ಹುನಗುಂದ ಸಮೀಪದ ಅಮರಾವತಿ ಸರ್ಕಾರಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳೊಂದಿಗೆ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಹುನಕುಂಟಿ, ಮುಖ್ಯ ಶಿಕ್ಷಕ ಎಂ.ಬಿ. ಗೂಳಿ, ನೌಕರರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಾಲಾ ಸುಧಾರಣೆ ಸಮಿತಿ ಅಧ್ಯಕ್ಷ ಬಸವರಾಜ ಹುನಕುಂಟಿ ಹೇಳಿಕೆ
ಕ್ಲಸ್ಟರ್ ಮಟ್ಟದ ಕ್ರೀಡಾಕೂಟ
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯದ ಜೊತೆಗೆ ಕ್ರೀಡೆಗೂ ಸಮಾನ ಪ್ರಾಶಸ್ತ್ಯ ನೀಡಿ.
ಹುನಗುಂದ : ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯದ ಜೊತೆಗೆ ಕ್ರೀಡೆಗೂ ಸಮಾನ ಪ್ರಾಶಸ್ತ್ಯ ನೀಡಿ, ಬಾಲ್ಯದಿಂದಲೇ ಕ್ರೀಡೆಗಳ ಬಗ್ಗೆ ಆಸಕ್ತಿ ತೋರಬೇಕೆಂದು ಶಾಲಾ ಸುಧಾರಣೆ ಸಮಿತಿ ಅಧ್ಯಕ್ಷ ಬಸವರಾಜ ಹುನಕುಂಟಿ ಹೇಳಿದರು.
ಸಮೀಪದ ಅಮರಾವತಿ ಪಿಎಂಎಸ್‌ಆರ್‌ಐ ಕೆಪಿಎಸ್ ಶಾಲೆಯಲ್ಲಿ ನಡೆದ ಬಿಂಜವಾಡಗಿ ಕ್ಲಸ್ಟರ್ ಮಟ್ಟದ 14 ವರ್ಷದೊಳಗಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಿಂದ ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ, ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ತಂಡದ ಮನೋಭಾವ ಬೆಳೆಯುತ್ತದೆ ಎಂದರು.
ಮುಖ್ಯ ಶಿಕ್ಷಕ ಎಂ.ಬಿ. ಗೂಳಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಸ್ವಲ್ಪ ಸಮಯವನ್ನು ಕ್ರೀಡೆಗಳಿಗೆ ಮೀಸಲಿಡಬೇಕು. ಇದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಉಲ್ಲಾಸವೂ ದೊರೆಯುತ್ತದೆ. ಶಾಲೆಗಳಲ್ಲಿರುವ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಒತ್ತು ನೀಡಬೇಕು ಎಂದರು.
ವೈಯಕ್ತಿಕ 8 ಕ್ರೀಡೆಗಳು, 4 ಗುಂಪು ಆಟಗಳಿಗೆ 11 ಶಾಲೆಗಳಿಂದ 11 ತಂಡಗಳು ಭಾಗವಹಿಸಿದ್ದವು. ಖೋಖೋ ಕ್ರೀಡೆಯಲ್ಲಿ ಅಮರಾವತಿ ಬಾಲಕ ಮತ್ತು ಬಾಲಿಕೆಯರ ತಂಡ ಪ್ರಥಮ, ಕಬಡ್ಡಿಯಲ್ಲಿ ಜಾಲಕಮಲದಿನ್ನಿ ಜಿಎಚ್‌ಪಿಎಸ್ ಶಾಲೆ ಬಾಲಿಕೆಯರ ತಂಡ ಪ್ರಥಮ, ಥ್ರೋಬಾಲ್‌ನಲ್ಲಿ ಕಡಿವಾಲ ಜಿಎಚ್‌ಪಿಎಸ್ ಶಾಲೆ ಬಾಲಕರ ತಂಡ ಪ್ರಥಮ, ಬಾಲಿಕೆಯರ ಥ್ರೋಬಾಲ್‌ನ್ನಿ ತಿಮ್ಮಾಪುರ ಜಿಎಚ್‌ಪಿಎಸ್ ಶಾಲೆ ತಂಡ ಪ್ರಥಮ ಸ್ಥಾನ ಪಡೆದು ವಲಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಎಸ್‌ಡಿಎಂಸಿ ಸದಸ್ಯ ರಮೇಶ ಗೌಡರ, ಶಿಕ್ಷಕ ರಾಜ ಸುಂಕದ, ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎನ್, ತೋಳಮಟ್ಟಿ, ಸಿ.ವೈ, ಕುರಿ, ನಿಂಗಪ್ಪ ದಾದ್ಮಿ, ಎಂ.ಎಸ್. ಸೋಲಾಪುರ, ಎಂ.ಎಚ್ ದಾದ್ಮಿ, ಐ.ಬಿ. ಆದಾಪುರ ಇತರರಿದ್ದರು.