ಬಲಿಷ್ಠ ಪ್ರಜಾತಂತ್ರ ನಿರ್ಮಾಣಕ್ಕೆ ಕೈಜೋಡಿಸಿ

ಲೋಕಾಪುರ ಪಟ್ಟಣದ ಜನತಾ ಪ್ಲಾಟನಲ್ಲಿ ಎಸ್.ಐ.ಆರ್ ಬಗ್ಗೆ ಶಾಸಕ ಆರ್.ಬಿ.ತಿಮ್ಮಾಪೂರ ಜಾಗೃತಿ ಮೂಡಿಸಿದರು. ಅಶೋಕ ಕಿವಡಿ, ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಕೆಎಂಎಫ್ ನಿರ್ದೇಶಕ ಲಕ್ಷ÷್ಮಣ ಮಾಲಗಿ, ಭೀಮನಗೌಡ ಪಾಟೀಲ, ಪರಮಾನಂದ ಕುಟ್ರಟ್ಟಿ ಇತರರಿದ್ದರು.
ಲೋಕಾಪುರ ಪಟ್ಟಣದ ಜನತಾ ಪ್ಲಾಟನಲ್ಲಿ ಎಸ್.ಐ.ಆರ್ ಬಗ್ಗೆ ಶಾಸಕ ಆರ್.ಬಿ.ತಿಮ್ಮಾಪೂರ ಜಾಗೃತಿ ಮೂಡಿಸಿದರು. ಅಶೋಕ ಕಿವಡಿ, ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಕೆಎಂಎಫ್ ನಿರ್ದೇಶಕ ಲಕ್ಷ÷್ಮಣ ಮಾಲಗಿ, ಭೀಮನಗೌಡ ಪಾಟೀಲ, ಪರಮಾನಂದ ಕುಟ್ರಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಆರ್.ಬಿ.ತಿಮ್ಮಾಪೂರ ಹೇಳಿಕೆ
  • ಮತದಾರರ ಪಟ್ಟಿ ಪರಿಷ್ಕರಣೆ
ಲೋಕಾಪುರ: ಕೇಂದ್ರದ ಚುನಾವಣಾ ಆಯೋಗದ ನಿರ್ದೇಶನದಂತೆ ಜೂ.30ರಿಂದ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಪ್ರಾರಂಭವಾಗಿದೆ, ಅರ್ಹ ಮತದಾರರು ಈ ಪ್ರಕ್ರಿಯೆಯಿಂದ ಹೊರಗುಳಿಯಬಾರದು ಎಂದು ಶಾಸಕ ಆರ್.ಬಿ.ತಿಮ್ಮಾಪೂರ ಹೇಳಿದರು.
ಪಟ್ಟಣದ ಜನತಾ ಪ್ಲಾಟನಲ್ಲಿ ಎಸ್.ಐ.ಆರ್ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬಲಿಷ್ಠ ಪ್ರಜಾತಂತ್ರ ನಿರ್ಮಾಣಕ್ಕೆ ಕೈಜೋಡಿಸಬೇಕು, ಮತಕ್ಷೇತ್ರದ ಪ್ರತಿಯೊಂದು ಮನೆಗೂ ನಮ್ಮ ಬಿಎಲ್‌ಒ ಮತ್ತು ಬಿಎಲ್‌ಎಗಳು ಭೇಟಿ ನೀಡುವ ಬೂತ್ ಮಟ್ಟದ ಅಽಕಾರಿಗಳಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದರು
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ, ಹಾಗೂ ಇನ್ನಿತರರ ದಾಖಲಾತಿಗಳನ್ನು ನಿಖರವಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ಮಾತನಾಡಿ, ಪ್ರತಿ ಅರ್ಹ ಮತದಾರರಿಗೂ ನಮೂನೆ ಫಾರ್ಮಗಳನ್ನು ತಲುಪಿಸುವ ಕಾರ್ಯಗಳನ್ನು ಬಿಎಲ್‌ಒಗಳು ಮಾಡಬೇಕು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆಯಿಂದ ಪಕ್ಷದ ಬಿಎಲ್‌ಎಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಕೆಎಂಎಫ್ ನಿರ್ದೇಶಕ ಲಕ್ಷ÷್ಮಣ ಮಾಲಗಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಪಾಟೀಲ, ಬೀರಪ್ಪ ಮಾಯಣ್ಣವರ, ಹೊಳಬಸು ದಂಡಿನ, ಪರಮಾನಂದ ಕುಟ್ರಟ್ಟಿ, ರೆಹೆಮಾನ್ ತೊರಗಲ್, ಸುಲ್ತಾನ ಕಲಾದಗಿ, ಜಾವೇದ ಮುಧೋಳ, ವಿಠ್ಠಲ ಕನಸಗೇರಿ, ಬಿಎಲ್‌ಒ ಶೋಭಾ ಕಾಳಮ್ಮನವರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net