ಚಿನ್ನದ ಪದಕ ಬಾಚಿದ ಜವಾನ್, ಕಿಸಾನ್ ಮಕ್ಕಳು !

 ಜಮಖಂಡಿ ನಗರದ ದರ್ಬಾರ್ ಹಾಲ್‌ನಲ್ಲಿ ನಡೆದ ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದುಕೊಂಡ ಪ್ರೀಯಾಂಕಾ ಹಡಪದ ತಂದೆ ಉಮೇಶ ಜೊತೆ ಸಂಭ್ರಮಿಸಿದ ಕ್ಷಣ.
ಜಮಖಂಡಿ ನಗರದ ದರ್ಬಾರ್ ಹಾಲ್‌ನಲ್ಲಿ ನಡೆದ ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದುಕೊಂಡ ಪ್ರೀಯಾಂಕಾ ಹಡಪದ ತಂದೆ ಉಮೇಶ ಜೊತೆ ಸಂಭ್ರಮಿಸಿದ ಕ್ಷಣ.
Published on
ಬಾಗಲಕೋಟೆ: ಜೈ ಜವಾನ್, ಜೈ ಕಿಸಾನ್ ಎನ್ನುವುದು ಸೈನಿಕರು ಮತ್ತು ರೈತರಿಗೆ ಜಯವಾಗಲಿ ಎಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸಿöÃ ಅವರು ಮಾಡಿದ್ದ ಘೋಷಣೆ.
ಜಮಖಂಡಿ ಶುಕ್ರವಾರ ನಗರದಲ್ಲಿ ನಡೆದ ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಲ್ಲಿ ಜವಾನ್ ಮತ್ತು ಕಿಸಾನ್‌ರ ಮಕ್ಕಳು ಇದ್ದರು ಎನ್ನುವುದು ಗಮನಾರ್ಹ.
ಬೀಳಗಿಯ ರುದ್ರಗೌಡ ಪಾಟೀಲ ಸರ್ಕಾರಿ ಕಾಲೇಜಿ ವಿದ್ಯಾರ್ಥಿನಿ ಪ್ರಿಯಾಂಕಾ ಹಡಪದ ಎಂಎ ಇತಿಹಾಸ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಬೀಳಗಿ ತಾಲೂಕಿನ ಸೊನ್ನ ಗ್ರಾಮದ ಪ್ರಿಯಾಂಕ ತಂದೆ ಉಮೇಶ, ಕೃಷಿ ಕಾಯಕ ಮಾಡುತ್ತಿದ್ದಾರೆ. ತಾಯಿ ಚಿಕ್ಕದಾದ ಬಟ್ಟೆ ಅಂಗಡಿಯನ್ನು ನಡೆಸುತ್ತಾ ಮಗಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದಾರೆ.
ಈ ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದ ಪ್ರಿಯಾಂಕಾ, ಇಂದು ಇಡೀ ಜಿಲ್ಲೆ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.
ತಮ್ಮ ಈ ಯಶಸ್ಸಿನ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, ತಮ್ಮ ಹಾದಿ ಸುಲಭವಾಗಿರಲಿಲ್ಲ, ತಂದೆ-ತಾಯಿ ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಇಂದು ನನಗೆ ದೊರೆತ ಚಿನ್ನದ ಪದಕ ನನ್ನ ಪೋಷಕರ ಶ್ರಮಕ್ಕೆ ಸಂದ ಗೌರವವಾಗಿದೆ. ಸಮಾಜಕ್ಕೆ ಜ್ಞಾನದ ಬೆಳಕನ್ನು ಹಂಚುವ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುವ ಗುರಿಯನ್ನು ಪ್ರಿಯಾಂಕಾ ವ್ಯಕ್ತಪಡಿಸಿದರು.
ವಜ್ರಕುಮಾರಗೆ ದೊರೆತ ಚಿನ್ನ:
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಯುವಕ ವಜ್ರಕುಮಾರ ಕುಸನಾಳ ಅವರು ಎಂ.ಎ ಎಜುಕೇಶನ್ (ಶಿಕ್ಷಣ) ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಬಾಗಲಕೋಟೆ ಬಿವಿವಿ ಸಂಘದ ಬಸವೇಶ್ವರ ಕಾಲೇಜಿನಲ್ಲಿ ಓದಿದಿದ್ದಾರೆ.
ವಜ್ರಕುಮಾರ ಅವರು ಮಾಜಿ ಸೈನಿಕ ಹಾಗೂ ನಿವೃತ್ತ ಶಿಕ್ಷಕರ ಪುತ್ರ. ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಮಾಡುವ ಗುರಿ ಹೊಂದಿದ್ದು, ಶಿಕ್ಷಣ ವಿಭಾಗದಲ್ಲಿ ಉನ್ನತ ಸಂಶೋಧನೆ ನಡೆಸಿ, ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಹಾಗೂ ಮಾರ್ಗದರ್ಶನ ನೀಡುವುದು ನನ್ನ ಮುಂದಿನ ಯೋಜನೆ ಎಂದು ತಿಳಿಸಿದರು.
ಮಗನ ಈ ಮಹೋನ್ನತ ಸಾಧನೆಗೆ ತಂದೆ-ತಾಯಿ ಅತ್ಯಂತ ಸಂತಸ ವ್ಯಕ್ತಪಡಿಸಿದರು ನಮ್ಮ ಮಗ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಹಾಗೂ ಗ್ರಾಮಕ್ಕೆ ಹೆಸರು ತಂದಿದ್ದಾನೆ. ಅವನ ಪರಿಶ್ರಮಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ, ನಮಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಚಿನ್ನದ ಪದಕದಲ್ಲಿ ರಾರಾಜಿಸಿದ ರಾಜೇಶ್ವರಿ
ಬೀಳಗಿ ತಾಲೂಕಿನ ಸೊನ್ನದ ಕೃಷಿ ಕುಟುಂಬದ ಯುವತಿ ರಾಜೇಶ್ವರಿ ದೊಡ್ಡಪ್ಪ ಹಿರೇದೇಸಾಯಿ ಶುಕ್ರವಾರ ಚಿನ್ನದ ಪದಕ ಹಿಡಿದು ರಾರಾಜಿಸಿದಚರು. ಎಂ.ಎಸ್ಸಿ (ಮಾಸ್ಟರ್ ಆಫ್ ಸೈನ್ಸ್) ಕೆಮಿಸ್ಟಿçಯಲ್ಲಿ ಈ ಸಾಧನೆ ಮಾಡಿದ್ದಾರೆ.
ಅಪ್ಪಟ ಗ್ರಾಮೀಣ ಪ್ರತಿಭೆಯಾದ ರಾಜೇಶ್ವರಿ, ತಮ್ಮ ಶೈಕ್ಷಣಿಕ ಸಾಧನೆಯ ಕುರಿತು ಹಷÀð ವ್ಯಕ್ತಪಡಿಸಿ, ತಮ್ಮ ಯಶಸ್ಸಿನಲ್ಲಿ ಕುಟುಂಬದ ಪಾತ್ರದ ಮಹತ್ವದ್ದಾಗಿದೆ. ಓದಿಗೆ ಮನೆಯಲ್ಲಿ ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ. ಪ್ರೋತ್ಸಾಹದಾಯಕ ವಾತಾವರಣ ಇದ್ದಿದ್ದರಿಂದಲೇ ಇವತ್ತು ಚಿನ್ನದ ಪದಕ ಪಡೆಯಲು ಸಾಧ್ಯವಾಯಿತು. ನನ್ನ ಜೊತೆಗೆ ನನ್ನ ಗೆಳತಿಯೂ ಸಹ ಚಿನ್ನದ ಪದಕ ಪಡೆಯಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ ಎಂಬ ಬೇಸರ ನನಗಿದೆ ಎಂದರು.
ಮುAದೆ ಉನ್ನತ ವ್ಯಾಸಂಗ ಮಾಡಿ ವಿಜ್ಞಾನಿ ಆಗಬೇಕೆಂಬ ದೊಡ್ಡ ಗುರಿ ನನ್ನದಿದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದೇನೆ ಎಂದು ಭವಿಷ್ಯದ ಕನಸನ್ನು ಬಿಚ್ಚಿಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net