ಹುನಗುಂದ: ತಾಲೂಕಿನಲ್ಲಿನ ರಂಗಕರ್ಮಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯವಾಗಿದೆ , ರಂಗ ಚಟುವಟಿಕೆಗಳು ಹೀಗೆ ನಿರಂತರವಾಗಿ ಮುಂದುವರಿಯಬೇಕು, ಅಂತಹ ವಾತಾವರಣವನ್ನು ನಿರ್ಮಿಸುವ ಕಾರ್ಯವಾಗಬೇಕಾಗಿದೆ ಎಂದು ವಕೀಲ ಮಹಾಂತೇಶ ಅವಾರಿ ಹೇಳಿದರು.
ನಗರದ ರಾಘವೇಂದ್ರ ಮಠದಲ್ಲಿ ರಂಗ ಸಂಘಟನೆಗಳು ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹುನಗುಂದ ರಂಗ ಚಟುವಟಿಕೆಗಳಿಗೆ ಹೆಸರಾದ ನಗರವಾಗಿದೆ. ಬಹುದಿನಗಳಿಂದಲೂ ಇಲ್ಲಿ ವೃತ್ತಿ ಹಾಗೂ ಹವ್ಯಾಸಿ ರಂಗ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅನಂತ ಬಬಲೇಶ್ವರ ಅವರು ವೃತ್ತಿರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.ಅವರೊಬ್ಬ ಒಳ್ಳೆ ಸಂಘಟಿಕರು. ರಂಗ ಚಟುವಟಿಕೆಗಳಿಗೆ ಸಹಕಾರ ನೀಡಿದ್ದಾರೆ. ಅಂಥವರು ಇಂದು ಶ್ರೇಷ್ಠ ನಾಟಕಗಾರ ಪಿ. ಬಿ. ಧುತ್ತರಗಿ ಟ್ರಸ್ಟ್ ನ ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷದ ತಂದಿದೆ ಎಂದರು.
ಪಿ.ಬಿ. ಧುತ್ತರಗಿ ಟ್ರಸ್ಟ್ ನ ಅಧ್ಯಕ್ಷ ಎಸ್. ಕೆ ಕೊನೆಸಾಗರ, ಮಹಾಂತೇಶ ಹಳ್ಳೂರ, ವ್ಯಾಸ ತೀರ್ಥ ಜೋಷಿ ಅನಂತ ಮಾತನಾಡಿದರು. ಸಂಗು ಮಠ, ವಾದಿರಾಜ ಗುಡ್ಡದ, ವಿಜಯಕುಮಾರ್ ಕುಲಕರ್ಣಿ ಉಪಸ್ಥಿತರಿದ್ದರು.