ರೈತರ ಉತ್ಪನ್ನಗಳ ಖರೀದಿ-ಮಾರಾಟ ಕೇಂದ್ರ ಉದ್ಘಾಟನೆ

 ಗುಳೇದಗುಡ್ಡ ತಾಲೂಕಿನ ತೋಗುಣಸಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಕೋಟೆಕಲ್ಲನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ಸದಸ್ಯರಾದ ಯಲಗುರ್ದಪ್ಪ ತೊಗಲಂಗಿ, ಸಂಗಪ್ಪ ಹಡಪದ, ಮಹಾಗುಂಡಪ್ಪ ಸುಂಕದ, ನಾಗಪ್ಪ ಮುರಗೋಡ, ಮಳಿಯಪ್ಪ ಹಾವಡಿ ಇತರರಿದ್ದರು.
ಗುಳೇದಗುಡ್ಡ ತಾಲೂಕಿನ ತೋಗುಣಸಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಕೋಟೆಕಲ್ಲನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹನಮಂತ ಮಾವಿನಮರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ಸದಸ್ಯರಾದ ಯಲಗುರ್ದಪ್ಪ ತೊಗಲಂಗಿ, ಸಂಗಪ್ಪ ಹಡಪದ, ಮಹಾಗುಂಡಪ್ಪ ಸುಂಕದ, ನಾಗಪ್ಪ ಮುರಗೋಡ, ಮಳಿಯಪ್ಪ ಹಾವಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹೇಳಿಕೆ
  • ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗಮನ
  • 6.70 ಕೋಟಿ ರೂ. ವೆಚ್ಚದ ಕಟ್ಟಡ

ಗುಳೇದಗುಡ್ಡ:

ಕೋಟೆಕಲ್ಲನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಈ ಭಾಗದ ರೈತರ ಅನುಕೂಲಕ್ಕಾಗಿ ರೈತರ ಉತ್ಪನ್ನಗಳ ಖರೀದಿ ಹಾಗೂ ಮಾರಾಟ ಕೇಂದ್ರ ಹಾಗೂ ಕೈಮಗ್ಗ ಉತ್ಪನ್ನಗಳ ಕೇಂದ್ರ, ಸಂಘದ ಶಾಖಾ ಕಚೇರಿಗಳ ಉದ್ಘಾಟನೆ ಕಾರ್ಯಕ್ರಮ ಆ.16 ರಂದು ಹಮ್ಮಿಕೊಳ್ಳಲಾಗಿದೆ ಎಂದು ಪಿಕೆಪಿಎಸ್ ಅಧ್ಯಕ್ಷ, ಜಿಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹೇಳಿದರು.

ತಾಲೂಕಿನ ತೋಗುಣಸಿ ಗ್ರಾಮದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 6.70 ಕೋಟಿ ರೂ. ವೆಚ್ಚದಲ್ಲಿ ತೋಗುಣಸಿ ಸಮೀಪ ನಿರ್ಮಿಸಿರುವ ಕೈಮಗ್ಗ ಉತ್ಪನ್ನಗಳ ಕೇಂದ್ರ, ಸಂಘದ ಶಾಖಾ ಕಚೇರಿಗಳ ಉದ್ಘಾಟನಾ ಕಾರ್ಯಕ್ರಮ ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದರು.
ಸಣ್ಣ ಕೈಗಾರಿಕಾ ಸಚಿವ ವಿಜಯಾನಂದ ಕಾಶಪ್ಪನವರ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಭೀಮಸೇನ ಚಿಮ್ಮನಕಟ್ಟಿ ಸೇರಿ ವಿವಿಧ ನಾಯಕರು ಪಾಲ್ಗೊಳ್ಳಲಿದ್ದಾರೆ. ಅಂದಾಜು 15 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಂಘದ ಷೇರುದಾರರು, ಗ್ರಾಹಕರು, ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.
ಕೃಷಿ ಪತ್ತಿನ ಸಂಘದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 3.15 ಕೋಟಿ ರೂ., ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದಿಂದ 2.88 ಕೋಟಿ ರೂ., ಹಾಗೂ ಸಂಘದಿಂದ 67 ಲಕ್ಷ ರೂ.ದಂತೆ ಒಟ್ಟು 6.70 ಕೋಟಿ ರೂ., ವೆಚ್ಚದಲ್ಲಿ ತೋಗುಣಶಿ ಎಲ್.ಟಿ. ಗ್ರಾಮದ ಹತ್ತಿರ 1860 ಚ.ಮೀ. ಅಳತೆಯ ಕೃಷಿ ಉತ್ಪನ್ನಗಳ ಒಣಗಿಸುವ ಕೇಂದ್ರ, 5000 ಮೆ.ಟನ್ ಸಾಮರ್ಥ್ಯದ ಗೋದಾಮು, 60 ಮೆಟ್ರಿಕ್ ಟನ್ ಸಾಮರ್ಥ್ಯದ ವೇ ಬ್ರಿಡ್ಜ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ಸದಸ್ಯರಾದ ಯಲಗುರ್ದಪ್ಪ ತೊಗಲಂಗಿ, ಸಂಗಪ್ಪ ಹಡಪದ, ಮಹಾಗುಂಡಪ್ಪ ಸುಂಕದ, ನಾಗಪ್ಪ ಮುರಗೋಡ, ಮಳಿಯಪ್ಪ ಹಾವಡಿ, ಯಮನಪ್ಪ ರಾಠೋಡ, ದ್ಯಾಮಣ್ಣ ಗದ್ದನಕೇರಿ, ಸಂತೋಷ ತಿಪ್ಪಾ, ಪ್ರಕಾಶ ಕಳ್ಳಿಗುಡ್ಡ, ದಂಡಪ್ಪ ಅಬಕಾರಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ ಕಲ್ಯಾಣಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net