ಶೋಷಿತರ ಪರ ಧ್ವನಿ ಎತ್ತಿ ಹೋರಾಡುವೆ

 ಬಾದಾಮಿಯ ಶ್ರೀ ಕುಮಾರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಭೋವಿ ಸಮಾಜದ ಸಂಘಟನಾ ಸಭೆಯಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಅಂದಪ್ಪ ಭೋವಿ, ಮುತ್ತು ಭೋವಿ, ಕೇಶವ ಭೋವಿ, ವಿಠ್ಠಲ ಭೋವಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಭರವಸೆ
  • ಭೋವಿ ಸಮಾಜದ ಸಂಘಟನಾ ಸಭೆ
  • ವಡ್ಡರ ಮತ್ತು ಭೋವಿ ಸಮಾಜ ಬೇರೆ ಬೇರೆಯಾಗಿದ್ದು, ಎಸ್‌ಸಿ ಪ್ರಮಾಣಪತ್ರ ನೀಡಬೇಕು
ಬಾದಾಮಿ: ನನ್ನ ಉಸಿರಿರುವರೆಗೂ ಸಾಮಾಜಿಕ ನ್ಯಾಯ, ಶೋಷಿತರ ಪರವಾಗಿ ಧ್ವನಿ ಎತ್ತಿ ಹೋರಾಡುತ್ತೇನೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.
ಪಟ್ಟಣದ ಶ್ರೀ ಕುಮಾರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಭೋವಿ ಸಮಾಜದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿ, ವಡ್ಡರ ಮತ್ತು ಭೋವಿ ಸಮಾಜ ಬೇರೆ ಬೇರೆಯಾಗಿದ್ದು, ಎಸ್‌ಸಿ ಪ್ರಮಾಣಪತ್ರ ನೀಡಬೇಕು ಎಂದು ಹೇಳಿದರು.
ಸಮಾಜದ ಅಧ್ಯಕ್ಷ ಅಂದಪ್ಪ ಭೋವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುತ್ತು ಭೋವಿ ಪ್ರಾಸ್ತಾವಿಕ ಮಾತನಾಡಿದರು.
ಕೇಶವ ಭೋವಿ, ವಿಠ್ಠಲ ಭೋವಿ, ಕಿಶೋರ ವಿಚಾಟೆ, ಸುಭಾಷ ಭೋವಿ, ಶಂಕರ ಭೋವಿ, ಹನುಮಂತ ರಾಯಪ್ಪ, ಯಲ್ಲಪ್ಪ ಭೋವಿ, ಲಕ್ಷ್ಮಣ ಭೋವಿ, ಶರಣಪ್ಪ ಗುಡಿಹಿಂದಿನ, ರಾಜಪ್ಪ, ಬೇಲೂರಪ್ಪ ಭೋವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net