ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಿವತ್ತ ಮುಖ್ಯ ಶಿಕ್ಷಕ ಪಾಂಡುರಂಗ ಪತ್ತಾರ ಅವರ ಸನ್ಮಾನ ಹಾಗೂ ಬೀಳ್ಕೊಡುವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ನಿವತ್ತ ಶಿಕ್ಷಕ ಪತ್ತಾರ ದಂಪತಿ, ಶಿಕ್ಷಣ ಸಂಯೋಜಕ ಬಿ.ಎಂ. ಹಳೆಮನಿ, ಗುರುಬಸು ಹುಕ್ಕೇರಿ ಮತ್ತಿತರರಿದ್ದರು.
ಪತ್ತಾರ ಅವರ ಸೇವಾ ಅವಧಿಯ ಅನುಭವಗಳನ್ನು ಸ್ಮರಿಸಿ, ಅವರ ಶೈಕ್ಷಣಿಕ ಕೊಡುಗೆಯನ್ನು ಕೊಂಡಾಡಿದರು
ತೇರದಾಳ : ಶಿಕ್ಷಕರು ಶಿಕ್ಷಣದ ಜೊತೆಗೆ ಕ್ರೀಡಾ ಹಾಗೂ ವ್ಯಕ್ತಿತ್ವ ವಿಕಾಸಕ್ಕೂ ಮಾರ್ಗದರ್ಶನ ನೀಡುವ ಮಹತ್ವದ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಮುನಿ ಕುಲರತ್ನಭೂಷಣ ಮಹಾರಾಜರು ಹೇಳಿದರು.
ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿವತ್ತ ಮುಖ್ಯ ಶಿಕ್ಷಕ ಪಾಂಡುರಂಗ ಪತ್ತಾರ ಅವರ ಸನ್ಮಾನ ಹಾಗೂ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಂಡುರಂಗ ಪತ್ತಾರ ಅವರು ತಮ್ಮ ಸೇವಾ ಅವಧಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದು, ನಿವತ್ತಿಯ ನಂತರವೂ ನಾಡು-ನುಡಿ ಮತ್ತು ಸಂಸ್ಕೃತಿ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಶಿಸಿದರು.
ಗಣ್ಯರು ಮಾತನಾಡಿ, ಪತ್ತಾರ ಅವರ ಸೇವಾ ಅವಧಿಯ ಅನುಭವಗಳನ್ನು ಸ್ಮರಿಸಿ, ಅವರ ಶೈಕ್ಷಣಿಕ ಕೊಡುಗೆಯನ್ನು ಕೊಂಡಾಡಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಹಳೆಯ ವಿದ್ಯಾರ್ಥಿಗಳು, ಸ್ನೇಹಿತರು ಹಾಗೂ ಬಂಧುಗಳು ಪತ್ತಾರ ದಂಪತಿಯನ್ನು ಸನ್ಮಾನಿಸಿ, ಗೌರವಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಪರಪ್ಪ ಘೂಳ್ಳನ್ನವರ, ಗುರುಬಸು ಹುಕ್ಕೇರಿ, ಸಂಗಪ್ಪ ಮಾಲಗಾಂವಿ, ಶಿಕ್ಷಣ ಸಂಯೋಜಕ ಬಿ.ಎಂ. ಹಳೆಮನಿ, ಸಿಆರ್‌ಪಿಗಳಾದ ಮಹೇಶ ಸೋರಗಾಂವಿ, ಭರತೇಶ ಯಲ್ಲಟ್ಟಿ, ಬಿ.ಆರ್. ಹನಗಂಡಿ, ಡಿ.ಬಿ. ಜಾಯಗೊಂಡ, ಎಂ.ಎಸ್. ಗಡೆನ್ನವರ, ಪಿ.ಸತೀಶ, ಸಂಜು ಕಲೆಗಾರ ಸೇರಿ ಅನೇಕರು ಉಪಸ್ಥಿತರಿದ್ದರು.