ಸಿಲಿಂಡರ್ ಸಮರ್ಪಕ ಪೂರೈಕೆಗೆ ಸೂಚನೆ

ಇಳಕಲ್ಲದ ಗ್ಯಾಸ್ ಸಿಲಿಂಡರ್ ಗೋಡಾನ್‌ಗೆ ತಾಲೂಕು ದಂಡಾಧಿಕಾರಿ ಅಮರೇಶ ಪಮ್ಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಹಾರ ಇಲಾಖೆ ಅಕಾರಿ ಎಸ್.ಎಂ. ಬಡ್ಡಿ, ಕಂದಾಯ ನಿರೀಕ್ಷಕ ನಾಸೀರ ಬೋರಗಿ, ಕಂದಾಯ ಇಲಾಖೆ ಅಕಾರಿ ಮಹಾಂತೇಶ ಕಲ್ಮಠ ಉಪಸ್ಥಿತರಿದ್ದರು.
ಇಳಕಲ್ಲದ ಗ್ಯಾಸ್ ಸಿಲಿಂಡರ್ ಗೋಡಾನ್‌ಗೆ ತಾಲೂಕು ದಂಡಾಧಿಕಾರಿ ಅಮರೇಶ ಪಮ್ಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಹಾರ ಇಲಾಖೆ ಅಕಾರಿ ಎಸ್.ಎಂ. ಬಡ್ಡಿ, ಕಂದಾಯ ನಿರೀಕ್ಷಕ ನಾಸೀರ ಬೋರಗಿ, ಕಂದಾಯ ಇಲಾಖೆ ಅಕಾರಿ ಮಹಾಂತೇಶ ಕಲ್ಮಠ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇಳಕಲ್ಲ ತಹಸೀಲ್ದಾರ್ ಗೋಡೌನ್, ಹೋಟೆಲ್‌ಗಳಿಗೆ ದಿಢೀರ್ ಭೇಟಿ
  • ನಿಯಮ ಪಾಲನೆಗೆ ತಾಕೀತು
ಇಳಕಲ್ಲ: ನಗರದ ಗ್ಯಾಸ್ ಸಿಲಿಂಡರ್ ಗೋಡೌನ್ ಹಾಗೂ ಹೋಟೆಲ್‌ಗಳಿಗೆ ತಾಲೂಕು ದಂಡಾಧಿಕಾರಿ ಅಮರೇಶ ಪಮ್ಮಾರ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲು ನಗರದ ಎಚ್.ಪಿ. ಗ್ಯಾಸ್ ಸಿಲಿಂಡರ್ ಗೋಡಾನ್‌ಗೆ ಭೇಟಿ ನೀಡಿ ಸಿಲಿಂಡರ್ ಸರಬರಾಜಿನ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ಸಿಲಿಂಡರ್ ಸರಿಯಾದ ರೀತಿಯಲ್ಲಿ ಮತ್ತು ಸಮಯಕ್ಕೆ ಸರಿಯಾಗಿ ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ನಗರದ ವಿವಿಧ ಹೋಟೆಲ್‌ಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ಅಂಗಡಿ ಪರವಾನಗಿ ದಾಖಲೆಗಳನ್ನು ಪರಿಶೀಲಿಸಿದರು. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹೋಟೆಲ್ ಮಾಲೀಕರಿಗೆ ಸೂಚಿಸಿದರು.
ಇದೇ ವೇಳೆ ಶಾಖಾಂಬರಿ ಪಡಿತರ ಸೊಸೈಟಿಗೂ ಭೇಟಿ ನೀಡಿ ಅಕ್ಕಿಯ ಗುಣಮಟ್ಟ ಮತ್ತು ತೂಕದ ಬಗ್ಗೆ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಗೆ ಪಡಿತರವನ್ನು ಸರಿಯಾದ ಪ್ರಮಾಣದಲ್ಲಿ ನೀಡಬೇಕು, ತೂಕದಲ್ಲಿ ಯಾವುದೇ ಅವ್ಯವಹಾರ ನಡೆಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಹಾರ ಇಲಾಖೆ ಅಧಿಕಾರಿ ಎಸ್.ಎಂ. ಬಡ್ಡಿ, ಕಂದಾಯ ನಿರೀಕ್ಷಕ ನಾಸೀರ ಬೋರಗಿ, ಕಂದಾಯ ಇಲಾಖೆ ಅಧಿಕಾರಿ ಮಹಾಂತೇಶ ಕಲ್ಮಠ, ಫುಡ್ ಅಧಿಕಾರಿ ಸಂದೀಪ್, ನಗರಸಭೆ ಆರೋಗ್ಯ ನಿರೀಕ್ಷಕ ಮನೋಹರ ದೊಡ್ಡಮನಿ ಸೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net