ಬಾದಾಮಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು. ಬಿ.ಎಸ್. ಪಾಟೀಲ, ಗುಂಡಪ್ಪ ತೀರ್ಥಪ್ಪನವರ, ಎಸ್.ಎಂ. ಹೊಸಮನಿ, ಎಚ್.ಬಿ. ಬರಗಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂಘದ ಅಧ್ಯಕ್ಷ ಆರ್.ಬಿ. ಸಂಕದಾಳ ಮಾಹಿತಿ
ವಿವಿಧ ಗಣ್ಯರು ಭಾಗಿ
ವಧು-ವರನ ಕೊಠಡಿಯನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮತ್ತು ಭೋಜನಾಲಯವನ್ನು ಮಾಜಿ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸುವರು.
ಬಾದಾಮಿ:
ಕಿತ್ತೂರ ಚನ್ನಮ್ಮ ಗೃಹ ನಿರ್ಮಾಣ ಸಹಕಾರಿ ಸಂಘದ ವತಿಯಿಂದ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಅ.23ರಂದು ಬೆಳಗ್ಗೆ 10.30 ಗಂಟೆಗೆ ಸ್ಟೇಶನ್ ರಸ್ತೆ ದಲಬಂಜನ ಲೇಔಟ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಬಿ. ಸಂಕದಾಳ ತಿಳಿಸಿದರು.
ನಗರದ ಕಾನಿಪ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ಗುಳೇದಗುಡ್ಡ ಒಪ್ಪತ್ತೇಶ್ವರ ಶ್ರೀಗಳು ನೇತೃತ್ವ ವಹಿಸುವರು. ಸಚಿವ ವಿಜಯಾನಂದ ಕಾಶಪ್ಪನ್ನವರ, ಸಂಸದ ಪಿ.ಸಿ. ಗದ್ದಿಗೌಡರ ಉದ್ಘಾಟಿಸುವರು.
ಮಾಜಿ ಸಚಿವ ಶಿವಾನಂದ ಪಾಟೀಲ ಸಭಾಂಗಣ ಉದ್ಘಾಟಿಸುವರು. ವಧು-ವರನ ಕೊಠಡಿಯನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಮತ್ತು ಭೋಜನಾಲಯವನ್ನು ಮಾಜಿ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ವಿಪ ಸದಸ್ಯರಾದ ಹನಮಂತ ನಿರಾಣಿ, ಪಿ.ಎಚ್.ಪೂಜಾರ, ಮಾಜಿ ಸಚಿವ ಸಿ.ಸಿ.ಪಾಟೀಲ, ಮಾಜಿ ಶಾಸಕರಾದ ಕಳಕಪ್ಪ ಬಂಡಿ, ಎಂ.ಕೆ. ಪಟ್ಟಣಶೆಟ್ಟಿ ಸೇರಿ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.