ಬೆAಕಿಗೆ ಸಿಕ್ಕು ಮನೆಯಲ್ಲಿ ಪ್ರತಿಯೊಂದು ವಸ್ತು ಸುಟ್ಟು ಹೋಗಿವೆ. ಹಣ, ಒಡವೆ, ಪಾತ್ರೆ, ಪಗಡೆ, ದಾಖಲೆ ಪತ್ರಗಳು, ಬಟ್ಟೆ ಎಲ್ಲವೂ ಹೋಗಿರುವುದು, ಸೆಪ್ಟಂಬರ್ ೧೩ರಂದು ಮದುವೆ ಮಾಡಲು ಮನೆಯಲ್ಲಿ ಇಟ್ಟಿದ್ದ ಹಣ, ಬಂಗಾರ, ಬೆಳ್ಳಿ, ಮದುವೆ ಸೀರೆಗಳು ನಾಶ ಆಗಿರುವುದು ಇದೆ. ಇದೆಲ್ಲವೂ ಬಹಳ ನೋವು ತಂದಿದೆ. ಈಗಾಗಲೇ ಯಾವ ಯಾವ ಶೆಡ್‌ಗಳಲ್ಲಿ ಏನೆಲ್ಲ ಹಾನಿಯಾಗಿದೆ ಎಂದು ವರದಿ ಪಡೆದುಕೊಂಡು ಮುಖ್ಯಮಂತ್ರಿಗಳು ಸಲ್ಲಿಸುವೆ. ಆಗಿರುವ ಹಾನಿಗೆ ಪರಿಹಾರ ಒದಗಿಸುವುದಾಗಿ ಹೇಳಿದ ಸಚಿವರು, ಸುಟ್ಟು ಹೋಗಿರುವ ೨೮ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿ, ಜಿಲ್ಲಾಡಳಿತದಿಂದ ಸಂತ್ರಸ್ತರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದರು.