ವಿಮಾದಾರರು ಎಲ್‌ಐಸಿಯಲ್ಲಿ ಹೂಡಿಕೆ ಮಾಡಲು ಹೆದರಬೇಡಿ

ಮುಧೋಳದ ಅಂಬೇಡ್ಕರ ಭವನದಲ್ಲಿ ಭಾನುವಾರ ನಡೆದ ಲಿಯಾಫಿ ಪ್ರತಿನಿಧಿಗಳ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಪ್ರತಿನಿಧಿಗಳ ಸಂಘದ ಅಧ್ಯಕ್ಷ ಪದ್ಮರಾಜ ತಡಸದ ಉದ್ಘಾಟಿಸಿದರು. ಹುಲ್ಯಾಳದ ಗುರುದೇವಾಶ್ರಮದ ಶ್ರೀಹರ್ಷಾನಂದ ಮಹಾಸ್ವಾಮಿಗಳು ಇತರರಿದ್ದರು. ಜಮಖಂಡಿ ಶಾಖಾಧಿಕಾರಿ ಎಲ್.ಎಚ್. ವಿವೇಕಾನಂದ, ಲಿಯಾಫಿ ಜಮಖಂಡಿ ಅಧ್ಯಕ್ಷ ಆನಂದ ಹೊಸಕೋಟಿ, ಅಶೋಕ ವಸದ, ಎಕ್ಸಿಕ್ಯೂಟಿವ್ ಕಮಿಟಿ ಚರ್ಮೇನ್ ರತ್ನಾಕರ ಶೆಟ್ಟಿ ಇತರರಿದ್ದರು.
ಮುಧೋಳದ ಅಂಬೇಡ್ಕರ ಭವನದಲ್ಲಿ ಭಾನುವಾರ ನಡೆದ ಲಿಯಾಫಿ ಪ್ರತಿನಿಧಿಗಳ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಪ್ರತಿನಿಧಿಗಳ ಸಂಘದ ಅಧ್ಯಕ್ಷ ಪದ್ಮರಾಜ ತಡಸದ ಉದ್ಘಾಟಿಸಿದರು. ಹುಲ್ಯಾಳದ ಗುರುದೇವಾಶ್ರಮದ ಶ್ರೀಹರ್ಷಾನಂದ ಮಹಾಸ್ವಾಮಿಗಳು ಇತರರಿದ್ದರು. ಜಮಖಂಡಿ ಶಾಖಾಧಿಕಾರಿ ಎಲ್.ಎಚ್. ವಿವೇಕಾನಂದ, ಲಿಯಾಫಿ ಜಮಖಂಡಿ ಅಧ್ಯಕ್ಷ ಆನಂದ ಹೊಸಕೋಟಿ, ಅಶೋಕ ವಸದ, ಎಕ್ಸಿಕ್ಯೂಟಿವ್ ಕಮಿಟಿ ಚರ್ಮೇನ್ ರತ್ನಾಕರ ಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಪದ್ಮರಾಜ ತಡಸದ ಅಭಿಮತ
  • ಲಿಯಾಫಿ ಪ್ರತಿನಿಧಿಗಳ ವಾರ್ಷಿಕ ಸರ್ವಸಾಧಾರಣ ಸಭೆ
  • ಭಾರತ ದೇಶದಲ್ಲಿ ಕಾರ್ಯಾಚರಿಸುತ್ತಿರುವ 26 ಜೀವ ವಿಮಾ ಕಂಪನಿಗಳಲ್ಲಿ ಎಲ್‌ಐಸಿ.
ಮುಧೋಳ:

ಎಲ್‌ಐಸಿ ಪ್ರತಿನಿಧಿಗಳು ಕೇವಲ ಏಜೆಂಟರಲ್ಲ, ಅವರು ಈ ಸಂಸ್ಥೆಯ ಆಧಾರಸ್ತಂಭಗಳು. ಆದ್ದರಿಂದ ಸಂಸ್ಥೆಯು ತನ್ನ ಆಧಾರ ಸ್ತಂಭಗಳನ್ನು ಎಂದಿಗೂ ಕಡೆಗಣಿಸಬಾರದು ಎಂದು ವಿಭಾಗೀಯ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಪದ್ಮರಾಜ ತಡಸದ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಲಿಯಾಫಿ (ಲೈಫ್ ಇನ್ಸೂರೆನ್ಸ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ) ಪ್ರತಿನಿಧಿಗಳ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ದೇಶದಲ್ಲಿ ಕಾರ್ಯಾಚರಿಸುತ್ತಿರುವ 26 ಜೀವ ವಿಮಾ ಕಂಪನಿಗಳಲ್ಲಿ ಎಲ್‌ಐಸಿ. ಮಾತ್ರ ಕೇಂದ್ರ ಸರ್ಕಾರದ ಸಾರ್ವಭೌಮ ಖಾತರಿ ಹೊಂದಿದೆ ಎಂದರು.
ವಿಮಾದಾರರು ಖಾಸಗಿ ಕಂಪನಿಗಳ ಅಪಪ್ರಚಾರಗಳಿಗೆ ಕಿವಿಗೊಡಬಾರದು ಮತ್ತು ಎಲ್‌ಐಸಿಯಲ್ಲಿ ಹೂಡಿಕೆ ಮಾಡಲು ಹೆದರಬಾರದು. ಎಲ್‌ಐಸಿ ದೇಶಾದ್ಯಂತ ಹೊಂದಿರುವ 5000 ಸ್ವಂತ ಶಾಖೆಗಳ ಕಟ್ಟಡಗಳ ಮೌಲ್ಯವೇ ಸಾವಿರಾರು ಕೋಟಿಗಳಷ್ಟಿದೆ, ಇದು ಸಂಸ್ಥೆಯ ಬಲವನ್ನು ಸಾರುತ್ತದೆ ಎಂದು ತಿಳಿಸಿದರು.
ಹುಲ್ಯಾಳದ ಗುರುದೇವಾಶ್ರಮದ ಶ್ರೀ ಹರ್ಷಾನಂದ ಮಹಾಸ್ವಾಮಿಗಳು ಮಾತನಾಡಿ, ಎಲ್‌ಐಸಿ ಸಮಾಜದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ನಿರ್ಮೂಲನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶ್ಲಾಸಿದರು.
ಜಮಖಂಡಿ ಶಾಖಾಧಿಕಾರಿ ಎಲ್.ಎಚ್. ವಿವೇಕಾನಂದ ಮಾತನಾಡಿ, ನಿಗಮವು ಪ್ರತಿನಿಧಿಗಳ ಯೋಗಕ್ಷೇಮಕ್ಕೆ ಸದಾ ಬದ್ಧವಾಗಿದೆ. ಪ್ರತಿನಿಧಿಗಳು ಆಧುನೀಕರಣದತ್ತ ಗಮನ ಹರಿಸಬೇಕು. ’ಸೂಪರ್ ಸೇಲ್ಸ್ ಸಾಥಿ’ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲ, ಎಸ್‌ಬಿ ಪಾವತಿಗಳು ಮತ್ತು ಕ್ಲೇಮ್‌ಗಳಂತಹ ಸೇವೆಗಳನ್ನು ಇನ್ನು ಮುಂದೆ ಸುಲಭವಾಗಿ ಪಡೆಯಬಹುದು ಎಂದು ತಿಳಿಸಿದರು.
ಮುಧೋಳ ಶಾಖೆಯ ಶಾಖಾಧಿಕಾರಿ ಕೃಷ್ಣರಾಜ ಪಡಿಯಣ್ಣವರ ಮಾತನಾಡಿದರು. ಲಿಯಾಫಿ ಜಮಖಂಡಿ ಅಧ್ಯಕ್ಷ ಆನಂದ ಹೊಸಕೋಟಿ ಅಧ್ಯಕ್ಷತೆ ವಹಿಸಿದ್ದರು. ಅಶೋಕ ವಸದ, ಎಕ್ಸಿಕ್ಯೂಟಿವ್ ಕಮಿಟಿ ಚರ್ಮೇನ್ ರತ್ನಾಕರ ಶೆಟ್ಟಿ ಇತರರಿದ್ದರು. ಕಾರ್ಯದರ್ಶಿ ಅಶೋಕ ವಜ್ಜರಮಟ್ಟಿ ವಾರ್ಷಿಕ ವರದಿ ವಾಚನ ಮಾಡಿದರು. ಮಲ್ಲಿಕಾರ್ಜುನ ಬಟಕುರ್ಕಿ ಸ್ವಾಗತಿಸಿದರು, ಅಪ್ಪಯ್ಯ ಅಂಗಡಿ ನಿರೂಪಿಸಿದರು. ಯಲ್ಲಪ್ಪ ಮೇತ್ರಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net