ಸತ್ಯಾಗ್ರಹಕ್ಕೆ ಬೆಂಬಲಿಸಿದ ಕುಲಹಳ್ಳಿ ಗ್ರಾಮಸ್ಥರು

ಬನಹಟ್ಟಿಯಲ್ಲಿ ಪ್ರಜಾಸೌಧಕ್ಕಾಗಿ ನಡೆಯುತ್ತಿರುವ ಸರದಿ ಸತ್ಯಾಗ್ರಹದ 10ನೇ ದಿನವಾದ ಸೋಮವಾರ ವ್ಯಾಪಾರಸ್ಥರ ಸಂಘ ಹಾಗೂ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಮೆರವಣಿಗೆಯೊಂದಿಗೆ ಪ್ರತಿಭಟಸಿದರು. ಭದ್ರಿನಾರಾಯಣ ಭಟ್ಟಡ, ಆದಾಶ ಪಾಲಭಾಂವಿ ಇದ್ದರು.
ಬನಹಟ್ಟಿಯಲ್ಲಿ ಪ್ರಜಾಸೌಧಕ್ಕಾಗಿ ನಡೆಯುತ್ತಿರುವ ಸರದಿ ಸತ್ಯಾಗ್ರಹದ 10ನೇ ದಿನವಾದ ಸೋಮವಾರ ವ್ಯಾಪಾರಸ್ಥರ ಸಂಘ ಹಾಗೂ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಮೆರವಣಿಗೆಯೊಂದಿಗೆ ಪ್ರತಿಭಟಸಿದರು. ಭದ್ರಿನಾರಾಯಣ ಭಟ್ಟಡ, ಆದಾಶ ಪಾಲಭಾಂವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 1ನೇ ದಿನಕ್ಕೆ ಕಾಲಿಟ್ಟ ಹೋರಾಟ
  • ವ್ಯಾಪಾರಸ್ಥರು ಭಾಗಿ
  • ಕ್ಷೇತ್ರದಲ್ಲಿಯೇ ಮಹತ್ತರ ಪಟ್ಟಣವಾಗಿರುವ ಬನಹಟ್ಟಿಗೆ ಅನ್ಯಾಯವಾಗುತ್ತಿದೆ.
ರಬಕವಿ-ಬನಹಟ್ಟಿ:

ಬನಹಟ್ಟಿಯಲ್ಲಿಯೇ ಪ್ರಜಾಸೌಧ ನಿರ್ಮಾಣಕ್ಕಾಗಿ ಚನ್ನಮ್ಮ ವೃತ್ತದಲ್ಲಿ 10 ದಿನಗಳಿಂದ ನಡೆಯುತ್ತಿರುವ ಹೋರಾಟ ಸೋಮವಾರವು ಮುಂದುವರಿದಿದ್ದು, ಕುಲಹಳ್ಳಿ ಗ್ರಾಮಸ್ಥರು ಭಾಗವಹಿಸಿ ಅಧಿಕೃತ ಠರಾವು ನೀಡುವ ಮೂಲಕ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.

ಆಸಂಗಿ, ಅಸ್ಕಿ, ಯಲ್ಲಟ್ಟಿ, ಜಗದಾಳ, ನಾವಲಗಿ ಹಾಗೂ ಬಂಡಿಗಣಿ ಗ್ರಾಮಗಳಿಂದ ಬೆಂಬಲ ವ್ಯಕ್ತವಾಗಿದ್ದು, ಶೀಘ್ರವೇ ಅಧಿಕೃತ ಠರಾವಿನೊಂದಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ ಎಂದು ಪ್ರಜಾಸೌಧ ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ ತಿಳಿಸಿದ್ದಾರೆ.
ವ್ಯಾಪಾರಸ್ಥರ ಸಂಘ ಹಾಗೂ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ನೂರಾರು ಸದಸ್ಯರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿ ಇಡೀ ದಿನ ಸತ್ಯಾಗ್ರಹದಲ್ಲಿ ಕುಳಿತು ಪ್ರಜಾಸೌಧವಾಗುವವರೆಗೂ ಹೋರಾಟ ನಿಲ್ಲದೆಂದು ಸ್ಪಷ್ಟಪಡಿಸಿದರು.
ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬದ್ರಿನಾರಯಣ ಭಟ್ಟಡ ಮಾತನಾಡಿ, ಕ್ಷೇತ್ರದಲ್ಲಿಯೇ ಮಹತ್ತರ ಪಟ್ಟಣವಾಗಿರುವ ಬನಹಟ್ಟಿಗೆ ಅನ್ಯಾಯವಾಗುತ್ತಿದೆ. ಸೂಕ್ತ ಸ್ಥಳಾವಕಾಶ ಹಾಗೂ ಕೇಂದ್ರಿಕೃತ ಪ್ರದೇಶವಾಗಿರುವ ಪ್ರದೇಶ ಕಡೆಗಣಿಸುವ ಬದಲು ನೂಲಿನ ಗಿರಣಿ ಹತ್ತಿರದ ಕಂದಾಯ ಜಾಗೆಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆಕಾಶ ಪಾಲಭಾಂವಿ ಮಾತನಾಡಿದರು. ಗಿರೀಶ ಕಾಡದೇವರ, ಈರಣ್ಣ ಬಾಣಕಾರ, ಮಹಾಲಿಂಗಯ್ಯ ಮಠದ, ಪ್ರಶಾಂತ ನಾಯಕ, ರವಿ ಬಾಗೇವಾಡಿ, ಅರವಿಂದ ಪತ್ತಾರ, ಸೋಮು ಅಬಕಾರ, ಶ್ರೀಶೈಲ ಬೀಳಗಿ, ಅಶೋಕ ಮಹಾಜನ, ಸಂಜು ಸರ್ವೋದಯ, ಶ್ಯಾಮ ಭುತಡಾ, ಭೀಮಸಿ ರಾವಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net