ಕಿತ್ತೂರ ರಾಣಿ ಚನ್ನಮ್ಮ ಸ್ವಾಭಿಮಾನದ ಪ್ರತೀಕ

ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದಲ್ಲಿ ನೂತನ ಚನ್ನಮ್ಮ ಕಂಚಿನ ಮೂರ್ತಿಯನ್ನು ಶಾಸಕ ಉಮೇಶ ಮೇಟಿ ಲೋಕಾರ್ಪಣೆಗೊಳಿಸಿದರು. ಬಿಲ್‌ಕೆರೂರ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಪರಿಷತ್ ಸದಸ್ಯ ಹನಮಂತ ನಿರಾಣಿ, ಬಸವಂತಪ್ಪ ಮೇಟಿ, ಸಮಾಜದ ಹಿರಿಯರಾದ ನಿಂಗಪ್ಪ ಕೋಟಿ, ಬಸವರಾಜ ನರಗುಂದ, ಇತರರಿದ್ದರು
ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದಲ್ಲಿ ನೂತನ ಚನ್ನಮ್ಮ ಕಂಚಿನ ಮೂರ್ತಿಯನ್ನು ಶಾಸಕ ಉಮೇಶ ಮೇಟಿ ಲೋಕಾರ್ಪಣೆಗೊಳಿಸಿದರು. ಬಿಲ್‌ಕೆರೂರ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಪರಿಷತ್ ಸದಸ್ಯ ಹನಮಂತ ನಿರಾಣಿ, ಬಸವಂತಪ್ಪ ಮೇಟಿ, ಸಮಾಜದ ಹಿರಿಯರಾದ ನಿಂಗಪ್ಪ ಕೋಟಿ, ಬಸವರಾಜ ನರಗುಂದ, ಇತರರಿದ್ದರು
Published on: 

ಬಾಗಲಕೋಟೆ: ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಬ್ರಿಟಿಷರೊಂದಿಗೆ ಧೈರ್ಯ, ಶೌರ್ಯದಿಂದ ಹೋರಾಡಿದ ವೀರಮಾತೆ ಕಿತ್ತೂರು ಚನ್ನಮ್ಮ ಸ್ವಾಭಿಮಾನ ಪ್ರತೀಕವಾಗಿದ್ದಾರೆ ಎಂದು ಶಾಸಕ ಉಮೇಶ ಮೇಟಿ ಹೇಳಿದರು.

ತಾಲೂಕಿನ ಸುತಗುಂಡಾರ ಗ್ರಾಮದಲ್ಲಿ ಸಮಸ್ತ ದೈವ ಮಂಡಳಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ನೂತನ ರಾಣಿ ಚನ್ನಮ್ಮ ಕಂಚಿನ ಮೂರ್ತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಕಿತ್ತೂರು ಚನ್ನಮ್ಮ ಎಂದರೆ ಧೈರ್ಯ, ಸಾಹಸ, ಸ್ವಾಭಿಮಾನದ ಸಂಕೇತ, ದೇಶಪ್ರೇಮದ ಪ್ರತೀಕ. ಸ್ವಾಭಿಮಾನಿ ಸೈನಿಕರನ್ನು ಒಗ್ಗೂಡಿಸಿ ಸ್ವತಂತ್ರ ರಾಜ್ಯಕ್ಕಾಗಿ ಛಲ ಬಿಡದೆ ಹೋರಾಡಿದ ವೀರ ವನಿತೆ. ಮಹಿಳೆಯರಿಗೆ ಸಮಾನತೆ ಎಂಬುದು ದೂರಾಗಿದ್ದ ಅಂದಿನ ಕಾಲದಲ್ಲಿ ತನ್ನ ಅಸ್ಮಿತೆಯನ್ನು ಸಾಬೀತುಪಡಿಸಿದ ವೀರಾಗ್ರಣಿ ಸ್ವಾಭಿಮಾನದ ಬದುಕು ನಮ್ಮೆಲ್ಲರಿಗೂ ಮಾದರಿ ಎಂದರು.

ಕಿತ್ತೂರು ರಾಣಿ ಚನ್ನಮ್ಮ ಕೇವಲ ಸೀಮಿತ ಜಾತಿಗೆ ಸೇರಿಲ್ಲ. ಸರ್ವರು ಚನ್ನಮ್ಮನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮವಾದ ಬದುಕು ಕಟ್ಟಿಕೊಳ್ಳಬೇಕು. ಸರ್ವ ಜಾತಿ ಜನಾಂಗದ ಜನರು ಅವರ ನಡೆ ನುಡಿಗಳನ್ನು ಆಚರಿಸಿಕೊಂಡು ಬರಬೇಕು. ಚನ್ನಮ್ಮನ ಶೌರ್ಯ ಮಕ್ಕಳಿಗೆ ತಿಳಿಸುವಂತ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕು.

| ಸಿದ್ಧಲಿಂಗ ಶ್ರೀಗಳು ಬಿಲ್‌ಕೆರೂರ ಬಿಲ್ವಾಶ್ರಮ ಹಿರೇಮಠ.

ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ಚನ್ನಮ್ಮ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಶೌರ್ಯ, ಮಾನವೀಯ ಮೌಲ್ಯಗಳ ಕುರಿತು ಈಗಿನ ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಎಲ್ಲರೂ ಚನ್ನಮ್ಮನಂತೆ ಬದುಕಬೇಕು ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಸಮಾಜದ ಹಿರಿಯರಾದ ನಿಂಗಪ್ಪ ಕೋಟಿ, ಬಸವರಾಜ ನರಗುಂದ, ಶಿವಾನಂದ ಅಪ್ಜಲಪುರ, ಹನಮಂತ ಪೂಜಾರಿ, ಸಂಗಮೇಶ ದೊಡ್ಡಮನಿ, ಬಿ.ಸಿ. ಉಳ್ಳಾಗಡ್ಡಿ, ಶ್ರೀಕರ್ ದೇಸಾಯಿ, ವಿಠ್ಠಲ ಮನಗೂಳಿ ಇತರರಿದ್ದರು.

ಕಂಚಿನ ಮೂರ್ತಿ, ಮಹಿಳೆಯರ ಕುಂಭಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net