ಸರಣಿ ಕಳ್ಳತನಕ್ಕೆ ಬೆಚ್ಚಿ ಬಿದ್ದ ಹುನಗುಂದ ಜನ

ಹುನಗುಂದ ನಗರದ ಆಜಾದ್ ನಗರದಲ್ಲಿ ಕಳ್ಳತನ ನಡೆದ ಮನೆಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುನಗುಂದ ನಗರದ ಆಜಾದ್ ನಗರದಲ್ಲಿ ಕಳ್ಳತನ ನಡೆದ ಮನೆಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸರಣಿ ಕಳ್ಳತನ
  • ರೂ. 2.36 ಲಕ್ಷ ಮೌಲ್ಯದ ಬಂಗಾರ
  • ನಗದು ಕಳು
ಹುನಗುಂದ: ಸರಣಿ ಕಳ್ಳತನಕ್ಕೆ ಹುನಗುಂದ ಜನ ಬೆಚ್ಚಿ ಬಿದ್ದಿದ್ದಾರೆ.
ಇಲ್ಲಿನ ಆಜಾದ್ ನಗರದಲ್ಲಿ ಶನಿವಾರ ತಡರಾತ್ರಿ ಕಳ್ಳತನ ನಡೆದಿದ್ದು ಒಟ್ಟು ರೂ. 2.36 ಲಕ್ಷ ಮೌಲ್ಯದ ಬಂಗಾರ ಹಾಗೂ ನಗದು ಕಳುವಾಗಿದೆ.
ನಾಲ್ಕು ಮನೆಗಳ ಬೀಗ ಮುರಿದು, ಅವುಗಳಲ್ಲಿ ಎರಡು ಮನೆಗಳಲ್ಲಿ ಬಂಗಾರ ಮತ್ತು ನಗದು ಕಳ್ಳತನ ಮಾಡಲಾಗಿದೆ. ಅಜಮೀರ್ ಮನಿಯಾರ್ (39) ಅವರ ಮನೆಯ ಬಾಗಿಲಿನ ಬೀಗ ಮುರಿದು ಬಿರುವಿನಲ್ಲಿ ಇಟ್ಟಿದ್ದ 8 ಗ್ರಾಂ ಬಂಗಾರ, 290 ಗ್ರಾಂ ಬೆಳ್ಳಿ ಆಭರಣಗಳು ಮತ್ತು 20 ಸಾವಿರ ರೂ.ನಗದು ದೋಚಲಾಗಿದೆ.
ಇದೇ ವೇಳೆ ಮಾನ್ವವರ್ ಪಾಷಾ ಇನಾಮಾದರ (49) ಅವರ ಮನೆಗೂ ನುಗ್ಗಿ ಬಿರುವಿನಲ್ಲಿದ್ದ 5 ಗ್ರಾಂ ಬಂಗಾರದ ಕಿವಿಯೋಲೆ ಹಾಗೂ 1.20 ಲಕ್ಷ ರೂ.ನಗದು ಕದ್ದೊಯ್ದಿದ್ದಾರೆ
.
ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಕಳ್ಳರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಕಾಸ್ತ್ರ ಹಿಡಿದು ಸಂಚರಿಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿವೆ. ಈ ಕುರಿತು ಸೋಮವಾರ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳು

ಆಜಾದ ನಗರದಲ್ಲಿ ಕಳ್ಳತನ ಇದೇ ಮೊದಲೇನಲ್ಲ. ಕಳೆದ ಎರಡ್ಮೂರು ತಿಂಗಳಲ್ಲಿ ನಾಲ್ಕು ಕಳ್ಳತನದ ಪ್ರಕರಣಗಳು ನಡೆದಿವೆ. ಅದರಲ್ಲಿ ಎರಡು ಬಾರಿ ಪೊಲೀಸ್ ಸಿಬ್ಬಂದಿ ಮನೆಗಳಲ್ಲೇ ಕಳ್ಳತನ ನಡೆದಿದೆ. ಸಾರ್ವಜನಿಕರು ಭಯದ ವಾತಾವರಣದಲ್ಲಿದ್ದಾರೆ. ಪೊಲೀಸರು ರಾತ್ರಿ ಗಸ್ತು ಹೆಚ್ಚಿಸಬೇಕೆಂಬ ಒತ್ತಾಯ ಜೋರಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net