ಎಂ.ಎನ್. ನದಾಫ್ ಜಮಖಂಡಿ ಮಹಾರಾಷ್ಟ್ರದ ಕೃಷ್ಣಾ ಕಣಿವೆಯ ಜಲಾನಯನ ಪ್ರದೇಶಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಜಮಖಂಡಿ ತಾಲೂಕಿನ ಕೃಷ್ಣಾ ನದಿಯಲ್ಲಿ ಒಂದೇ ದಿನದಲ್ಲಿ 30 ಸಾವಿರ ಕ್ಯೂಸೆಕ್‌ನಷ್ಟು ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ. ಜಲಾನಯನ ಪ್ರದೇಶಗಳಲ್ಲಿ ಮಹಾರಾಷ್ಟçದ ಕೃಷ್ಣಾ ಶ್ರೇಣಿಯ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ರಾಧಾನಗರಿ 238 ಮಿ.ಮೀ, ಮಹಾಬಲೇಶ್ವರ 179, ದೂದಗಂಗಾ 169, ನವಜಾ 161, ಕೋಯನಾ 116, ತರಲಿ 81, ವಾರಣಾ 72, ಕನ್ಹೇರಿ:45, ಉರಮೋಡಿ: 45, ದೋಮ 37 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ. ಭಾನುವಾರ ನಸುಕಿನ ಜಾವದಿಂದಲೇ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ ಏಕಾಏಕಿ 30 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದೆ. ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಹೆಚ್ಚುತ್ತಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಬಂದಷ್ಟೇ ಪ್ರಮಾಣದ ನೀರನ್ನು ನದಿಯ ಕೆಳಭಾಗಕ್ಕೆ ಹರಿಬಿಡಲಾಗುತ್ತಿದೆ ಎಂದು ಬ್ಯಾರೇಜ್‌ನ ಅಽಕಾರಿ ವಿಠ್ಠಲ ನಾಯಕ ತಿಳಿಸಿದ್ದಾರೆ. ಕೃಷ್ಣಾ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಸೋಮವಾರ 50 ಸಾವಿರ ಕ್ಯೂಸೆಕ್ ದಾಟುವ ಸಂಭವ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹನಿ ನೀರಿಗೂ ತತ್ವಾರ ಪಟ್ಟಿದ್ದ ಜನ ಕಳೆದ ಮೂರು ತಿಂಗಳಿನಿಂದ ಕೃಷ್ಣಾ ನದಿ ಪಾತ್ರ ಸಂಪೂರ್ಣ ಒಣಗಿಹೋಗಿತ್ತು. ನದಿ ತೀರದ ಗ್ರಾಮಸ್ಥರು ಕುಡಿಯುವ ಹಾಗೂ ಬಳಕೆಯ ಹನಿ ನೀರಿಗಾಗಿಯೂ ತೀವ್ರ ಪರಿತಪಿಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಮಹಾರಾಷ್ಟ್ರದ ಮಳೆಯಿಂದಾಗಿ ಕೇವಲ 24 ಗಂಟೆಗಳಲ್ಲಿ ನದಿಯ ಒಡಲು ಸಂಪೂರ್ಣ ತುಂಬಿ, ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿರುವುದು ತೀರದ ಜನರಲ್ಲಿ ಆಶ್ಚರ್ಯ ಮತ್ತು ಆತಂಕ ಎರಡನ್ನೂ ಮೂಡಿಸಿದೆ. ಗ್ರಾಮಸ್ಥರ ಒತ್ತಾಯ ಮಹಾರಾಷ್ಟçದಲ್ಲಿ ಮಳೆ ತೀವ್ರಗೊಂಡಾಗ ಅಲ್ಲಿನ ಜಲಾಶಯ ಹಾಗೂ ಬ್ಯಾರೇಜ್‌ಗಳಿಂದ ರಾತ್ರೋರಾತ್ರಿ ಮುನ್ಸೂಚನೆ ಇಲ್ಲದೆ ಉಕ್ಕಿ ಹರಿಯುವಷ್ಟು ನೀರನ್ನು ಬಿಡಲಾಗುತ್ತದೆ. ಇದರಿಂದಾಗಿ ನಮ್ಮ ಭಾಗದ ನದಿ ಪಾತ್ರದ ಜನರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಇಲ್ಲಿನ ನೀರಾವರಿ ಅಧಿಕಾರಿಗಳು ಮಹಾರಾಷ್ಟçದ ಜಲಾನಯನ ಅಧಿಕಾರಿಗಳೊಂದಿಗೆ 24 ಗಂಟೆಯೂ ಸಂಪರ್ಕದಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಪ್ರವಾಹದ ಪರಿಸ್ಥಿತಿ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ನದಿ ತೀರದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ಕೃಷ್ಣಾ ಕಣಿವೆಯ ಜಲಾನಯನ ಪ್ರದೇಶಗಳಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ, ಜಮಖಂಡಿ ತಾಲೂಕಿನ ಕೃಷ್ಣಾ ನದಿಯಲ್ಲಿ ಒಂದೇ ದಿನದಲ್ಲಿ 30 ಸಾವಿರ ಕ್ಯೂಸೆಕ್‌ನಷ್ಟು ಭಾರಿ ಪ್ರಮಾಣದ ನೀರು ಹರಿದುಬರುತ್ತಿದೆ.
ಜಲಾನಯನ ಪ್ರದೇಶಗಳಲ್ಲಿ ಮಹಾರಾಷ್ಟ್ರದ ಕೃಷ್ಣಾ ಶ್ರೇಣಿಯ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ರಾಧಾನಗರಿ 238 ಮಿ.ಮೀ, ಮಹಾಬಲೇಶ್ವರ 179, ದೂದಗಂಗಾ 169, ನವಜಾ 161, ಕೋಯನಾ 116, ತರಲಿ 81, ವಾರಣಾ 72, ಕನ್ಹೇರಿ:45, ಉರಮೋಡಿ: 45, ದೋಮ 37 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.
ಭಾನುವಾರ ನಸುಕಿನ ಜಾವದಿಂದಲೇ ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ ಏಕಾಏಕಿ 30 ಸಾವಿರ ಕ್ಯೂಸೆಕ್‌ನಷ್ಟು ನೀರು ಹರಿದು ಬರುತ್ತಿದೆ. ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಹೆಚ್ಚುತ್ತಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಬಂದಷ್ಟೇ ಪ್ರಮಾಣದ ನೀರನ್ನು ನದಿಯ ಕೆಳಭಾಗಕ್ಕೆ ಹರಿಬಿಡಲಾಗುತ್ತಿದೆ ಎಂದು ಬ್ಯಾರೇಜ್‌ನ ಅಽಕಾರಿ ವಿಠ್ಠಲ ನಾಯಕ ತಿಳಿಸಿದ್ದಾರೆ.
ಕೃಷ್ಣಾ ನದಿಯಲ್ಲಿ ಹರಿಯುವ ನೀರಿನ ಪ್ರಮಾಣ ಸೋಮವಾರ 50 ಸಾವಿರ ಕ್ಯೂಸೆಕ್ ದಾಟುವ ಸಂಭವ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಹನಿ ನೀರಿಗೂ ತತ್ವಾರ ಪಟ್ಟಿದ್ದ ಜನ
ಕಳೆದ ಮೂರು ತಿಂಗಳಿನಿಂದ ಕೃಷ್ಣಾ ನದಿ ಪಾತ್ರ ಸಂಪೂರ್ಣ ಒಣಗಿಹೋಗಿತ್ತು. ನದಿ ತೀರದ ಗ್ರಾಮಸ್ಥರು ಕುಡಿಯುವ ಹಾಗೂ ಬಳಕೆಯ ಹನಿ ನೀರಿಗಾಗಿಯೂ ತೀವ್ರ ಪರಿತಪಿಸುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಮಹಾರಾಷ್ಟ್ರದ ಮಳೆಯಿಂದಾಗಿ ಕೇವಲ 24 ಗಂಟೆಗಳಲ್ಲಿ ನದಿಯ ಒಡಲು ಸಂಪೂರ್ಣ ತುಂಬಿ, ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿರುವುದು ತೀರದ ಜನರಲ್ಲಿ ಆಶ್ಚರ್ಯ ಮತ್ತು ಆತಂಕ ಎರಡನ್ನೂ ಮೂಡಿಸಿದೆ.
ಗ್ರಾಮಸ್ಥರ ಒತ್ತಾಯ
ಮಹಾರಾಷ್ಟçದಲ್ಲಿ ಮಳೆ ತೀವ್ರಗೊಂಡಾಗ ಅಲ್ಲಿನ ಜಲಾಶಯ ಹಾಗೂ ಬ್ಯಾರೇಜ್‌ಗಳಿಂದ ರಾತ್ರೋರಾತ್ರಿ ಮುನ್ಸೂಚನೆ ಇಲ್ಲದೆ ಉಕ್ಕಿ ಹರಿಯುವಷ್ಟು ನೀರನ್ನು ಬಿಡಲಾಗುತ್ತದೆ. ಇದರಿಂದಾಗಿ ನಮ್ಮ ಭಾಗದ ನದಿ ಪಾತ್ರದ ಜನರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಇಲ್ಲಿನ ನೀರಾವರಿ ಅಧಿಕಾರಿಗಳು ಮಹಾರಾಷ್ಟçದ ಜಲಾನಯನ ಅಧಿಕಾರಿಗಳೊಂದಿಗೆ 24 ಗಂಟೆಯೂ ಸಂಪರ್ಕದಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಪ್ರವಾಹದ ಪರಿಸ್ಥಿತಿ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ನದಿ ತೀರದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.