ಗೆಲ್ಲುವ ಮನಸ್ಸಿದ್ದರೆ ಯಶಸ್ಸು ನಿಶ್ಚಿತ

 ಬನಹಟ್ಟಿಯ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಬಸಯ್ಯ ಮಹಾಸ್ವಾಮೀಜಿ ಸನ್ಮಾನಿಸಿದರು. ಎಸ್.ಬಿ. ಚಳಗೇರಿ, ನಾಮದೇವ ಉಪ್ಪಾರ, ಗೋಪಾಲ ಪೂಜಾರಿ ಸೇರಿ ಗಣ್ಯರು ಉಪಸ್ಥಿತರಿದ್ದರು.
ಬನಹಟ್ಟಿಯ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅಗ್ನಿವೀರರಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಬಸಯ್ಯ ಮಹಾಸ್ವಾಮೀಜಿ ಸನ್ಮಾನಿಸಿದರು. ಎಸ್.ಬಿ. ಚಳಗೇರಿ, ನಾಮದೇವ ಉಪ್ಪಾರ, ಗೋಪಾಲ ಪೂಜಾರಿ ಸೇರಿ ಗಣ್ಯರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾ ನಿರ್ದೇಶಕ ಎಸ್.ಬಿ. ಚಳಗೇರಿ ಹೇಳಿಕೆ
  • ಸನ್ಮಾನ ಕಾರ್ಯಕ್ರಮ
  • ಜ್ಞಾನ, ಪರಿಶ್ರಮ ಮತ್ತು ದಢ ಮನೋಭಾವ ಇದ್ದರೆ ಯಾವುದೇ ಗುರಿಯನ್ನೂ ಸಾಧಿಸಬಹುದು.
ರಬಕವಿ/ಬನಹಟ್ಟಿ: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಆತ್ಮವಿಶ್ವಾಸ ಮತ್ತು ಸ್ಪಷ್ಟ ಗುರಿ ಅಗತ್ಯ. ಗೆಲ್ಲಬೇಕೆನ್ನುವ ದಢ ಸಂಕಲ್ಪ ಇದ್ದರೆ ಯಶಸ್ಸು ನಿಶ್ಚಿತವಾಗಿಯೇ ದೊರೆಯುತ್ತದೆ ಎಂದು ಹುನಗುಂದ ವಸ್ತ್ರದ ಪದವಿ ಕಾಲೇಜಿನ ಕ್ರೀಡಾ ನಿರ್ದೇಶಕ ಎಸ್.ಬಿ. ಚಳಗೇರಿ ಹೇಳಿದರು.
ನಗರದ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ಜಿ.ಎಸ್. ಕೋಚಿಂಗ್ ವತಿಯಿಂದ ಅಗ್ನಿವೀರರಾಗಿ ಆಯ್ಕೆಯಾದ 270ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜ್ಞಾನ, ಪರಿಶ್ರಮ ಮತ್ತು ದಢ ಮನೋಭಾವ ಇದ್ದರೆ ಯಾವುದೇ ಗುರಿಯನ್ನೂ ಸಾಧಿಸಬಹುದು. ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯವಾಗುತ್ತದೆ ಎಂದರು.
ಐಟಿಬಿಪಿ ಕಮಾಂಡೋ ಮಹಾಂತೇಶ ಗೌಡರ ಮಾತನಾಡಿ, ಜಿ.ಎಸ್. ಕೋಚಿಂಗ್ ಸಂಸ್ಥೆಯು ಸೈನಿಕ ತರಬೇತಿಯಲ್ಲಿ ಮಾದರಿಯಾಗಿ ಹೊರಹೊಮ್ಮಿದ್ದು, ದಾಖಲೆ ಪ್ರಮಾಣದಲ್ಲಿ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿರುವುದು ಶ್ಲಾಘನೀಯ ಎಂದರು.
ಅಗ್ನಿವೀರ ಯೋಜನೆಯಡಿ ಆಯ್ಕೆಯಾದವರಿಗೆ ನಾಲ್ಕು ವರ್ಷಗಳಲ್ಲಿ ಸುಮಾರು 27.50 ಲಕ್ಷ ರೂ. ವೇತನ ಸಿಗಲಿದ್ದು, ಶೇ. 25ರಷ್ಟು ಅಭ್ಯರ್ಥಿಗಳಿಗೆ ಮುಂದುವರಿದ ಸೇವಾ ಅವಕಾಶ ಲಭ್ಯವಿದೆ ಎಂದು ಮಾಹಿತಿ ನೀಡಲಾಯಿತು.
ಬಬಲಾದಿಮಠದ ಬಸಯ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಮದೇವ ಉಪ್ಪಾರ ಅಧ್ಯಕ್ಷತೆ ವಹಿಸಿದ್ದರು. ಗೋಪಾಲ ಪೂಜಾರಿ, ಚೇತನ ಜೋಗನ್ನವರ, ನಂದು ಗಾಯಕವಾಡ, ಮಲ್ಲಿಕಾರ್ಜುನ ತುಂಗಳ, ರಶ್ಮಿ ಶಿರಗುಪ್ಪಿ ಸೇರಿ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net