ಗಂಡು ಮಕ್ಕಳ ಜನನ ಹೆಚ್ಚಳ ಭ್ರೂಣ ಹತ್ಯೆ ಸೂಚನೆ..!

ಬಾಗಲಕೋಟೆ ನಗರದ 50 ಹಾಸಿಗೆ ಆಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ಗುರುವಾರ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗರತ್ನ ಚೌಧರಿ ಅವರ ಎದುರು ಅನೇಕ ಮಹಿಳೆಯರು ತಮ್ಮ ಸಂಕಷ್ಟು ತೋಡಿಕೊಂಡರು.
ಬಾಗಲಕೋಟೆ ನಗರದ 50 ಹಾಸಿಗೆ ಆಸ್ಪತ್ರೆ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ಗುರುವಾರ ಭೇಟಿ ನೀಡಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗರತ್ನ ಚೌಧರಿ ಅವರ ಎದುರು ಅನೇಕ ಮಹಿಳೆಯರು ತಮ್ಮ ಸಂಕಷ್ಟು ತೋಡಿಕೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಚೌಧರಿ ಅನುಮಾನ
  • ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಬೇಸರ
ಬಾಗಲಕೋಟೆ: ಬಾಗಲಕೋಟೆಯ 50 ಹಾಸಿಗೆಯ ಆಸ್ಪತ್ರೆಯಲ್ಲಿ ಗಂಡು ಮಕ್ಕಳ ಜನನ ಪ್ರಮಾಣ ಹೆಚ್ಚಳ ಆಗಿರುವುದು ಗಮನಿಸಿದರೆ ಇದು ಎಲ್ಲೊ ಒಂದು ಕಡೆಗೆ ಭ್ರೂಣ ಹತ್ಯೆಯ ಇಂಡಿಕೇಶನ್ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಕ್ಷ್ಮೀ ಚೌಧರಿ ಅನುಮಾನ ವ್ಯಕ್ತಪಡಿಸಿದರು.
ನಗರದ 50 ಹಾಸಗಿ ಆಸ್ಪತ್ರೆ ಸೇರಿ ವಿವಿಧೆಡೆ ಗುರುವಾರ ಭೇಟಿ ನೀಡಿದ್ದ ಅವರು, ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಭ್ರೂಣ ಹತ್ಯೆ ನಡೆಯುತ್ತಿದೆಯೇ? ಎನ್ನುವ ಶಂಕೆ ವ್ಯಕ್ತಪಡಿಸಿದರು.
ಈ ಆಸ್ಪತ್ರೆಯಲ್ಲಿ 30 ಹೆರಿಗೆ ಆಗಿವೆ. ಇದರಲ್ಲಿ ಹೆಚ್ಚಾಗಿ ಗಂಡು ಮಗುವಿನ ಜನನ ಆಗಿದೆ. ಹೆಣ್ಣು ಮಕ್ಕಳ ಜನನ ಕಡಿಮೆ ಇದೆ. ಇದು ಪ್ರಕೃತಿಗೆ ವಿರೋಧ. ಯಾವಾಗಲೂ ಹೆಣ್ಣುಮಕ್ಕಳ ಜನನ ಹೆಚ್ಚಾಗಿ ಇರುತ್ತದೆ. ಇದನ್ನು ಗಮನಿಸಿದಾಗಿ ಎಲ್ಲೋ ಒಂದು ಕಡೆಗೆ ಭ್ರೂಣಹತ್ಯೆ ಆಗುತ್ತಿದೆ ಎನ್ನುವ ಇಂಡಿಕೇಶನ್ ಇದಾಗಿದೆ. ಈ ಬಗ್ಗೆ ನಾನು ಡಿಎಚ್‌ಒ ಅವರಿಂದ ಎಲ್ಲ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಇಬ್ಬರೇ ಆಸ್ಪತ್ರೆ ಹೇಗೆ ಕ್ಲೀನ್ ಮಾಡಲು ಸಾಧ್ಯ?

50 ಹಾಸಿಗೆ ಆಸ್ಪತ್ರೆಯಲ್ಲಿ `ಡಿ' ಗ್ರೂಪ್ ನೌಕರರು ಇಲ್ಲ. ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಮಾತ್ರ ಇದ್ದಾರೆ. ಅವರೇ ಒಟಿ ಟೇಬಲ್ ಸ್ವಚ್ಛ ಮಾಡಬೇಕು. ಡಾಕ್ಟರ್ ನಾವೇ ಕ್ಲೀನ್ ಮಾಡುತ್ತೇವೆ ಎನ್ನುತ್ತಿದ್ದರು. ಸ್ಟೆರಿಲೈಸೇಶನ್ ಹೇಗೆ ಮಾಡುತ್ತಾರೆ? ಔಷಧ ಎಲ್ಲ ಕೌಂಟರಲ್ಲೇ ಕೊಡುತ್ತಾರಾ? ಹೊರಗಡೆ ಬರೆದು ಕೊಡುತ್ತಾರಾ? ಸ್ವಚ್ಛತೆ ಇಲ್ಲ. ಎಲ್ಲ ಕಡೆಗೂ ಧೂಳು. ಕಾರಣ ಅಲ್ಲಿ ಡಿ ಗ್ರೂಪ್ ನೌಕರರೇ ಇಲ್ಲ. ಇಬ್ಬರೇ ಇಡೀ ಆಸ್ಪತ್ರೆಯನ್ನು ಕ್ಲೀನ್ ಮಾಡಲು ಹೇಗೆ ಸಾಧ್ಯ? ಹೀಗಾಗಿ ನಾನು ಅಲ್ಲಿಯೇ ಆರೋಗ್ಯ ಇಲಾಖೆ ಆಯುಕ್ತರ ಜೊತೆ ಮಾತನಾಡಿದ್ದೇನೆ. ತಕ್ಷಣವೇ ಡಿ ಗ್ರೂಪ್ ನೌಕರರನ್ನು ಹಾಕುತ್ತೇವೆ ಎಂದಿದ್ದಾರೆ ಎಂದು ಹೇಳಿದರು.
ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಅವರಿಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದರು. ಅಧ್ಯಕ್ಷರಿಗೆ ಕೆಲ ಮಹಿಳೆಯರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು. ಈ ವೇಳೆ ಒಬ್ಬ ಮಹಿಳೆ ತನಗಾದ ಅನ್ಯಾಯಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.
ತಮ್ಮ ಅಹವಾಲುಗಳನ್ನು ಮಂಡಿಸಿದ ಮಹಿಳೆಯರು, ಗಂಡನಿಂದ ಆಗುತ್ತಿರುವ ಕಿರುಕುಳ, ಉದ್ಯೋಗವಿಲ್ಲದೆ ಎದುರಿಸುತ್ತಿರುವ ಸಂಕಷ್ಟ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಮ್ಮ ಮನವಿಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು
.
ಮಹಿಳೆಯರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ ಅಧ್ಯಕ್ಷರು ಪ್ರತಿಯೊಂದು ಪ್ರಕರಣವನ್ನೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ವ್ಯಾಪ್ತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net