟಿ : ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಪುಸ್ತಕ ಓದಿನೊಂದಿಗೆ ಜೀವನವೇ ನಿರಂತರ ಕಲಿಕೆಯ ಶಾಲೆಯಾಗಬೇಕು ಎಂದು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ ಹೇಳಿದರು.
ತಾಲೂಕಿನ ಹೊಸೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪಾಲಕರ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಕೇವಲ ಪರೀಕ್ಷೆಗೆ ಸೀಮಿತವಾಗದೆ ಬದುಕಿನ ಮೌಲ್ಯಗಳನ್ನು ಬೆಳೆಸುವ ಸಾಧನವಾಗಬೇಕು ಎಂದರು.
ಶಿಕ್ಷಕ ಸಿ.ಪಿ. ಕರಲಟ್ಟಿ ಅವರ ಸಾಧನೆ ಶ್ಲಾಸಿದ ಅವರು, ಇಂತಹ ಶಿಕ್ಷಕರು ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಮುಖ್ಯಶಿಕ್ಷಕ ಮಹಾನಂದ ಹೊಸಮಠ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಪಾಲಕರು ಮತ್ತು ಶಿಕ್ಷಕರ ಪರಸ್ಪರ ಸಹಕಾರ ಅತ್ಯಗತ್ಯವಾಗಿದೆ. ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ಎಲ್ಲರೂ ಸಮಾನವಾಗಿ ಹೊತ್ತುಕೊಳ್ಳಬೇಕು ಎಂದು ತಿಳಿಸಿದರು.
ಡಾ. ನಾಗಲೋಟಿಮಠ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿ.ಪಿ. ಕರಲಟ್ಟಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರವಿ ಹೊನಗೌಡ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಲಿತಾಂಶ ದಾಖಲಿಸಿದ ಮುಖ್ಯ ಶಿಕ್ಷಕ ಮಹಾನಂದ ಹೊಸಮಠ, ಇಂಗ್ಲಿಷ್ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಶ್ರೇಯಾ ಬಸಲಿಂಗಗೋಳ ಹಾಗೂ ಇಂಗ್ಲಿಷ್ ಶಿಕ್ಷಕ ಸುರೇಶ್ ಪರಲಂಕಿ ಅವರನ್ನು ಸನ್ಮಾನಿಸಲಾಯಿತು.
ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ 1,000 ನಗದು ಬಹುಮಾನ ನೀಡುವುದಾಗಿ ಹುಲಗಬಾಳಿ ಕುಟುಂಬ ಘೋಷಿಸಿತು.
ಮಹಾಲಿಂಗಪ್ಪ ಹುಲಗಬಾಳಿ, ಕಸ್ತೂರಿ ಹುಲಗಬಾಳಿ, ಚಂದ್ರಶೇಖರ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ ಪಾಟೀಲ, ಸದಾಶಿವ ಜಕನೂರ, ರವಿ ಹೊನಗೌಡ, ಡಾ. ಸಂಗಮೇಶ ಬಗಲಿ, ಆರ್.ಎ. ಮಟ್ಯಾಳ, ಎಸ್.ಡಿ. ಮಠಪತಿ, ಬಿ.ಜಿ. ಜಮಖಂಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net