ಹುನಗುಂದ ತಾಲೂಕಿನ ಐಹೋಳೆ ಗ್ರಾಮದಲ್ಲಿ ವಿ.ಎಂ.ಎಸ್.ಆರ್.ವಸದ ಕಲಾ. ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಿಂದ ಆಯೋಜಿಸಿದ ಎನ್‌ಎಸ್‌ಎಸ್ ವಾರ್ಷಿಕ ಸೇವಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಿಮವಿವ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿದರು. ಡಾ. ಮಹಾಂತೇಶ ಕಡಪಟ್ಟಿ, ಎಸ್.ಆರ್.ಗೋಲಗೊಂಡ, ಡಾ. ಎಸ್.ಆರ್.ನಾಗಣ್ಣವರ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಸಿ.ಚರಂತಿಮಠ ಹೇಳಿಕೆ
ಎನ್‌ಎಸ್‌ಎಸ್ ವ್ಯಕಿತ್ವ ವಿಕಸನಕ್ಕೆ ಪೂರಕ
ಎನ್‌ಎಸ್‌ಎಸ್ ಕೇವಲ ಒಂದು ಸಂಘಟನೆಯಲ್ಲ. ಅದು ಯುವಕರನ್ನು ಸಮಾಜ ಸೇವೆಯತ್ತ ಕರೆದೊಯ್ಯುವ ಮಾರ್ಗವಾಗಿದೆ
ಹುನಗುಂದ: ಎನ್‌ಎಸ್‌ಎಸ್ ಕೇವಲ ಒಂದು ಸಂಘಟನೆಯಲ್ಲ. ಅದು ಯುವಕರನ್ನು ಸಮಾಜ ಸೇವೆಯತ್ತ ಕರೆದೊಯ್ಯುವ ಮಾರ್ಗವಾಗಿದೆ. ಸೇವೆಯ ಮೂಲಕ ತಮ್ಮ ಬದುಕನ್ನು ಸುಂದರಗೊಳಿಸಿಕೊಳ್ಳುವುದರೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಇದು ಪೂರಕವಾಗಿದೆ ಎಂದು ವಿಮವಿವ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಸಿ.ಚರಂತಿಮಠ ಹೇಳಿದರು.
ತಾಲೂಕಿನ ಐಹೋಳೆ ಗ್ರಾಮದಲ್ಲಿ ವಿ.ಎಂ.ಎಸ್.ಆರ್.ವಸದ ಕಲಾ ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಿಂದ ಗುರುವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ಸೇವಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶದ ಯುವಕರು ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಬೇಕು ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದ್ದು, ಇದರ ಮುಖ್ಯಧ್ಯೇಯವೇ ನನಗಾಗಿ ಅಲ್ಲ ನಿನಗೆ ಎಂಬುದು. ಈ ಹಿನ್ನೆಲೆಯಲ್ಲಿ ಸೇವೆಯೇ ನಿಜವಾದ ಧರ್ಮ ಎಂಬ ಸೇವಾ ಮನೋಭಾವನೆಯಿಂದ ಕೆಲಸ ಮಾಡಿದರೆ ಮಾತ್ರ ಸಮಾಜದಲ್ಲಿ ನಿರೀಕ್ಷಿತ ಬದಲಾವಣೆ ತರಲು ಸಾಧ್ಯವಿದೆ ಎಂದರು.
ವಿಮವಿವ ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನ ಪಡೆದರೆ ಸಾಲದು, ಪಡೆದ ಜ್ಞಾನ ಸಮಾಜಕ್ಕೆ ಸ್ಪಂದಿಸುವಂತಿರಬೇಕು. ಎನ್‌ಎಸ್‌ಎಸ್ ಕೇವಲ ಶಿಬಿರಕ್ಕೆ ಸೀಮಿತವಾಗಿರಬಾರದು. ತಮ್ಮ ಗ್ರಾಮ, ನಗರಗಳಿಗೆ ಹೋದಾಗಲೂ ಮುಂದುವರೆಸಬೇಕು ಎಂದು ಹೇಳಿದರು.
ಗ್ರಾಮದ ಬಿ.ಸಿ.ಅಂಟರತಾನಿ, ಸಿದ್ದು ನಿಂಬಲಗುಂದಿ, ರಮೇಶ ಹಂಡಿ, ಸ್ವಯಂ ಸೇವಕ ಬಸವರಾಜ ಮೇಟಿ, ಸ್ವಪ್ನಾ ಮನ್ನಾಪುರ, ಸೋಮಶೇಖರ ಹಡಪದ, ಪ್ರಾಚಾರ್ಯ ಎಸ್.ಆರ್.ಗೋಲಗೊಂಡ ಇತರರು ಇದ್ದರು.